ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗ ಶಿಶಿಕ್ಷು ಅಧಿನಿಯಮ 1961 ರನ್ವಯ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದಿಂದ ಶಿಶಿಕ್ಷು ವೃತ್ತಿಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಸಂದರ್ಶನಕ್ಕಾಗಿ ಅರ್ಜಿಗಳನ್ನು ದಿನಾಂಕ 08.06.2023ರವರೆಗೆ ಕರೆಯಲಾಗಿದೆ. ತರಬೇತಿಯು ಒಂದು ವರ್ಷದ ಅವಧಿಯಾಗಿರುತ್ತದೆ. ಐ.ಟಿ.ಐ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಮೆಕ್ಯಾನಿಕ್ ಡೀಸೆಲ್-43 ಖಾಲಿ ಸ್ಥಾನ, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ -10, ಇಲೆಕ್ಟ್ರೀಷಿಯನ್-3, ಮೋಟಾರ್ ಮೆಕ್ಯಾನಿಕ್ ವೆಹಿಕಲ್ -19, ವೆಲ್ಡರ್- 05, ಫಿಟ್ಟರ್ 5, ಪಾಸಾ 10, ಒಟ್ಟು 112 ಖಾಲಿ ಸ್ಥಾನಗಳಿವೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಶಿಶಿಕ್ಷು ವೃತ್ತಿಯು 2ವರ್ಷ ತರಬೇತಿ ಅವಧಿಯನ್ನು ಹೊಂದಿದೆ. ಮೆಕ್ಯಾನಿಕ್ ಡೀಸೆಲ್-32, ಖಾಲಿ ಸ್ಥಾನಗಳಿವೆ
ಅರ್ಜಿಗಳನ್ನು ಆಯೋಗದ ಅಂತರ್ಜಾಲ Www.apprenticeshipindia.org ನಲ್ಲಿ online ಮೂಲಕ ನೋಂದಣಿ ಮಾಡುವುದು ಹಾಗೂ ನೋಂದಣಿ ಪ್ರತಿಯನ್ನು ಸಲ್ಲಿಸುವುದು. (ನೋಂದಣಿ ಪ್ರತಿ ಸಲ್ಲಿಸದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು) ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.