ಫಿಲೋಮಿನಾ ಕಾಲೇಜಿನಲ್ಲಿ ಓಪ್ಟಂ ಕಂಪನಿಯ ತರಬೇತಿ ಕಾರ್ಯಕ್ರಮದ ಸಮಾರೋಪ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಪ್ಲೇಸ್ ಮೆಂಟ್‌ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಮೂಲದ ಬಹುರಾಷ್ಟ್ರೀಯ ಹೆಲ್ತ್‌ ಕೇರ್‌ ಮತ್ತು ಇನ್ಶೂರೆನ್ಸ್ಕಂ ಪನಿ ಓಪ್ಟಮ್‌ನ ಮೆಡಿಕಲ್‌ ಕೋಡರ್‌ ಹುದ್ದೆಗಳಿಗಾಗಿ ಹುದ್ದೆಗಳಿಗಾಗಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮುಖಾಂತರ ಆಯ್ಕೆಯಾದ 42 ಅಭ್ಯರ್ಥಿಗಳಿಗೆ ಐದು ವಾರಗಳ ಕಡ್ಡಾಯ ತರಬೇತಿ ಕಾರ್ಯಕ್ರಮ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಆಂಟೊನಿ ಪ್ರಕಾಶ್‌ ಮೊಂತೆರೋ “ಕ್ಯಾಂಪಸ್‌ ನೇಮಪಾತಿ ತರಬೇತಿ ಕಾರ್ಯಕ್ರಮವು ಅಭ್ಯರ್ಥಿಗಳಿಗೆ ತಮ್ಮ ವೃತ್ತಿ ಜೀವನಕ್ಕೆ ಬೇಕಾದ ಕೌಶಲ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳನ್ನು ಮುಂದಿನ ಪರೀಕ್ಷಗೆ ತಯಾರಿ ಮಾಡುವಲ್ಲಿ ಸಹಕಾರಿಯಾಗುತ್ತದೆ. ಈ ತರಬೇತಿಯು ಶೈಕ್ಷಣಿಕ ವಾತಾವರಣ ಹಾಗೂ ವೃತ್ತಿಜೀವನದ ನಡುವಿನ ಸೇತುವೆಯಾಗಿದೆ. ವೃತ್ತಿಬದುಕಿನಲ್ಲಿ ಯಾವತ್ತೂ ಒದಗಿಬಂದ ಅವಕಾಶಗಳನ್ನು ನಿರ್ಲಕ್ಷಿಸಬಾರದು. ಕಲಿಕೆ ನಿರಂತರ ಪ್ರಕ್ರಿಯೆ. ಉದ್ಯೋಗ ದೊರೆತಮೇಲೆ ಆ ಉದ್ಯೋಗ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಗೆ ತಕ್ಕಹಾಗೆ ನಾವು ನಮ್ಮನ್ನು ಸಕಾರಾತ್ಮಕವಾಗಿ ಅಳವಡಿಸಿಕೊಂಡಲ್ಲಿ ಮಾತ್ರ ಯಶಸ್ಸನ್ನು ಕಾಣಬಹುದು” ಎಂದು ಹೇಳಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಓಪ್ಟಂ ಕಂಪನಿಯ ತರಬೇತುದಾರರಾದ ಯಾಡ್ಲಾ ರಾನಿಶಾ ಮಾತನಾಡಿ “ಇಲ್ಲಿ ತರಬೇತಿ ಪಡೆಯುತ್ತಿದ್ದ 42 ಮಂದಿ ವಿದ್ಯಾರ್ಥಿಗಳಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳಷ್ಟೇ ಸಂತ ಪಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು. ಆದರೆ ಇಲ್ಲಿನ ಪ್ರಾಂಶುಪಾಲರಾಗಲೀ ಆಡಳಿತ ಮಂಡಳಿಯವರಾಗಲೀ ಭೇದಭಾವ ತೋರದೆ ಇತರ ವಿದ್ಯಾರ್ಥಿಗಳಿಗೂ ಕಾಲೇಜಿನ ಭೌತಿಕ ಸೌಲಭ್ಯಗಳನ್ನು ಮುಕ್ತವಾಗಿ ಉಪಯೋಗಿಸುವ ಅವಕಾಶ ನೀಡಿರುತ್ತಾರೆ, ಈ ರೀತಿಯ ಮನೋಭಾವ ಎಲ್ಲರಲ್ಲೂ ಇರುವುದಿಲ್ಲ. ಓಪ್ಟಂ ಕಂಪನಿಯ ವತಿಯಿಂದ ಕಾಲೇಜಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಹೇಳಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ತರಬೇತಿಯ ಸಂದರ್ಭದಲ್ಲಿ ಉತ್ತಮ ಪ್ರಗತಿಯನ್ನು ಪ್ರಕಟಪಡಿಸಿದ 4 ಮಂದಿ ಅಭ್ಯರ್ಥಿಗಳಿಗೆ ಓಪ್ಟಂ ಕಂಪನಿಯ ವತಿಯಂದ ಬಹುಮಾನ ನೀಡಲಾಯಿತು.


ದೀಕ್ಷಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಪ್ಲೇಸ್‌ಮೆಂಟ್‌ ಅಧಿಕಾರಿ ಡಾ| ರಾಧಾಕೃಷ್ಣ ಗೌಡ ಸ್ವಾಗತಿಸಿದರು. ಪ್ಲೇಸ್‌ಮೆಂಟ್‌ ಸೆಲ್‌ನ ಸದಸ್ಯರಾದ ಧನ್ಯ ಪಿಟಿ ವಂದಿಸಿದರು. ಜೋನ್ಸನ್‌ ಡೇವಿಡ್‌ ಸಿಕ್ವೆರಾ ಕಾರ್ಯಕ್ರಮ ನಿರೂಪಿಸಿದರು. ಓಪ್ಟಮ್‌ ಕಂಪನಿಯ ತರಬೇತುದಾರರಾದ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಎಎಪಿಸಿ ಯ ಸಿಪಿಸಿ ಪ್ರಮಾಣೀಕರಣ ಪರೀಕ್ಷೆಯನ್ನು ಎದುರಿಸಲು ಅರ್ಹರಾಗಿರುತ್ತಾರೆ, ಸದರಿ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಬಾರಿಗೆ ಆಯೋಜಿಸಲಾಗಿದ್ದು ಕಳೆದ ಬಾರಿ ಪರೀಕ್ಷೆಗೆ ಹಾಜರಾದ 42 ಅಭ್ಯರ್ಥಿಗಳಲ್ಲಿ 40 ಮಂದಿ ಓಪ್ಟಂ ಕಂಪನಿಯ ಮೆಡಿಕಲ್‌ ಕೋಡರ್‌ ಹುದ್ದೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here