ನಾಳೆ (ಮಾ.29) ತೆಗ್ಗು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

0

ಪುತ್ತೂರು: : ಸುಮಾರು 300 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಅತ್ಯಂತ ಕಾರಣಿಕತೆಯಿಂದ ಕೂಡಿರುವ ಕೆಯ್ಯೂರು ಗ್ರಾಮದ ತೆಗ್ಗು ಶಾಲಾ ಬಳಿಯ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.29 ರಂದು ನಡೆಯಲಿದೆ.

ಬೆಳಿಗ್ಗೆ ಗಣಪತಿ ಹೋಮ ನಡೆದು ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮ, ರಾತ್ರಿ ಮೇಲರಿಗೆ ಅಗ್ನಿಸ್ಪರ್ಶ ಕಾರ್ಯಕ್ರಮ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಬಳಿಕ ಕುಳಿಚ್ಚಾಟು ದೈವದ ನರ್ತನ ಸೇವೆ ನಡೆಯಲಿದೆ. ಮಾ.30 ರಂದು ಪ್ರಾತಃಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆದು ಬೆಳಿಗ್ಗೆ ಗುಳಿಗ ಕೋಲ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವದ ಗಂಧ ಪ್ರಸಾದದೊಂದಿಗೆ ಅನ್ನಪ್ರಸಾದ ಸ್ವೀಕರಿಸುವಂತೆ ಬಾಬು ತೆಗ್ಗು ಮತ್ತು ಕುಟುಂಬಸ್ಥರು ಮತ್ತು ಊರಪರವೂರ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.

ತುಳು ನಾಟಕ, ನೃತ್ಯ ಸಂಭ್ರಮ
ರಾತ್ರಿ ಊರ ಹಾಗೂ ಪರವೂರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯಪ್ರಶಸ್ತಿ ಪುರಸ್ಕೃತ ನೃತ್ಯತಂಡ ಮಂಜು ಬ್ರದರ‍್ಸ್ ಸುಳ್ಯ ಇವರಿಂದ ನೃತ್ಯ ಕಾರ್ಯಕ್ರಮ, ಮಧ್ಯರಾತ್ರಿ ಶಾರದಾ ಆರ್ಟ್ಸ್ ತಂಡ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸುವ ಜಿಲ್ಲಾ ಪ್ರಶಸ್ತಿ ವಿಜೇತ ರವಿ ರಾಮಕುಂಜ ನಾಯಕತ್ವದಲ್ಲಿ ‘ಮಲ್ಲ ಸಂಗತಿಯೇ ಅತ್ತ್’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here