ಉಪ್ಪಿನಂಗಡಿ: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಭರ್ಜರಿ ರೋಡ್‌ ಶೋ

0

ಹನುಮ- ಟಿಪ್ಪು ಭಕ್ತರ ನಡುವಿನ ಹೋರಾಟ: ಕೋಟ ಶ್ರೀನಿವಾಸ ಪೂಜಾರಿ

ಉಪ್ಪಿನಂಗಡಿ: ಅಧಿಕಾರಕ್ಕೆ ಬಂದ್ರೆ ಬಜರಂಗದಳವನ್ನು ನಿಷೇಧಿಸುವ ಕುರಿತು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಅವರು ಹೇಳಿಕೆ ನೀಡಿದ್ದು, ಆದ್ದರಿಂದ ಈ ಬಾರಿಯ ಚುನಾವಣೆ ಹನುಮ ಮತ್ತು ಟಿಪ್ಪು ಭಕ್ತರ ನಡುವಿನ ಹೋರಾಟವಾಗಿದೆ. ರಾಷ್ಟ್ರ ಮೊದಲೆಂದು ಹೋರಾಟ ಮಾಡುವ ಪಕ್ಷ ಹಾಗೂ ಭಯೋತ್ಪಾದನಾ ಕೃತ್ಯಗಳನ್ನು ಬೆಂಬಲಿಸುವ ಪಕ್ಷದ ವಿರುದ್ಧದ ಹೋರಾಟವಾಗಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯನ್ನು ಬಿಟ್ಟರೆ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂಬುದನ್ನು ನಾವು ಯೋಚಿಸಬೇಕಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.


ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರ ಪರ ಉಪ್ಪಿನಂಗಡಿಯಲ್ಲಿ ರೋಡ್ ಶೋ ನಡೆಸಿ, ಬಳಿಕ ಬಸ್ ನಿಲ್ದಾಣದ ಬಳಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತವಾಧಿಯಲ್ಲಿ ಭಾರತವು ಭಯೋತ್ಪಾದನಾ ದೇಶವಾಗಿತ್ತು. ಆದರೆ ನರೇಂದ್ರ ಮೋದಿ ಬಂದ ಬಳಿಕ ಭಾರತವು ಶಕ್ತಿಶಾಲಿ, ಸ್ವಾವಲಂಬಿಯ ದೇಶವಾಗಿ ಬದಲಾಗಿದ್ದು, ಭಾರತವು ವಿಶ್ವಗುರುವಾಗುತ್ತಿದೆ. ರೈತಾಪಿ ವರ್ಗಕ್ಕೆ ಕಿಸಾನ್ ಸಮ್ಮಾನ್ ಯೋಜನೆ, ಹಿರಿಯ ನಾಗರಿಕರಿಗೆ ಸಂಥ್ಯಾ ಸುರಕ್ಷಾ ಯೋಜನೆ, ಹೆಣ್ಮಕ್ಕಳಿಗಾಗಿ ಭಾಗ್ಯಲಕ್ಷ್ಮೀ ಯೋಜನೆ ಇಂತಹ ಹತ್ತು ಹಲವು ಯೋಜನೆಗಳನ್ನು ಬಿಜೆಪಿ ಜಾರಿಗೆ ತಂದಿದ್ದು, ಇದನ್ನು ಜಾರಿಗೆ ತರುವ ಮುನ್ನ ಬಿಜೆಪಿ ಯಾರಿಗೂ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ. ಆದರೆ ಕಾಂಗ್ರೆಸ್ ಅಧಿಕಾರ ಸಿಗುವ ಮೊದಲೇ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದು, ಇದರ ಗ್ಯಾರಂಟಿ ಕಾರ್ಡ್ ಚೈನಾದ ಉಪಕರಣಗಳಿಗೆ ನೀಡುವ ಗ್ಯಾರಂಟಿ ಕಾರ್ಡ್‌ನಂತೆ ಎಂದು ಲೇವಡಿ ಮಾಡಿದರಲ್ಲದೆ, ಬಿಜೆಪಿಯ ಗೆಲುವು ಭಾರತವನ್ನು ವಿಶ್ವಗುರುವಾಗಿಸಿದ ಮೋದಿಯವರ, ವಿಚಾರವಂತ ಅಮಿತ್ ಶಾ ಅವರ, ಯೋಗಿಯವರ ಹಾಗೂ ಹಿಂದುತ್ವದ ಗೆಲುವಾಗಲಿದೆ. ಆದ್ದರಿಂದ ಪುತ್ತೂರಿನಲ್ಲಿ ಬಿಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಬೇಕು ಎಂದು ವಿನಂತಿಸಿದರು.


ಮಾಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ್ ತಂತ್ರಿ ಮಾತನಾಡಿ, ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್‌ಗೆ ಬಜರಂಗದಳ ನಿಷೇಧದ ಹುಚ್ಚು ಹಿಡಿದಿದ್ದು, ಆದರೆ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಜರಂಗಿಗಳೇ ಬರ್‍ತಾರೆ. ಮೇ ೧೩ರಂದು ಬೀದಿ ಬೀದಿಯಲ್ಲಿ ಕೇಸರಿ ಶಾಲಿನೊಂದಿಗೆ ವಿಜಯೋತ್ಸವವನ್ನು ಆಚರಿಸುತ್ತಾರೆ. ಪ್ರಪಂಚವನ್ನೇ ಪ್ರೀತಿಸುವ ಕಾರ್ಯಕರ್ತರಿದ್ದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮಾತ್ರ. ಧರ್ಮ ರಕ್ಷಣೆಗಾಗಿ, ಧರ್ಮದ ಉಳಿವಿಗಾಗಿ ಬಿಜೆಪಿಯನ್ನು ಗೆಲ್ಲಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಪುತ್ತೂರಿನಲ್ಲಿಯೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದರು.


ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮಾತನಾಡಿ, ಉತ್ತಮ ಆಡಳಿತ ನೀಡಲು ನಾನು ಬದ್ಧಳಾಗಿದ್ದು, ನನಗೆ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಶಾಸಕ ಸಂಜೀವ ಮಠಂದೂರು, ಬಿಜೆಪಿ ದ.ಕ. ಜಿಲ್ಲಾ ಕಾರ್ಯದರ್ಶಿ ರಾಮದಾಸ್ ಭಟ್, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ್, ಪ್ರಮುಖರಾದ ಸುನೀಲ್ ಕುಮಾರ್ ದಡ್ಡು, ಸುರೇಶ್ ಅತ್ರೆಮಜಲು, ಮುಕುಂದ ಗೌಡ ಬಜತ್ತೂರು, ರಾಮಚಂದ್ರ ಮಣಿಯಾಣಿ, ಪುರುಷೋತ್ತಮ ಮುಂಗ್ಲಿಮನೆ, ಜಯಂತ ಪೊರೋಳಿ, ಚಂದ್ರಶೇಖರ ಮಡಿವಾಳ, ಪ್ರಸನ್ನ ಪೆರಿಯಡ್ಕ, ಪ್ರಹ್ಲಾದ್ ಪೆರಿಯಡ್ಕ, ಹೊನ್ನಪ್ಪ ಗೌಡ ಪಂಚೇರು, ಅಜಿತ್ ಕುಮಾರ್ ರೈ, ಸಂತೋಷ್ ಕುಮಾರ್ ಪಂರ್ದಾಜೆ, ಆನಂದ ಗೌಡ ಕುಂಟಿನಿ, ಸಹಜ್ ರೈ ಬಳೆಜ್ಜ, ರವಿನಂದನ್ ಹೆಗ್ಡೆ, ಜಗದೀಶ್ ಶೆಟ್ಟಿ ಉಪ್ಪಿನಂಗಡಿ, ಧನಂಜಯ ನಟ್ಟಿಬೈಲು, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಶಿವಪ್ಪ ಪೆರ್ನೆ, ಶಿವರಾಮ ನೆಡ್ಚಿಲ್, ಪ್ರಶಾಂತ್ ಪೆರಿಯಡ್ಕ, ಜಯಗೋವಿಂದ ಶರ್ಮ, ಉಷಾಚಂದ್ರ ಮುಳಿಯ, ರಾಘವೇಂದ್ರ ನಾಯಕ್, ಶ್ಯಾಮಲಾ ಶೆಣೈ, ಸುಜಾತ ರೈ ಅಲಿಮಾರ್, ಸದಾನಂದ ನೆಕ್ಕಿಲಾಡಿ, ಸುದರ್ಶನ್ ಉಪ್ಪಿನಂಗಡಿ, ಜಯಂತಿ ರಂಗಾಜೆ, ಕಿರಣ್ ಶೆಟ್ಟಿ ಪೆರ್ನೆ, ಕಿಶೋರ್ ಶಿರಾಡಿ, ಗಂಗಾಧರ ಗೌಡ ನೆಕ್ಕರಾಜೆ ಮತ್ತಿತರರಿದ್ದರು.
ಲೋಕೇಶ್ ಬೆತ್ತೋಡಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here