ಸ. ಹಿ. ಪ್ರಾ. ಶಾಲೆ ಸಾಮೆತಡ್ಕ ಶಾಲಾ ಪ್ರಾರಂಭೋತ್ಸವ

0

ಪುತ್ತೂರು :ಸ. ಹಿ. ಪ್ರಾ. ಶಾಲೆ ಸಾಮೆತಡ್ಕದಲ್ಲಿ ಶಾಲಾ ಪ್ರಾರಂಭೋತ್ಸವವು ಮೇ.31ರಂದು ನಡೆಯಿತು.ಮೆರವಣಿಗೆ, ಹೂವು ಚಿಮುಕಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಅತಿಥಿಗಳು ಮತ್ತು ಶಾಲಾ ಶಿಕ್ಷಕರು ಬರಮಾಡಿಕೊಂಡರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಭಟ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಿನೇಶ್ ಕಾಮತ್,ನಗರಸಭೆ ಸದಸ್ಯರಾದ ಮನೋಹರ್ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಪವಿತ್ರ ,ಟ್ರಸ್ಟ್ ಕಾರ್ಯದರ್ಶಿ ಇಂದಿವರ್ ಭಟ್, ಹಿರಿಯ ವಿದ್ಯಾರ್ಥಿ ಫಾಯಿಜ್,ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಕಲಾ ಉಪಸ್ಥಿತರಿದ್ದರು.

ಸರಕಾರದಿಂದ ನೀಡಲಾದ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಅಬಕಸ್ ತರಬೇತಿ ನೀಡಿದ ಪ್ರಫುಲ್ಲಾ ಗಣೇಶ್ ದಂಪತಿಗಳಿಗೆ ಸನ್ಮಾನ ನಡೆಯಿತು. ಶಾಲಾ ಶಿಕ್ಷಕಿ ಶಿಲ್ಪಾ ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ಮರಿಯಾ ಎಂ. ಎ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here