ಆತೂರು-ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮಹಾಸಭೆ

0

ಅಧ್ಯಕ್ಷ: ಕೆ.ಎಂ.ಸಿದ್ದಿಕ್ ಫೈಝಿ ಕರಾಯ, ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ಅಝ್ಹರಿ ಕೊಡಗು

ರಾಮಕುಂಜ: ಆತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಮಹಾಸಭೆ ಮೇ.27 ರಂದು ಆತೂರು ತದ್ಬಿರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಮುಫತ್ತಿಷ್ ಅಬ್ದುಲ್ ರಶೀದ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಾಸಭೆ ಪಕ್ರಿಯೆ ನಡೆಸಿ ಕೊಟ್ಟರು. ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಆತೂರು ಸಮಾರಂಭವನ್ನು ಉದ್ಘಾಟಿಸಿದರು. ಅದ್ ನಾನ್ ಅನ್ಸಾರಿ ಆತೂರು ರೇಂಜ್ ವ್ಯಾಪ್ತಿಯ ಉಸ್ತಾದರಿಗೆ ತರಬೇತಿ ನಡೆಸಿಕೊಟ್ಟರು. ಕಾರ್ಯದರ್ಶಿ ಕೆ.ಎಂ.ಸಿದ್ದಿಕ್ ಫೈಝಿ ವರದಿ ಮಂಡಿಸಿದರು.

2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ.ಎಂ.ಸಿದ್ದಿಕ್ ಫೈಝಿ ಕರಾಯ, ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ಅಝ್ಹರಿ ಕೊಡಗು ಹಾಗೂ ಕೋಶಾಧಿಕಾರಿಯಾಗಿ ಬಿ.ಕೆ.ಅಬ್ದುಲ್ ಅಝೀಝ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶೌಖತ್ತಲಿ ಫೈಝಿ ಕನ್ಯಾನ, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ರಫೀಕ್ ಅರ್ಶದಿ ಕಡಬ, ಐಟಿ ಕೋರ್ಡಿನೇಟರ್ ಆಗಿ ಶಂಸುದ್ದೀನ್ ಹುದವಿ ಕಡಬ ನೇಮಕಗೊಂಡರು.

ಪರೀಕ್ಷಾ ಬೋರ್ಡ್ ಚೇರ್ಮನ್ ನಾಗಿ ಬದ್ರುದ್ದೀನ್ ಮುಸ್ಲಿಯಾರ್ ಆತೂರು, ವೈಸ್ ಚೇರ್ಮನ್‌ಗಳಾಗಿ ಅಬ್ದುಲ್ಲಾ ಮುಸ್ಲಿಯಾರ್ ಕೆಮ್ಮಾರ, ಮುಸ್ತಫಾ ಮುಸ್ಲಿಯಾರ್, ಆರಿಫ್ ಫೈಝಿ ಕುಂಡಾಜೆ, ಎಸ್‌ಕೆಎಸ್‌ಬಿವಿ ಚೇರ್ಮನ್ ಆಗಿ ಅಬ್ದುಲ್ ರಹ್ಮಾನ್ ಫೈಝಿ, ಕನ್ವೀನರ್ ಆಗಿ ಮುನೀರ್ ಯಮಾನಿ ಕಳಾರ, ಕುರುನ್ನುಗಳ್ ಸಂಚಾಲಕರಾಗಿ ಅಶ್ರಫ್ ಮುಸ್ಲಿಯಾರ್ ಕೋಲ್ಪೆ, ಮುಅಲ್ಲಿಂ ಕ್ಷೇಮ ನಿಧಿ ಚೇರ್ಮೆನ್ ಆಗಿ ಅಬ್ದುಲ್ ರಹಿಮಾನ್ ಫೈಝಿ ಕುಂತೂರು, ಮುಅಲ್ಲಿಂ ಕ್ಷೇಮ ನಿಧಿ ಕನ್ವೀನರ್ ಆಗಿ ಹಂಝ ಸಖಾಫಿ ಆತೂರು ಹಾಗೂ ಆತೂರು ರೇಂಜ್ ವ್ಯಾಪ್ತಿಯ ಮದ್ರಸ ಸದರ್ ಉಸ್ತಾದರು ಕಾರ್ಯಕಾರಿ ಸಮಿತಿ ಸದಸ್ಯರು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಪ್ರತಿನಿಧಿಗಳು ಮದ್ರಸ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here