




ನೆಲ್ಯಾಡಿ: ನೆಲ್ಯಾಡಿಯನ್ನು ಕೇಂದ್ರೀಕರಿಸಿಕೊಂಡ ಅನಿವಾಸಿ ಭಾರತೀಯರ ಸಂಘಟನೆಯಾದ ಗಲ್ಫ್ ನೆಲ್ಯಾಡಿ ಫ್ರೆಂಡ್ಸ್ (GNF) ಇದರ ವಾರ್ಷಿಕ ಮಹಾಸಭೆ (ಗೂಗಲ್ ಮೀಟ್ ಮೂಲಕ) ನಡೆಯಿತು.




ಸಂಸ್ಥೆಯ ಗೌರವಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ದಾರಿಮಿ ನೆಲ್ಯಾಡಿ ಅವರು ದುಆ ನೆರವೇರಿಸಿ ಸಭೆಗೆ ಚಾಲನೆ ನೀಡಿದರು. ಹಾಲಿ ಅಧ್ಯಕ್ಷರಾದ ಕಮಲ್ ನೆಲ್ಯಾಡಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಅಝರ್ ನೆಲ್ಯಾಡಿ ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು. ನಂತರ 2024-25ನೇ ಸಾಲಿನ ಕಾರ್ಯಕಾರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಅಬ್ದುಲ್ ರಹ್ಮಾನ್ ದಾರಿಮಿಯವರ ನೇತೃತ್ವದಲ್ಲಿ 2025-26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಶಾಹುಲ್ ಹಮೀದ್ ನೆಲ್ಯಾಡಿ (ಯುಎಇ), ಪ್ರಧಾನ ಕಾರ್ಯದರ್ಶಿಯಾಗಿ ಅಝರ್ ನೆಲ್ಯಾಡಿ (ಯುಎಇ) ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಶ್ರಫ್ ಜಮಾಲಿಯ (ಸೌದಿ ಅರೇಬಿಯಾ), ಸುಲೈಮಾನ್ ಕೊಡ್ಲಿಪೇಟೆ (ಕತಾರ್), ಕಾರ್ಯದರ್ಶಿಗಳಾದಿ ರಶೀದ್ ಮೊರಂಕಾಲ (ಸೌದಿ ಅರೇಬಿಯಾ), ಜಲೀಲ್ ಮೊರಂಕಾಲ (ಬಹರೈನ್), ಖಜಾಂಜಿಯಾಗಿ ರಫೀಕ್ ಪ್ರಿಯದರ್ಶಿನಿ (ಯುಎಇ) ಹಾಗೂ ಮಾಧ್ಯಮ ವಕ್ತಾರರಾಗಿ ಶಾಕಿರ್ ಹಕ್ ನೆಲ್ಯಾಡಿ (ಸೌದಿ ಅರೇಬಿಯಾ) ಆಯ್ಕೆಯಾದರು.





ವಿವಿಧ ದೇಶಗಳನ್ನು ಪ್ರತಿನಿಧಿಸುವ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಅಬ್ದುಲ್ ಕಮಾಲ್(ಯುಎಇ), ಅಬ್ದುರ್ರಹ್ಮಾನ್(ಕುವೈಟ್) ಅಶ್ರಫ್ ಎಂ.ಕೆ.(ಯುಎಇ), ಇಲ್ಯಾಸ್ ಕರಾಯ(ಕತಾರ್), ನವಾಝ್ ಸುಜೈ(ಯುಎಇ), ಮದನಿ ಸಿ.ಕೆ(ಯುಎಇ), ಝಕರಿಯ ಎನ್.ಎಸ್(ಸೌದಿ ಅರೇಬಿಯಾ), ರಫೀಕ್ ಮೊರಂಕಲ(ಕತಾರ್), ನಾಸಿರ್ ಕೆರೆ(ಯುಎಇ), ಬದ್ರುದ್ದೀನ್ ಮುನೀರ್ ಎನ್.ಕೆ.(ಯುಎಇ) ಅವರನ್ನು ಆಯ್ಕೆ ಮಾಡಲಾಯಿತು, ಮುಂದಿನ ಸಾಲಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. ಅಬ್ದುಲ್ ಕಮಾಲ್ ಸ್ವಾಗತಿಸಿ, ಅಝರ್ ನೆಲ್ಯಾಡಿ ವಂದಿಸಿದರು.









