ಬಡ ಕುಟುಂಬದಿಂದ ಬಂದ ಯಶಸ್ವಿ ಉದ್ಯಮಿ ಅಶೋಕ್ ಕುಮಾರ್ ರೈ ಪುತ್ತೂರಿನ ನೂತನ ಶಾಸಕ

0

ಬರಹ :ದೀಪಕ್ ಉಬಾರ್

ಉಪ್ಪಿನಂಗಡಿ: ಪುತ್ತೂರಿನ ನೂತನ ಶಾಸಕರಾಗಿ ಚುನಾಯಿತರಾಗಿರುವ ಕೊಡುಗೈ ದಾನಿ, ಬಡವರ ಬಂಧು ಎಂದೇ ಕರೆಯಲ್ಪಡುವ ಅಶೋಕ್ ಕುಮಾರ್ ರೈಯವರು ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದವರು. ನಿವೃತ್ತ ಅಧ್ಯಾಪಕರಾದ ಪಿಜಿನಡ್ಕಗುತ್ತು ದಿ. ಸಂಜೀವ ರೈ ಹಾಗೂ ಶ್ರೀಮತಿ ಗಿರಿಜಾ ಎಸ್. ರೈ ದಂಪತಿಯ ಪುತ್ರನಾಗಿರುವ ಇವರು ತನ್ನ ಪದವಿ ಪೂರ್ವ ಶಿಕ್ಷಣವನ್ನು ಕೊಂಬೆಟ್ಟಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿ ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ರಾಜಕೀಯ ಶಾಸದಲ್ಲಿ ಎಂ.ಎ. ಪದವಿಯನ್ನು ಪಡೆದವರು.

ಇಂದು ಯಶಸ್ವಿ ಉದ್ಯಮಿಯಾಗಿ, ಬಡವರ, ನೊಂದವರ ಆಶಾಕಿರಣವಾಗಿ, ಪುತ್ತೂರಿನ ಶಾಸಕರಾಗಿ ಬಂದಿರುವ ಇವರ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಬಡ ಕುಟುಂಬದಿಂದ ಬಂದ ಇವರು ಅನೇಕ ಸಂಕಷ್ಟ, ಬಡತನದ ನೋವನ್ನು ಅನುಭವಿಸಿದವರು. ಎಳವೆಯಲ್ಲಿಯೇ ವ್ಯವಹಾರದ ಕುಶಲತೆಯನ್ನು ಅರಿತಿದ್ದ ಇವರು ಮೈಸೂರಿನಲ್ಲಿ ತನ್ನ ಕಾಲೇಜು ಶಿಕ್ಷಣದ ಅವಽಯಲ್ಲಿಯೇ ಕಾಲೇಜು ಮುಗಿದ ಬಳಿಕ ಸೈಕಲೊಂದರಲ್ಲಿ ತಂಪು ಪಾನೀಯದ ಬಾಟಲ್‌ಗಳನ್ನು ಅಂಗಡಿ, ಅಂಗಡಿಗಳಿಗೆ ಸರಬರಾಜು ಮಾಡಿ ಶಿಕ್ಷಣದೊಂದಿಗೆ ತಕ್ಕ ಮಟ್ಟಿನ ಆದಾಯವನ್ನು ಸಂಪಾದಿಸುತ್ತಿದ್ದವರು. ಸತತ ಪರಿಶ್ರಮ, ಆತ್ಮ ವಿಶ್ವಾಸ, ಗುರಿ ಮುಟ್ಟುವ ಛಲದಿಂದಾಗಿ ಇವರ ಪದವಿ ಶಿಕ್ಷಣವೂ ಮುಗಿಯಿತ್ತಲ್ಲದೇ, ಸೈಕಲ್‌ನಲ್ಲಿ ತಂಪು ಪಾನೀಯವನ್ನು ಮಾರಾಟ ಮಾಡುತ್ತಿದ್ದಲ್ಲಿಂದ ಇವರ ವ್ಯವಹಾರ ಮೆಟಡೋರ್ ವಾಹನದ ಮೂಲಕ ಪೂರೈಕೆ ಮಾಡುವಲ್ಲಿಯವರೆಗೆ ಮುಟ್ಟಿತ್ತು.


ಕೈ ಹಿಡಿದ ರೆನಾಲ್ಡ್ ಪೆನ್:
ಆಗಷ್ಟೇ ಮಾರುಕಟ್ಟೆಗೆ ಕಾಲಿಡುತ್ತಿದ್ದ ರೆನಾಲ್ಡ್ ಪೆನ್‌ನ ಡೀಲರ್ ಶಿಪ್ ಪಡೆದುಕೊಂಡ ಅವರು ತನ್ನ ಕಾರ್ಯ ದಕ್ಷತೆ, ಪ್ರಾಮಾಣಿಕತೆಯಿಂದ ಒಬ್ಬ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಆ ಬಳಿಕ ಅಡುಗೆ ಸಿಲಿಂಡರ್‌ಗಳ ಡೀಲರ್ ಶಿಪ್ ಸೇರಿದಂತೆ ಇನ್ನಷ್ಟು ಕ್ಷೇತ್ರಗಳಿಗೆ ತನ್ನ ವ್ಯವಹಾರವನ್ನು ವಿಸ್ತರಿಸಿ, ಯಶಸ್ವಿ ಉದ್ಯಮಿಯಾಗಿ ಬೆಳೆದರು.


ಕೊಡುಗೈ ದಾನಿ:
ಒಂದು ಕಾಲದಲ್ಲಿ ಬಡ ಕುಟುಂಬ ಇವರದ್ದಾಗಿದ್ದರೂ, ಇನ್ನೊಬ್ಬರಿಗೆ ತಮ್ಮಿಂದಾದಷ್ಟು ನೆರವಾಗಿ ಆತ್ಮ ಸಂತೃಪ್ತಿಯಿಂದ ಬದುಕುತ್ತಿದ್ದ ಕುಟುಂಬ ಇದಾಗಿತ್ತು. ಇವರ ತಂದೆಯವರಿದ್ದ ಕಾಲದಲ್ಲಿಯೇ ಪ್ರತಿ ದೀಪಾವಳಿಗೆ ನೆರೆಕರೆಯವರಿಗೆ ವಸದಾನ ಸೇರಿದಂತೆ ಇನ್ನಿತರ ದಾನ ಧರ್ಮಾದಿ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿತ್ತು. ಅದೇ ಹಾದಿಯಲ್ಲಿ ಮುಂದುವರಿದ ಅಶೋಕ್ ಕುಮಾರ್ ರೈಯವರು ೨೦೧೩ರಲ್ಲಿ ರೈ ಎಸ್ಟೇಟ್ಸ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿಗಳಿಗೆ, ವಿಧವೆಯರಿಗೆ, ನಿರುದ್ಯೋಗಿಗಳಿಗೆ, ಅನಾರೋಗ್ಯ ಪೀಡಿತರಿಗೆ, ಅಶಕ್ತರಿಗೆ ಹೀಗೆ ಹಲವು ಮಂದಿಗೆ ನೆರವಾಗಿದ್ದರು. ಆ ಸಮಯದಲ್ಲಿ ಇವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರಾದರೂ, ದಾನ- ಧರ್ಮಾದಿ ಕಾರ್ಯದಲ್ಲಿ ಎಂದೂ ಇವರು ಜಾತಿ- ಧರ್ಮ ಭೇದ ಮಾಡದೇ ನೆರವು ನೀಡುವ ಮೂಲಕ ಎಲ್ಲರ ಪ್ರೀತಿಗೂ ಪಾತ್ರರಾಗಿದ್ದರು. ಸುಮಾರು 22 ಸಾವಿರಕ್ಕೂ ಅಧಿಕ ಮಂದಿಗೆ ಇವರು ಈಗಾಗಲೇ ನೆರವು ನೀಡಿದ್ದಾರೆ. ವ್ಯವಹಾರ ನಿಮಿತ್ತ ಮಂಗಳೂರಿನಲ್ಲಿರುತ್ತಿದ್ದ ಇವರು ಪ್ರತಿ ಶನಿವಾರ ಪುತ್ತೂರಿನ ತನ್ನ ಕಚೇರಿಗೆ ಆಗಮಿಸುತ್ತಿದ್ದು, ಆಗ ಅಲ್ಲಿ ಹಾಗೂ ಭಾನುವಾರ ಅವರ ಮನೆಯಲ್ಲಿ ನೆರವು ಕೇಳಿಕೊಂಡು ಬರುವ ಜನರ ಗುಂಪೇ ನೆರೆದಿರುತ್ತಿತ್ತು. ಪ್ರತಿ ದೀಪಾವಳಿಯಂದು ಇವರು ತನ್ನ ಮನೆಯಲ್ಲಿ ಸಾವಿರಾರು ಸಂಖ್ಯೆಯ ಜನರಿಗೆ ವಸದಾನ, ಹಣ ನೀಡುತ್ತಿದ್ದರು. ಅಲ್ಲದೇ, ಅದೆಷ್ಟೋ ಅರ್ಹರಿಗೆ ತನ್ನ ಸ್ವಂತ ಹಣದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಗಳ ಕಾರ್ಡ್ ಸೇರಿದಂತೆ ಇನ್ನಿತರ ಸರಕಾರಿ ಸವಲತ್ತುಗಳನ್ನು ಒದಗಿಸಿಕೊಟ್ಟಿದ್ದಾರೆ. ಇದರೊಂದಿಗೆ ಹಲವು ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿಗಳ ಅಧ್ಯಕ್ಷರಾಗಿದ್ದುಕೊಂಡು ಯಶಸ್ವಿಯಾಗಿ ದೇವಾಲಯಗಳ ಬ್ರಹ್ಮಕಲಶೋತ್ಸವಗಳನ್ನು ನಡೆಸಿಕೊಟ್ಟ ಕೀರ್ತಿ ಇವರಿಗಿದೆ.


ಉಪ್ಪಿನಂಗಡಿಯ ವಿಜಯ- ವಿಕ್ರಮ ಕಂಬಳದ ಅಧ್ಯಕ್ಷರಾಗಿದ್ದುಕೊಂಡು ನಿಂತಿದ್ದ ಕಂಬಳವನ್ನು ಮತ್ತೆ ರಾಜ ವೈಭವದಲ್ಲಿ ನಡೆಸಿಕೊಂಡು ಬರುತ್ತಿರುವ ಕೀರ್ತಿಯೂ ಇವರಿಗಿದೆ. ತುಳುನಾಡ ಸಂಸ್ಕೃತಿಯಾದ ಕಂಬಳ ಕ್ರೀಡೆಗೆ ಸಂಕಷ್ಟಗಳು ಎದುರಾದಾಗ ಕಂಬಳದ ಉಳಿವಿಗಾಗಿ ವೈಯಕ್ತಿಕವಾಗಿ ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸಿದ ವ್ಯಕ್ತಿಯಿದ್ದರೆ ಅದು ಅಶೋಕ್ ಕುಮಾರ್ ರೈ ಅವರು ಮಾತ್ರ ಎಂದರೂ ತಪ್ಪಾಗಲಾರರು. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಇವರು ಡಿ.ವಿ. ಸದಾನಂದ ಗೌಡರ ಆಪ್ತರಾಗಿದ್ದವರು. ಕಳೆದ ಅವಽಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದರೂ, ಅವರಿಗೆ ಪಕ್ಷ ಟಿಕೇಟ್ ನೀಡಿರಲಿಲ್ಲ. ಈ ಬಾರಿ ನೀಡಬಹುದೆಂಬ ವಿಶ್ವಾಸ ಅವರಲ್ಲಿದ್ದರೂ, ಪಕ್ಷದ ಕೆಲವು ಮಂದಿ ಅವರಿಗೆ ಟಿಕೆಟ್ ನೀಡುವಲ್ಲಿ ಅಡ್ಡಗಾಲು ಹಾಕಿದ್ದರು. ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಿತ್ತು. ಇದೀಗ ಕಾಂಗ್ರೆಸ್ ಪಕ್ಷದಿಂದ ಸ್ಪಽಸಿ ಅಶೋಕ್ ಕುಮಾರ್ ರೈ ವಿಜಯೀಯಾಗಿದ್ದು, ಜಾತ್ಯಾತೀತ ನಿಲುವುಳ್ಳ ವ್ಯಕ್ತಿಯೋರ್ವ ವಿಧಾನ ಸೌಧಕ್ಕೆ ಪ್ರವೇಶಿದಂತಾಗಿದೆ.

LEAVE A REPLY

Please enter your comment!
Please enter your name here