ಪುತ್ತೂರು ವಾಣಿಜ್ಯ ತೆರಿಗೆ ಕಛೇರಿಯ ’ಡಿ’ ದರ್ಜೆ ನೌಕರ ರಾಮಚಂದ್ರ ಹೃದಯಾಘಾತದಿಂದ ನಿಧನ

0

ಕಾವು: ಮಾಡ್ನೂರು ಗ್ರಾಮದ ಕಾವು ತೋಟದಮೂಲೆ ನಿವಾಸಿ, ಪುತ್ತೂರು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ’ಡಿ’ ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರ(ವ.50)ರವರು ಜೂ.4ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಜೆ ವೇಳೆ ದಿಢೀರನೆ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದ ರಾಮಚಂದ್ರರವನ್ನು ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರು ಕಾವು ಅಂಗನವಾಡಿಯಲ್ಲಿ ಸಹಾಯಕಿಯಾಗಿರುವ ಪತ್ನಿ ದೇವಕಿ, ಪುತ್ರರಾದ ರಂಜನ್ ಕುಮಾರ್, ಅಜಿತ್ ಕುಮಾರ್, ಪುತ್ರಿ ಪ್ರತೀಕ್ಷಾ ಆರ್.ಕೆ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here