ಬ್ಯಾಚುಲರ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್ ವೈದ್ಯಕೀಯ ಘಟಿಕೋತ್ಸವ ಸಮಾರಂಭದಲ್ಲಿ ಡಾಕ್ಟರ್ ಪದವಿ ಪಡೆದ ಪೆರಾಬೆಯಡಾ ಸ್ವಸ್ತಿ ರೈ ಪಿ

0

ಕಾಣಿಯೂರು: ಮೂಡಬಿದ್ರೆಯ ಪ್ರತಿಷ್ಠಿತ ಆಳ್ವಾಸ್ ಮೆಡಿಕಲ್ ಕಾಲೇಜಿನಲ್ಲಿ ಮೇ 13 ರಂದು ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಡಾ. ಸ್ವಸ್ಥಿ ರೈ ಯವರು ಆಂಧ್ರಪ್ರದೇಶದ ರಾಜ್ಯಪಾಲರಾದ ಶ್ರೀ ಎಸ್ ಅಬ್ದುಲ್ ನಝೀರ್ ರವರಿಂದ BNYS ( ಬ್ಯಾಚುಲರ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್ ) ವೈದ್ಯಕೀಯ ಪದವಿಯನ್ನು ಪಡೆದರು.

ಇದರ ಜೊತೆಗೆ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಅವಾರ್ಡ್ ಕೂಡ ಡಾ. ಸ್ವಸ್ಥಿ ರೈ ಯವರ ಪಾಲಿಗೆ ಒದಗಿ ಬಂದಿದೆ.. ಐದು ಬಾರಿ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರು ಮೂರು ಸಲ ಯೋಗ ಫೆಡರೇಷನ್ ಆಫ್ ಇಂಡಿಯಾ , ಮತ್ತು ಅಂತರ್ ವಿಶ್ವವಿದ್ಯಾಲಯಗಳ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಡಾ. ಸ್ವಸ್ತಿ ರೈ ಪಿ ಯವರು ಕಡಬ ತಾಲೂಕು ಪೆರಾಬೆ ಗ್ರಾಮದ ಪರಾರಿಗುತ್ತು ರಾಜಪ್ರಸಾದ್ ರೈ ಮತ್ತು ಪಾಂಡೇಲುಗುತ್ತು ತಂಟೆಪ್ಪಾಡಿ ಸುಮಾ ರಾಜಪ್ರಸಾದ್ ರೈ ಯವರ ಸುಪುತ್ರಿ .ಇವರು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆ ಮತ್ತು ನಿಂತಿಕಲ್ಲಿನ ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಹೆಮ್ಮೆಯ ಹಿರಿಯ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here