ಹಿರೇಬಂಡಾಡಿ ಪ್ರೌಢಶಾಲೆಯಲ್ಲಿ ವಿದಾಯ ಸಮಾರಂಭ, ಅಭಿನಂದನಾ ಸಭೆ

0

ಹಿರೇಬಂಡಾಡಿ: ಕಳೆದ ಎಂಟು ವರ್ಷಗಳಿಂದ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತರಾದ ವೇದಾವತಿ ಎ.ಇವರ ವಿದಾಯ ಸಮಾರಂಭ ಹಾಗೂ
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶಕ್ಕೆ ಕಾರಣಕರ್ತರಾದವರಿಗೆ ಅಭಿನಂದನಾ ಸಮಾರಂಭವು ಹಿರೇಬಂಡಾಡಿ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರೇಬಂಡಾಡಿ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ನೆಹರುತೋಟರವರು ಸಾಧಕರ ಸಾಧನೆಗಳನ್ನು ಕೊಂಡಾಡಿದರು ಹಾಗೂ ನಿವೃತ್ತ ಮುಖ್ಯಶಿಕ್ಷಕರ ಕಾರ್ಯತತ್ಪರತೆಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿ ಶುಭಹಾರೈಸಿದರು. ನಿವೃತ್ತ ಶಿಕ್ಷಕ ಹಾಗೂ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯ ದರ ತಪಾಸಣಾಧಿಕಾರಿ ಬಾಲಕೃಷ್ಣ ಗೌಡರವರು ಅಭಿನಂದನಾ ನುಡಿಗಳನ್ನಾಡಿದರು. ಮಾಜಿ ಶಾಸಕ ಸಂಜೀವ ಮಠಂದೂರು ನಿವೃತ್ತ ಮುಖ್ಯಶಿಕ್ಷಕಿ ವೇದಾವತಿ ಎ ಹಾಗೂ ಅವರ ಪತಿ ವಿಶ್ವನಾಥ ಗೌಡರವರನ್ನು ಸನ್ಮಾನಿಸಿ, ಮುಖ್ಯಶಿಕ್ಷಕಿಯಾಗಿ ವೇದಾವತಿ ಎ.ರವರ ಕೊಡುಗೆಗಳನ್ನು ಉಲ್ಲೇಖಿಸಿ ಶುಭಹಾರೈಸಿದರು.


ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ ಮೂರು ಬಾರಿ ಶೇ.100 ಫಲಿತಾಂಶ ಹಾಗೂ ಶಾಲೆಗೆ ಎ ಗ್ರೇಡ್ ಪಡೆಯಲು ಕಾರಣಕರ್ತರಾದವರನ್ನು ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಹಮ್ಮಬ್ಬ ಶೌಕತ್ ಆಲಿ, ಶಾಂಭವಿ, ಸತೀಶ್ ಶೆಟ್ಟಿ ಹೆನ್ನಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಶೆಟ್ಟಿ ಹಾಗೂ ಸಿಎ ಬ್ಯಾಂಕ್ ನಿರ್ದೇಶಕ ದಯಾನಂದ ಸರೋಳಿಯವರು ಗೌರವಿಸಿದರು. ಬಾಲವಿಕಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಡಳಿತಾಧಿಕಾರಿ ರವೀಂದ್ರ ಶೆಟ್ಟಿ ದರ್ಬೆಯವರು ಅಭಿನಂದನಾ ಭಾಷಣದಲ್ಲಿ ವಿದ್ಯಾರ್ಥಿಗಳು ಭೌತಿಕ ಅಭಿವೃದ್ಧಿಯೊಂದಿಗೆ ಬೌದ್ಧಿಕ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕೆಂದು ಹೇಳಿ, ಶಾಲೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ಮಠಂದೂರುರವರನ್ನು ಶಾಲಾಭಿವೃದ್ಧಿಗೆ ಕಾರ್ಯನಿರ್ವಹಿಸಿರುವುದನ್ನು ಗುರುತಿಸಿ ಗೌರವಿಸಲಾಯಿತು.
ಶಾಲಾ ಪ್ರಭಾರ ಮುಖ್ಯಗುರು ಹರಿಕಿರಣ್ ಕೆ.ರವರು ಪ್ರಾಸ್ತಾವಿಕವಾಗಿ ಮಾತನಾಡಿ, ನಿವೃತ್ತ ಮುಖ್ಯಶಿಕ್ಷಕಿ ವೇದಾವತಿ ಎ.ಅವರ ಸೇವಾತತ್ಪರತೆಯ ಬಗ್ಗೆ ತಿಳಿಸಿದರು ಹಾಗೂ ಶೇ. 100 ಫಲಿತಾಂಶಕ್ಕೆ ಕಾರಣಕರ್ತರಾದ ವಿದ್ಯಾರ್ಥಿಗಳ ಅಭ್ಯಾಸ ಕ್ರಮವನ್ನು ಶ್ಲಾಘಿಸಿ ಭವಿಷ್ಯದ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಹಿಂದೆ ಹಿಂದಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ತುಮಕೂರಿನ ಯಶೋದಮ್ಮ ಟಿ. ಕೆ ಇವರು ನೀಡಿರುವ ದತ್ತಿನಿಧಿಯ ಬಗ್ಗೆ ಉಲ್ಲೇಖಿಸಿ ಕೃತಜ್ಙತೆ ಸಲ್ಲಿಸಿದರು. ಸಮಾಜವಿಜ್ಞಾನ ಶಿಕ್ಷಕಿ ಲಲಿತ ಕೆ., ನಿರೂಪಿಸಿದರು. ಶ್ರೀಧರ ಮಠಂದೂರು ಸ್ವಾಗತಿಸಿದರು. ಇಂಗ್ಲಿಷ್ ಶಿಕ್ಷಕ ವಸಂತಕುಮಾರ್ ಪಿ ಹಾಗೂ ವಿಜ್ಞಾನ ಶಿಕ್ಷಕ ಮನೋಹರ ಎಂ.ರವರು ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿ ಶಿಕ್ಷಕರಾದ ಶ್ವೇತಾಕುಮಾರಿ ಎಸ್. ಮತ್ತು ಆರತಿ ಡಿ.ವೈ ಸಹಕರಿಸದರು. ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ.ರವರು ವಂದಿಸಿದರು.

LEAVE A REPLY

Please enter your comment!
Please enter your name here