ಉಪ್ಪಿನಂಗಡಿ: ಪ್ರತಿಯೊಂದು ಬೂತ್‌ನಲ್ಲಿ ಅತ್ಯಂತ ಹೆಚ್ಚು ಮತ ಚಲಾವಣೆ ಆಗುವಲ್ಲಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಆಗುವ ನಿಟ್ಟಿನಲ್ಲಿ ಪ್ರತಿಯೋರ್ವ ಕಾರ್ಯಕರ್ತರು ಶ್ರಮವಹಿಸಬೇಕು. ಆ ಮೂಲಕ ಈ ಬಾರಿ ಭರ್ಜರಿ ಗೆಲುವು ನಮ್ಮದಾಗಬೇಕು ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು.
ಮೇ 8 ರಂದು ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಗಾಂಧಿಪಾರ್ಕ್ ತನಕ ಬೃಹತ್ ರೋಡ್ ಶೋ ನಡೆಸಿ, ಮತಯಾಚನೆ ಮಾಡಿದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಈ ಭ್ರಷ್ಟಾಚಾರವನ್ನು ತೊಡೆದು ಹಾಕಬೇಕು ಹಾಗೂ ಸಮಾಜ ಸೇವೆಯ ಮೂಲಕ ಜನರಿಗೆ ಇನ್ನಷ್ಟು ನೆರವಾಗಬೇಕೆಂಬ ಉದ್ದೇಶವನ್ನಿಟ್ಟುಕೊಂಡು ನಾನು ರಾಜಕೀಯಕ್ಕೆ ಬಂದಿದ್ದೇನೆ. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ, ಧರ್ಮಾಧಾರಿತ ತಾರತಮ್ಯ ಮಾಡದೆ ಧರ್ಮದ ಹಾದಿಯಲ್ಲಿ ಮುನ್ನಡೆಯುವ ಮೂಲಕ ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. ಮತದಾರರ ಒಲವು, ಕಾರ್ಯಕರ್ತರ ಹುರುಪು ಪುತ್ತೂರುನಲ್ಲಿ ಕಾಂಗ್ರೆಸ್ ಗೆಲುವನ್ನು ಸಾಕ್ಷೀಕರಿಸುತ್ತಿದೆ. ಪಕ್ಷದ ಕಾರ್ಯಕರ್ತರು ಮತದಾನದ ದಿನ ಇನ್ನಷ್ಟು ಶ್ರಮವಹಿಸಿಕೊಂಡು 25 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ನಮ್ಮದಾಗುವಂತೆ ಮಾಡಬೇಕು ಎಂದರು.
ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ, ನಿನ್ನೆ ವಿಟ್ಲದಲ್ಲಿ ನಡೆದ ರೋಡ್ ಶೋ, ಇಂದಿನ ಉಪ್ಪಿನಂಗಡಿ ರೋಡ್ ಶೋದಲ್ಲಿ ಸೇರಿರುವ
ಜನಸಾಗರ ಕಾಂಗ್ರೆಸ್ ಪಕ್ಷದ ಗೆಲುವಿನ ದಿಕ್ಸೂಚಿಯನ್ನು ತೋರಿಸಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮುಂಬರುವ 13ನೇ ತಾರೀಕಿನಂದು ಕಾಂಗ್ರೆಸ್‌ನಿಂದ ವಿಜಯೋತ್ಸವದ ಮೆರವಣಿಗೆ ನಡೆಯುವಂತಾಗಲಿ ಎಂದರು.
ರೋಡ್ ಶೋದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಪ್ರವೀಣ್‌ಚಂದ್ರ ಆಳ್ವ, ಉಮಾನಾಥ ರೈ ಪೆರ್ನೆ, ನೂರುದ್ದೀನ್ ಸಾಲ್ಮರ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಪ್ರಸಾದ್ ಪಾಣಾಜೆ, ಶಬ್ಬೀರ್ ಕೆಂಪಿ, ಯು.ಟಿ. ತೌಸೀಫ್, ಫಾರೂಕ್ ಪೆರ್ನೆ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್, ಯು.ಕೆ. ಇಬ್ರಾಹಿಂ, ಪಕ್ಷದ ಮುಖಂಡರಾದ ಅಬ್ದುಲ್ ರಹಿಮಾನ್ ಯುನಿಕ್, ಚಂದ್ರಹಾಸ ಶೆಟ್ಟಿ ಎ., ಪ್ರಸನ್ನ ಕುಮಾರ್ ಶೆಟ್ಟಿ, ಕೃಷ್ಣರಾವ್ ಅರ್ತಿಲ, ಅನಿ ಮಿನೇಜಸ್, ಅಸ್ಕರ್ ಅಲಿ, ಸಿದ್ದಿಕ್ ಕೆಂಪಿ, ಆಚಿ ಇಬ್ರಾಹಿಂ, ನಝೀರ್ ಮಠ, ಪ್ರಸಾದ್ ಕೌಶಲ್ ಶೆಟ್ಟಿ, ಅಸ್ಕರ್ ಅಲಿ, ಆದಂ ಕೊಪ್ಪಳ, ಬಾಬು ಅಗರಿ, ಇಬ್ರಾಹೀಂ ಕೆ., ಲೋಕೇಶ್ ಪೆಲತ್ತಡಿ, ಸತೀಶ್ ಶೆಟ್ಟಿ ಹೆನ್ನಾಳ, ಪ್ರಸನ್ನ ಕುಮಾರ್ ಶೆಟ್ಟಿ, ಮ್ಯಾಕ್ಸಿಂ ಲೋಬೋ, ದೇವಿದಾಸ ರೈ ಬೆಳ್ಳಿಪ್ಪಾಡಿ, ಓಸ್ವಾಲ್ಡ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.