ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತ 7ನೇ ಬಾರಿ ಶೇ. 100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 44 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, 17 ವಿಶಿಷ್ಟ ಶ್ರೇಣಿ, 25 ಪ್ರಥಮ ಶ್ರೇಣಿ, 2 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
617 ಅಂಕ ಪಡೆದಿರುವ ಅಪರ್ಣಾ ಅಡಿಗ (ಗೋಪಾಲಕೃಷ್ಣ ಅಡಿಗ ಪೆರ್ಲ ಮತ್ತು ಆಶಾ ಅಡಿಗ ದಂಪತಿಯ ಪುತ್ರಿ) ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. 599 ಅಂಕ ಪಡೆದಿರುವ ಕೆ. ಯೋಗ್ಯ (ಪುಷ್ಪರಾಜ್ ಶೆಟ್ಟಿ ಕೋಟೆ ಮತ್ತು ಜ್ಯೋತಿ ಪಿ. ಶೆಟ್ಟಿ ದಂಪತಿ ಪುತ್ರಿ) ಶಾಲೆಗೆ ದ್ವಿತೀಯ, 589 ಅಂಕ ಪಡೆದಿರುವ ತೃಷಾ ರೈ (ಸುಧಾಕರ ರೈ ಮತ್ತು ಹರಿಣಾಕ್ಷಿ ಎಸ್. ರೈ ದಂಪತಿ ಪುತ್ರಿ) ಶಾಲೆಗೆ ತೃತೀಯ ಸ್ಥಾನಿಗಳಾಗಿದ್ದಾರೆ.
ಪ್ರಾಪ್ತಿ 588 (ಪ್ರಸನ್ನ ಕುಮಾರ್ ಕಾಟುಕುಕ್ಕೆ ಮತ್ತು ಸುಧಾ ದಂಪತಿ ಪುತ್ರಿ), ಸಜನ್ ರೈ ಆನಾಜೆ 588 (ಜಯರಾಮ ರೈ ಮತ್ತು ಶಶಿಕಲಾ ರೈ ದಂಪತಿ ಪುತ್ರ), ಅದಿತಿ ಡಿ. 585 (ನಾರಾಯಣ ಭಟ್ ಪಳ್ಳು ಮತ್ತು ಸುಲೋಚನ ದಂಪತಿ ಪುತ್ರಿ), ಸಿಂಚನಾ ಬಿ.ಆರ್. 578 (ರಮೇಶ್ ಗೌಡ ಬಳ್ಳಿತ್ತಡ್ಡ ಮತ್ತು ಭಾರತೀ ದಂಪತಿ ಪುತ್ರಿ), ಸೋನಲ್ ಕೆ. ಶೆಟ್ಟಿ 572 (ಕರುಣಾಕರ ಶೆಟ್ಟಿ ಕೊಮ್ಮಂಡ ಮತ್ತು ಅನಸೂಯ ರೈ ದಂಪತಿ ಪುತ್ರ) ಶಾಲೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದವರಾಗಿದ್ದಾರೆ. ಅರ್ಹತೆ ತೂಕದ ಶೇಕಡಾವಾರು 91.09 ಪಡೆದು ಸಂಸ್ಥೆಯು ಎ ಗ್ರೇಡ್ ಪಡೆದಿದೆ ಎಂದು ಶಾಲಾ ಮುಖ್ಯಗುರು ರಾಜೇಶ್ ಎನ್. ತಿಳಿಸಿದ್ದಾರೆ.