ಎಸ್‌ಎಸ್‌ಎಲ್‌ಸಿ: ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರಕ್ಕೆ 92.8 ಶೇ.ಫಲಿತಾಂಶ

0

ಉಪ್ಪಿನಂಗಡಿ: ಕಳೆದ ಮಾರ್ಚ್,ಎಪ್ರಿಲ್ ತಿಂಗಳಿನಲ್ಲಿ ನಡೆದ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರಕ್ಕೆ 92.8 ಶೇ.ತೇರ್ಗಡೆ ಫಲಿತಾಂಶ ಬಂದಿದೆ.

ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 14 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 92.8 ಫಲಿತಾಂಶ ಬಂದಿದೆ. ನಾಲ್ವರು ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಹಾಗೂ 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಫಾತಿಮತ್ ಅಲ್ಫಾ 591, ಫಾತಿಮತ್ ಅಫಿಫಾ 554, ಫಾತಿಮತ್ ರಿಫಾ 531, ಮಹಮ್ಮದ್ ನಸ್ರುಲ್ಲಾ 529 ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here