ಸೌದಿ ಜುಬೈಲ್ ನಲ್ಲಿ ಮೃತಪಟ್ಟ ಉದ್ಯಮಿ ಹಾರಿಸ್‌ ಮೃತದೇಹ ನಾಳೆ ಬೆಳಿಗ್ಗೆ ಪುತ್ತೂರಿಗೆ

0

ಪುತ್ತೂರು: ಕಳೆದ ಶನಿವಾರ ಸಂಜೆ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಪುತ್ತೂರು ಮೂಲದ ಗೋಳಿಕಟ್ಟೆ ನಿವಾಸಿ ಉದ್ಯಮಿ ಹಾರಿಸ್ ಅವರ ಮೃತ ದೇಹ‌ ಜೂನ್‌1ರ ಬೆಳಿಗ್ಗೆ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದೆ ಎಂದು ಹಾರಿಸ್ ಕುಟುಂಬದ ಸದಸ್ಯರು ಹೇಳಿದ್ದಾರೆ.

ಬೆಳಗ್ಗೆ ಸುಮಾರು7 ಗಂಟೆಗೆ ಪುತ್ತೂರು ತಲುಪಲಿದ್ದು ಗೋಳಿಕಟ್ಟೆ ಮಸೀದಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಬಳಿಕ ಪರ್ಲಡ್ಕದ ದಫನ ಭೂಮಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here