ವಿಟ್ಲ-ಬೊಳಂತಿಮೊಗರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

0

ಅಶೋಕ್ ರೈ ಶಾಸಕರಾದರೆ ಪ್ರತೀ ಬಡವರಿಗೂ ಮನೆ ಗ್ಯಾರಂಟಿ: ಶಕುಂತಳಾ ಶೆಟ್ಟಿ

ಪುತ್ತೂರು: ಅಶೋಕ್ ರೈ ಪುತ್ತೂರು ಶಾಸಕರಾದರೆ ಮನೆ ಇಲ್ಲದ ಬಡವರಿಗೆ ಮನೆ ದೊರೆಯುವುದು ಗ್ಯಾರಂಟಿ. ಇದಕ್ಕೆ ನಾನೇ ಜವಾಬ್ದಾರಿ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭರವಸೆ ನೀಡಿದರು.

ವಿಟ್ಲ ಬೊಳಂತಿಮೊಗರಿನಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಆಶ್ರಯ ಯೋಜನೆಯಲ್ಲಿ ಸರಕಾರ ಕೊಡುವ ಮನೆಯನ್ನು ಪುತ್ತೂರಿಗೆ ಹೆಚ್ಚು ತರಲಿದ್ದಾರೆ. ಈಗಾಗಲೇ ಸಾವಿರಾರು ಬಡ ಕುಟುಂಬಗಳು ಗ್ರಾ ಪಂ.ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿ ಸಲ್ಲಿಸಿದ ಬಡವರಿಗೆ ಇನ್ನೂ ಮನೆ ಕೊಟ್ಟಿಲ್ಲ. ಬಿಜೆಪಿ ಸರಕಾರ ಬಸವ ವಸತಿ ಸೇರಿದಂತೆ ಎಲ್ಲಾ ವಸತಿ ಯೋಜನೆಯನ್ನು ಮೂಲೆಗುಂಪು ಮಾಡಿದೆ. ಬಡವರಿಗೆ ಮನೆ ಕೊಡುವ ಬಸವ ವಸತಿ ಯೋಜನೆ ಜಾರಿಗೆ ಮಾಡಿದ್ದು ಸಿದ್ದರಾಮಯ್ಯ ಸರಕಾರ. ನಾನು ಶಾಸಕಳಾಗಿದ್ದ ವೇಳೆ 1000ಕ್ಕೂ‌ ಮಿಕ್ಕಿ ಮನೆ ಕೊಡಲಾಗಿತ್ತು. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು ಅಶೋಕ್ ರೈ ಶಾಸಕರಾಗಿದ್ದಲ್ಲಿ ಪುತ್ತೂರು ಜನತೆಯ ಎಲ್ಲಾ ಬೇಡಿಕೆಗಳು ಈಡೇರಲಿದೆ. ಪ್ರತೀಯೊಬ್ಬರೂ ತಪ್ಪದೇ ಕಾಂಗ್ರೆಸ್ ಗೆ ಮತ ಚಲಾಯಿಸಿ ಎಂದು‌ ಮನವಿ ಮಾಡಿದರು.

ವೇದಿಕೆಯಲ್ಲಿ ಅಭ್ಯರ್ಥಿ ಅಶೋಕ್ ರೈ , ಮುಖಂಡರಾದ ಡಾ.ರಾಜಾರಾಂ ಕೆ ಬಿ, ಮಹೇಶ್ ರೈ ಅಂಕೊತ್ತಿಮಾರ್, ಎಂ ಎಸ್ ಮಹಮ್ಮದ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here