ಜಿಎಲ್‌ವನ್ ಮಾಲ್‌ನಲ್ಲಿ ಪ್ರೈಡ್ ಚಿಕ್ ಶುಭಾರಂಭ

0

ಪುತ್ತೂರು: ಪುತ್ತೂರಿನ ಜಿಎಲ್ ವನ್ ಮಾಲ್‌ನಲ್ಲಿ ನೂತನವಾಗಿ ಪ್ರೈಡ್ ಚಿಕ್ ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಜಿಎಲ್ ವನ್ ಮಾಲ್‌ನ ನಿರ್ದೇಶಕರುಗಳಾದ ಸುಧನ್ವ ಆಚಾರ್ಯ ಮತ್ತು ಲಕ್ಷ್ಮೀಕಾಂತ್ ಆಚಾರ್ಯರವರು ಉದ್ಘಾಟಿಸಿ ಶುಭಹಾರೈಸಿದರು.

ಆರಂಭದಲ್ಲಿ ಕೂರ್ನಡ್ಕ ಮಸೀದಿಯ ಖತೀಬ್ ಉನೈಸ್ ದಾರಿಮಿಯವರು ದುವಾ ಆಶೀರ್ವಚನ ನೀಡುವ ಮೂಲಕ ಸಂಸ್ಥೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಕೂರ್ನಡ್ಕ ಜಮಾಅತ್ ಕಮಿಟಿ ಅಧ್ಯಕ್ಷ ಕೆ.ಹೆಚ್. ಕಾಸಿಂ ಹಾಜಿ, ಮಾಜಿ ಅಧ್ಯಕ್ಷ ಕೆ.ಎಂ ಬಾವಾ ಹಾಜಿ ಕೂರ್ನಡ್ಕ, ದರ್ಬೆ ಮಹಮ್ಮದೀಯ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್, ಪಿಡಬ್ಲ್ಯೂಡಿ ಗುತ್ತಿಗೆದಾರ ಕುಂಞ ಅಹಮ್ಮದ್ ಹಾರಾಡಿ, ಯುನಿಟಿ ಟ್ರೇಡರ್‍ಸ್ ನ ಮಾಲಕ ಶಮೀರ್ ಯುನಿಟಿ, ಫೈವ್ ಸ್ಟಾರ್ ಅಟೋ ಲಿಂಕ್ ನ ಮಾಲಕ ಯೂಸುಫ್ ಹಾಜಿ, ಅರಗ ಕನ್ಸಸ್ಟ್ರಕ್ಷನ್ ಮಾಲಕ ಇರ್ಷಾದ್ ಅರಗ, ಮೊಟ್ಟೆತ್ತಡ್ಕ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಕೂರ್ನಡ್ಕ, ಪಿ. ಬಿ ಹಮೀದ್, ಯು.ಟಿ. ರಹಿಮಾನ್ ಉಪ್ಪಿನಂಗಡಿ, ಹಾಫಿಲ್ ಕೆ.ಎಂ., ಮಹಮ್ಮದ್ ಸಾಬ್ ಕೂರ್ನಡ್ಕ, ಉಮ್ಮರ್ ಕರಾವಳಿ, ಹುಸೈನ್ ನಾಟೆಕಲ್, ಮೊಹಮ್ಮದ್ ಶಕೀಂ, ನಿಝಾರ್ ಕೂರ್ನಡ್ಕ ಮೊದಲಾದವರು ಆಗಮಿಸಿ ಶುಭ ಹಾರೈಸಿದರು. ಆಸಿಫ್ ಕೂರ್ನಡ್ಕ ಸ್ವಾಗತಿಸಿ ವಂದಿಸಿದರು

ಪ್ರೈಡ್ ಚಿಕ್‌ನ ಮಾಲಕ ಅಪ್ಸರ್ ಅಸನ್‌ರವರು ಮಾತನಾಡಿ ಇಲ್ಲಿ ಎಲ್ಲಾ ತರಹದ ಡ್ರಮ್‌ಸ್ಟಿಕ್, ಚಿಕನ್ ವಿಂಗ್ಸ್, ಕ್ಲಾಸಿಕ್ ಸಬ್, ಚೀಸ್ ಸಬ್, ಲಂಬೆರ್‌ಜಕ್, ಚಿಕನ್ ನಟ್ಸ್, ಚಿಕನ್ ಪಾಪ್‌ಕಾರ್ನ್, ಚಿಕನ್ ಸ್ಕ್ರಿಪ್ಸ್, ಫ್ರೀಡಮ್ ಚಿಕನ್ ಸಲಾಡ್, ಸ್ಪೆಷಲ್ ಪ್ರೈಡ್ ಚಿಕನ್ ಸಲಾಡ್, ನೋ ಬನ್ ಫ್ರೈಡ್ ಚಿಕನ್ ಬರ್ಗರ್, ಪೆರಿ ಪೆರಿ ಚಿಕನ್, ಕೊರಿಯನ್ ಸ್ಪೈಸಿ ಫ್ರೈಡ್ ಚಿಕನ್, ಫ್ಲಾಮಿನ್ ಹಾಟ್ ಫ್ರೈಡ್ ಚಿಕನ್, ಪ್ರೈಸ್, ಪೆರಿಪೆರಿ ಪ್ರೈಸ್, ಕ್ಲಾಸಿಕ್ ಟೋರ್‌ಟಿಲ್ಲ ರಾಪ್, ಮಿಡ್‌ವೇ ಟೋರ್‌ಟಿಲ್ಲ ರಾಪ್, ಲೆಮನ್ ಪೆಪ್ಪರ್ ಫ್ರೈಸ್, ಫ್ರೈಸ್ ಲೊಡೆಡ್ ವಿದ್ ಚೀಸ್ ದೊರೆಯುತ್ತದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here