ಏ.1, 2: ಪಾದೆಕರ್ಯ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ವಾರ್ಷಿಕ ಮಹಾಪೂಜೆ, ದೈವಗಳ ನೇಮೋತ್ಸವ

0

ಬಡಗನ್ನೂರುಃ ಪಾದೆಕರ್ಯ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ವಾರ್ಷಿಕ ಮಹಾಪೂಜೆ ಮತ್ತು ದೈವಗಳ ನೇಮೋತ್ಸವವು ಏ. 1 ಮತ್ತು 2 ರಂದು ಪಾದೆಕರ್ಯ ಮನೆಯಲ್ಲಿ ನಡೆಯಲಿರುವುದು.

ಆ ಪ್ರಯುಕ್ತ ಭಕ್ತಾದಿಗಳಾದ ತಾವೆಲ್ಲರೂ ಆಗಮಿಸಿ ಶ್ರೀ ಮುಡಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಹಾಗೂ ದೈವಗಳ ಕೃಪೆಗೆ ಪಾತ್ರರಾಗುವಂತೆ ಶ್ರೀಮತಿ ಮತ್ತು ಶ್ರೀ ವಿಷ್ಣು ಭಟ್ ಮತ್ತು ಮಕ್ಕಳು ಪಾದೆಕರ್ಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾರ್ಯಕ್ರಮಗಳು:-

 ಏ.1 ರಂದು ಬೆಳಗ್ಗೆ ಗಂ 7 ಕ್ಕೆ ಗಣಪತಿ ಹೋಮ, 9 ಕ್ಕೆ ನಾಗ ದೇವರಿಗೆ ತಂಬಿಲ ಸೇವೆ, 12.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂ. 6 ಕ್ಕೆ ಭಂಡಾರ ತೆಗೆಯುವುದು, ರಾತ್ರಿ 7 ಕ್ಕೆ ತೊಂಡಂಗಲ್,  8 ಕ್ಕೆ  ಮೇಲೇರಿಗೆ  ಆಗ್ನಿ ಸ್ಪರ್ಶ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.  ರಾತ್ರಿ 9 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10.30 ರಿಂದ ಪೊಟ್ಟ ಭೂತದ ನೇಮ, ದೇವತೆ, ವರ್ಣಾರ ಪಂಜುರ್ಲಿ ದೈವಗಳ ನೇಮ ನಡೆಯಲಿರುವುದು.

ಏ. 2 ರಂದು ಬೆಳಗ್ಗೆ 6 ರಿಂದ ಶ್ರೀ ರಕ್ತೇಶ್ವರಿ ದೈವದ ನೇಮ ಪ್ರಸಾದ ವಿತರಣೆ ನಡೆಯಲಿದೆ.

LEAVE A REPLY

Please enter your comment!
Please enter your name here