ವಿಟ್ಲ: ದಾರಿ ಕೇಳುವ ನೆಪ- ಮಹಿಳೆಯೊಂದಿಗೆ ಅಸಭ್ಯ ವರ್ತನೆ- ಆರೋಪಿ ಬಂಧನ

0

ವಿಟ್ಲ: ದಾರಿ ಕೇಳುವ ನೆಪದಲ್ಲಿ ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬೂಬಕ್ಕರ್‌(46ವ) ಎಂಬಾತನ ವಿರುದ್ಧ ವಿಟ್ಲ ಠಾಣೆಯಲ್ಲಿ ಅ.ಕ್ರ 79/2023ರಂತೆ ಪ್ರಕರಣ ದಾಖಲಾಗಿದೆ.

ವಿಟ್ಲ ಠಾಣಾ ವ್ಯಾಪ್ತಿಯ ವಿಟ್ಲ ಕಸಬಾ ಗ್ರಾಮದ ಬನ ಎಂಬಲ್ಲಿ ಮೇ.13ರಂದು ಮೋಟಾರ್‌ ಸೈಕಲ್‌ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಮೋಟಾರ್‌ ಸೈಕಲ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಮೋಟಾರ್‌ ಸೈಕಲ್‌ ನಿಲ್ಲಿಸಿ ದಾರಿ ಕೇಳುವ ನೆಪದಲ್ಲಿ ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿದ್ದ. ಸದ್ರಿ ಪ್ರಕರಣದ ಆರೋಪಿಯಾಗಿರುವ ಕನ್ಯಾನ ಗಾಮದ ಅಬೂಬಕ್ಕರ್‌ ಎಂಬಾತನನ್ನು ಬಂಧಿಸಿ ಆತನ ವಿರುದ್ದ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡ ವಿಟ್ಲ ಠಾಣೆ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಟ್ಲ ಪೊಲೀಸ್‌ ನಿರೀಕ್ಷಕ ನಾಗರಾಜ್‌ ಎಚ್‌ ಮಾರ್ಗದರ್ಶನದಲ್ಲಿ ಆರೋಪಿ ಪತ್ತೆಕಾರ್ಯದಲ್ಲಿ ಉಪ ನಿರೀಕ್ಷಕರಾದ ಕಾರ್ತಿಕ್‌ ಕಾತರಗಿ, ಸಿಬ್ಬಂಧಿಗಳಾದ ರಕ್ಷಿತ್‌, ಹೇಮರಾಜ್‌ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here