ಪುತ್ತೂರು: ಗ್ರಾಮ ಪಂಚಾಯತ್ ಕೋಡಿಂಬಾಡಿ ಮತ್ತು ಕಂಪಾನಿಯೋ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಫಿ ಶಿಬಿರವು ಜೂ.15ರಿಂದ29ರ ತನಕ ಕೋಡಿಂಬಾಡಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಲಿದೆ.
ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷೆ ಉಷಾ ಲಕ್ಷ್ಮಣ್ ಪೂಜಾರಿ, ಅಭಿವೃದ್ಧಿ ಅಧಿಕಾರಿ ರೋಹಿತ್ ಎಂ.ಎ., ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ, ರಾಮಣ್ಣ ಗೌಡ ಗುಂಡೋಲೆ ಮತ್ತು ಜಯಪ್ರಕಾಶ್ ಬದಿನಾರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಿಬಿರದಲ್ಲಿ ನೆಮ್ಮದಿ ವೆಲ್‌ನೆಸ್ ಸೆಂಟರ್‌ರವರಿಂದ ಫೂಟ್ ಫಲ್ಸ್ ಥೆರಫಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಶಿಬಿರವು ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 4.30ರ ತನಕ ನಡೆಯಲಿದೆ.
ಪ್ರಥಮ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗಿರುವ ಫೂಟ್ ಪಲ್ಸ್ ಥೆರಫಿಯಲ್ಲಿ ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ಸರಳ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ಔಷಧಿ ರಹಿತವಾಗಿ ಅಡ್ಡಪರಿಣಾಮವಿಲ್ಲದೆ ನಿವಾರಿಸಿಬಹುದಾಗಿದೆ. 30 ನಿಮಿಷದ TENS ಮತ್ತು IMSಥೆರಫಿಯಿಂದ ನಮ್ಮ ದೇಹದಲ್ಲಿ 5 ಕಿ.ಮೀ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಮಾಡಲು ಸಹಕಾರಿಯಾಗುತ್ತದೆ. ಈ ಚಿಕಿತ್ಸೆಯ ಮೂಲಕ ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ವೆರಿಕೋಸ್ ವೇನ್, ಸ್ನಾಯುಸೆಳೆತ, ಊತ, ಪಾರ್ಕಿನ್‌ಸನ್, ಸಯಾಟಿಕಾ, ಸರ್ವಿಕಲ್ ಸ್ಪಾಂಡಿಲೈಟಿಸ್, ನಿದ್ರಾಹೀನತೆ, ಥೈರಾಯಿಡ್, ಕುತ್ತಿಗೆನೋವು, ಸೊರಿಯಾಸಿಸ್, ರಕ್ತದ ಪರಿಚಲನೆ ಸುಧಾರಣೆ, ಪಾರ್ಶ್ವವಾಯು, ಬೆನ್ನುನೋವು, ಬೊಜ್ಜು ನಿವಾರಣೆ, ಬಿ.ಪಿ ಶುಗರ್ ಹಾಗೂ ಇನ್ನಿತರ ಎಲ್ಲಾ ಕಾಯಿಲೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಮೇಕಿನ್ ಇಂಡಿಯಾ ಯೋಜನೆಯಡಿಯಲ್ಲಿ ದೇಶದಾದ್ಯಂತ 350 ಶಾಖೆಗಳನ್ನು ಹೊಂದಿದೆ. ಈ ಚಿಕಿತ್ಸೆಯ ಮೂಲಕ 10ಲಕ್ಷಕ್ಕಿಂತ ಅಧಿಕ ಮಂದಿ ಪರಿಹಾರ ಕಂಡುಕೊಂಡಿದ್ದಾರೆ ಎಂದು ಗ್ರಾ.ಪಂ ಪ್ರಕಟಣೆ ತಿಳಿಸಿದೆ.