ಅನ್ಸಾರ್ ವತಿಯಿಂದ ಹಜ್ ತರಬೇತಿ ಶಿಬಿರ ಮತ್ತು ಬೀಳ್ಕೊಡುಗೆ ಸಮಾರಂಭ

0

ಪವಿತ್ರ ಹಜ್ ಯಾತ್ರಿಕ ಸೃಷ್ಟಿಕರ್ತನ ಅತಿಥಿ ಸರ್ವಾದರಣಿಯರು ಅಶ್ರಫ್ ಕಾಮಿಲ್ ಸಖಾಫಿ


ಪುತ್ತೂರು: ಪ್ರಸಕ್ತ ಸಾಲಿನಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಸುಳ್ಯ ಮತ್ತು ಆಸುಪಾಸು ತಾಲೂಕುಗಳ ಯಾತ್ರಿಕರಿಗೆ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಹಜ್ ತರಬೇತಿ ಶಿಬಿರ ಮತ್ತು ಬೀಳ್ಕೊಡುಗೆ ಸಮಾರಂಭ ಅನ್ಸಾರಿಯ ಎಜುಕೇಶನ್ ಸೆಂಟರ್ ಸಭಾಂಗಣದಲ್ಲಿ ಜರಗಿತು.


ಗಾಂಧಿನಗರ ಜುಮ್ಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್ ವಹಿಸಿದ್ದರು, ಮುಖ್ಯಅತಿಥಿಗಳಾಗಿ ಗಾಂಧಿನಗರ ಜುಮಾಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ ವಹಿಸಿದ್ದರು, ಸಂಪನ್ಮೂಲ ವ್ಯಕ್ತಿ ಉಸ್ಮಾನ್ ಸಅದಿ ಪಟ್ಟೋರಿ ಪ್ರಾತ್ಯಕ್ಷಿಕೆ ಯೊಂದಿಗೆ ಸವಿವರವಾದ ತರಬೇತಿ ನೀಡಿದರು.


ವೇದಿಕೆಯಲ್ಲಿ ಗಾಂಧಿನಗರ ಜಮಾಅತ್ ಕಾರ್ಯದರ್ಶಿ ಕೆ. ಬಿ. ಅಬ್ದುಲ್ ಮಜೀದ್,ಅನ್ಸಾರ್ ಕಾರ್ಯದರ್ಶಿ ಬಿ ಎಂ ಹನೀಫ್, ಕೆ ಎಂ. ಸಂಶುದ್ದೀನ್, ಖಜಾಂಚಿ ಎಸ್. ಪಿ. ಅಬೂಬಕ್ಕರ್, ಅನ್ಸಾರಿಯಾ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ ಎಐಕೆಎಂಸಿಸಿ ಖಜಾಂಚಿ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿದರು.

LEAVE A REPLY

Please enter your comment!
Please enter your name here