ಪುತ್ತೂರು: ಪ್ರಸಿದ್ಧ ಟೂವೀಲರ್ ಉತ್ಪಾದಕ ಸಂಸ್ಥೆಯಾಗಿ, ಅತ್ಯಧಿಕ ವಾಹನ ಮಾರಾಟ ಮೂಲಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಅಧಿಪತ್ಯ ಸ್ಥಾಪಿಸಿರುವ ‘ಹೋಂಡಾ’ ನಿರಂತರವಾಗಿ ಗ್ರಾಹಕರ ಇಚ್ಛೆ, ಬೇಡಿಕೆಗೆ ಅನುಗುಣವಾಗಿ ನವನವೀನ ವಿನ್ಯಾಸ, ತಂತ್ರಜ್ಞಾನ ಗುಣಮಟ್ಟ ಹೊಂದಿರುವ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಇದೀಗ ಬೈಕ್ ಸೆಗ್ಮೆಂಟ್ನಲ್ಲಿ 100ಸಿಸಿಯ ‘ಹೋಂಡಾ’ ಟೂವೀಲರ್ ಬೇಕೆನ್ನುವ ಗ್ರಾಹಕರ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ‘ಹೋಂಡಾ ಶೈನ್ 100 ಸಿಸಿ’ ಬೈಕ್ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗಲೇ ಗ್ರಾಹಕರಿಗೆ ನೂತನ ಮಾದರಿ ಬೈಕ್ನ ವಿತರಣೆ ಆರಂಭವಾಗಿದ್ದು, ಹೋಂಡಾ ಸಂಸ್ಥೆಯ ಅಧಿಕೃತ ಡೀಲರ್, ತನ್ನ ಗುಣಮಟ್ಟದ, ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ‘ತಿರುಮಲ ಹೋಂಡಾ’ದ ಕಡಬ ಶಾಖೆಯಲ್ಲಿ ಜೂ.19ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಕಡಬ ತಾಲೂಕು ಕಚೇರಿ ಮುಂಭಾಗದಲ್ಲಿರುವ ವಿಶಾಲ ತಿರುಮಲ ಹೋಂಡಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿರುಮಲ ಹೋಂಡಾ ಸಂಸ್ಥೆಯ ಮಾಲಕರಾದ ಕೃಷ್ಣಕಿಶೋರ್ ಎನ್.ಟಿ.ಯವರು ನೂತನ ‘ಹೋಂಡಾ ಶೈನ್ 100 ಸಿಸಿ’ ಬೈಕ್ನ್ನು ಅನಾವರಣಗೊಳಿಸಿದರು.
ತಿರುಮಲ ಹೋಂಡಾದ ಸೇಲ್ಸ್ ಹೆಡ್ ಕಾರ್ತಿಕ್ ರೈ ಸ್ವಾಗತಿಸಿ ಮಾತನಾಡಿ, ತಿರುಮಲ ಹೋಂಡಾದ ಪಾಲಿಗೆ ಕಡಬ ತಾಲೂಕು ಹಿಂದಿನಿಂದಲೂ ಅತ್ಯಧಿಕ ಗ್ರಾಹಕರನ್ನು ಹೊಂದಿರುವ ತಾಣ. ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಏರುತ್ತಿದೆ. ಕಡಬ ಶಾಖೆಯು 10 ವರ್ಷಗಳನ್ನು ಪೂರೈಸಿರುವುದು ಇದಕ್ಕೆ ಸಾಕ್ಷಿ. ಈ ನಿಟ್ಟಿನಲ್ಲಿ ಎಲ್ಲಾ ಗ್ರಾಹಕರಿಗೆ ಧನ್ಯವಾದಗಳು. ಹೋಂಡ ಶೈನ್ ಬಹಳಷ್ಟು ಜನರ ಅಚ್ಚುಮೆಚ್ಚಿನ ಮೋಟಾರ್ ಸೈಕಲ್. 2006ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಶೈನ್ 1 ಕೋಟಿ 15ಲಕ್ಷ ಹೆಮ್ಮೆಯ ಗ್ರಾಹಕರನ್ನು ಹೊಂದಿದೆ. ಗುಣಮಟ್ಟ, ಆಕರ್ಷಕ ವಿನ್ಯಾಸ, ಕೈಗೆಟಕುವ ದರವೇ ಇದರ ಯಶಸ್ಸಿಗೆ ಮುಖ್ಯ ಕಾರಣ. ಅತೀ ಕಡಿಮೆ ಇಂಧನ ಬಳಸಿ ಅಧಿಕ ಮೈಲೇಜ್ ನೀಡುವ ಬಜೆಟ್ ಫ್ರೆಂಡ್ಲಿ ಹೋಂಡಾ ಬಿಡುಗಡೆ ಮಾಡಿರುವುದು ಸಂತಸದಾಯಕ ಎಂದು ಹೇಳಿದರು.
ತಿರುಮಲ ಹೋಂಡಾದ ಸರ್ವೀಸ್ ಮ್ಯಾನೇಜರ್ ಮನಮೋಹನ್ ಮಾತನಾಡಿ, 1000 ಕಿಮೀ/ 1 ತಿಂಗಳಲ್ಲಿ ಪ್ರಥಮ ಸರ್ವೀಸ್ ಮಾಡಿಸಬೇಕಾಗುತ್ತದೆ. ಮುಂದಿನ ಸರ್ವೀಸ್ 6 ತಿಂಗಳಿಗೆ. ಇದೀಗ 10 ವರ್ಷಗಳ ವ್ಯಾರಂಟಿ ಪ್ಲಸ್ ಯೋಜನೆ ಬಂದಿದ್ದು, ಹೊಸ ವಾಹನ ಖರೀದಿದಾರರಿಗೆ ಹೋಂಡಾದ ಪರವಾಗಿ ಇದನ್ನು ನೀಡುತ್ತೇವೆ. ಜೊತೆಗೆ 2023ರಿಂದ ಹತ್ತು ವರ್ಷದೊಳಗಿನ ಹಿಂದಿನ ವಾಹನಗಳಿಗೂ ಈ ವ್ಯಾರಂಟಿ ಪ್ಲಸ್ ಯೋಜನೆಯನ್ನು ಖರೀದಿಸಬಹುದು. ವಾಹನಗಳ ಸರ್ವಿಸ್ನ್ನು 6 ತಿಂಗಳಿಗೊಮ್ಮೆ ನಿಗದಿತ ಸಮಯದಲ್ಲೇ ಮಾಡಿಸಬೇಕು. ಕೆಲವೊಮ್ಮೆ ಗ್ರಾಹಕರು ಬ್ಯುಸಿಯಾಗದ್ದಾಗ ನಮ್ಮ ಕಡೆಯಿಂದ ಕರೆಮಾಡಿ ಮಾಹಿತಿ ನೀಡಿ ನೆನಪಿಸುತ್ತಿರುತ್ತೇವೆ. ಈಗಾಗಲೇ ಪುತ್ತೂರು, ಸುಳ್ಯ, ಬೆಳ್ಳಾರೆ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ ಮತ್ತು ಕಬಕ ಹೀಗೆ 7 ಕಡೆಗಳಲ್ಲಿ ಸರ್ವೀಸ್ ಸೌಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಬೇಕು ಎಂದು ಹೇಳಿದರು.
ಹೋಂಡಾ ಟ್ರೈನಿಂಗ್ ಮ್ಯಾನೇಜರ್ ಬ್ರಿಜೇಶ್ ರೈ ಹೋಂಡಾ ಶೈನ್ 100 ಸಿಸಿ ಟೂವೀಲರ್ನ ತಾಂತ್ರಿಕ ವೈಶಿಷ್ಟ್ಯತೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ತಿರುಮಲ ಹೋಂಡಾ ಸಂಸ್ಥೆಯ ಜನರಲ್ ಮ್ಯಾನೇಜರ್ ಅಖಿಲೇಷ್ ಎನ್., ತಿರುಮಲ ಹೋಂಡಾ ಕಡಬ ಶಾಖಾ ಮ್ಯಾನೇಜರ್ ಭರತ್, ಸರ್ವೀಸ್ ಕೋಆರ್ಡಿನೇಟರ್ ಪ್ರವೀಣ್, ಸೀನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್ ಗಣೇಶ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಮೋಹಿತ್ ಕಾರ್ಯಕ್ರಮ ನಿರೂಪಿಸಿದರು.
ರೊಟೇಟಿಂಗ್ ಡಿಸ್ಪ್ಲೇ ಮೂಲಕ ಅನಾವರಣ
ತಿರುಮಲ ಹೋಂಡಾ ಸಂಸ್ಥೆಯು ಸದಾ ಒಂದಲ್ಲ ಒಂದು ಹೊಸತನಗಳ ಮೂಲಕ ಗಮನ ಸೆಳೆಯುತ್ತಿದ್ದು, ಈ ಬಾರಿ ವಿಶಿಷ್ಟವಾಗಿ ರೊಟೇಟಿಂಗ್ ಡಿಸ್ಪ್ಲೆ ಮಾದರಿಯಲ್ಲಿ ನೂತನ ಬೈಕ್ನ್ನು ಲಾಂಚ್ ಮಾಡುವ ಮೂಲಕ ಗಮನ ಸೆಳೆದಿದೆ. ನೂತನ ಬೈಕ್ ಅನಾವರಣದ ವೇಳೆ ಮಾಲಕರಾದ ಕೃಷ್ಣಕಿಶೋರ್ ಎನ್.ಟಿ.ಯವರು ರಿಮೋಟ್ನ ಬಟನ್ ಪ್ರೆಸ್ ಮಾಡುತ್ತಿದ್ದಂತೆ ವೃತ್ತಾಕಾರದಲ್ಲಿ ತಿರುಗುವ ಪ್ಲ್ಯಾಟ್-ಫಾರ್ಮ್ನಲ್ಲಿ, ಕಲರ್-ಫುಲ್ ಫೈರ್ವರ್ಕ್ಸ್ನ ನಡುವೆ ಬೈಕ್ ಅನಾವರಣಗೊಂಡಿತು. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ವಿನೂತನ ಮಾದರಿಯ ಲಾಂಚ್ಗೆ ತಿರುಮಲ ಹೋಂಡಾ ಸಾಕ್ಷಿಯಾಯಿತು.
10 ಗ್ರಾಹಕರಿಗೆ ಕೀ ಹಸ್ತಾಂತರ
ಜೂ.19ರಂದು ತಿರುಮಲ ಹೋಂಡಾದ 7 ಶಾಖೆಗಳಲ್ಲಿ ಒಟ್ಟು 10 ಗ್ರಾಹಕರಿಗೆ ಹೋಂಡಾ ಶೈನ್ 100 ಸಿಸಿ ಬೈಕ್ನ ಕೀ ಹಸ್ತಾಂತರ ಮಾಡಲಾಯಿತು. ಕಡಬ ಶಾಖೆಯಲ್ಲಿ ಪ್ರಥಮ ಗ್ರಾಹಕರಾದ ಇಸ್ಮಾಯಿಲ್ ಕೆ., ಬಾಲಸುಬ್ರಹ್ಮಣ್ಯ ಪ್ರಭು, ಸುಧಾಕರ್, ಪಿ.ಚಂದ್ರರವರಿಗೆ ತಿರುಮಲ ಹೋಂಡಾದ ಮಾಲಕರಾದ ಕೃಷ್ಣಕಿಶೋರ್ ಎನ್.ಟಿ.ಯವರು ಕೀ ಹಸ್ತಾಂತರಿಸಿದರು. ಪುತ್ತೂರು ಶಾಖೆಯಲ್ಲಿ ಸ್ವೀಕೃತ್ ಆನಂದ್, ಸಂಪ್ರೀತ್ ಕೆ., ಬೆಳ್ಳಾರೆ ಶಾಖೆಯಲ್ಲಿ ಗಿರೀಶ್, ಲೋಹಿತ್, ಕಬಕ ಶಾಖೆಯಲ್ಲಿ ಬಾಲಕೃಷ್ಣ ಪೂಜಾರಿ, ಮಹೀಂದ್ರಾ ಗೌಡ ಅವರು ಪ್ರಥಮ ಗ್ರಾಹಕರಾಗಿ ಬೈಕ್ನ್ನು ಡೆಲಿವರಿ ಪಡೆದುಕೊಂಡರು.
ತಾಂತ್ರಿಕ ವೈಶಿಷ್ಟ್ಯತೆಗಳು
ಬಲಿಷ್ಠ ಇಂಜಿನ್: ಹೋಂಡಾ ಶೈನ್ 100 ಸಿಸಿ ಬೈಕ್ ಈವರೆಗೆ 100 ಸಿಸಿ ವಾಹನ ಮಾರುಕಟ್ಟೆಗೆ ಬಿಡುಗಡೆ ಮಾಡಿರಲಿಲ್ಲ. ಮೈಲೇಜ್ ವಾಹನದ ಬೇಡಿಕೆಗೆ ಅನುಗುಣವಾಗಿ ಹೋಂಡಾ ಶೈನ್ 100 ಸಿಸಿ ಬಿಡುಗಡೆ ಮಾಡಿದೆ. 98.99 ಸಿಸಿ ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, ಇದು 4 ಸ್ಪೀಡ್ ಗೇರ್ ಬಾಕ್ಸ್ನೊಂದಿಗೆ 7.35 ಹಾರ್ಸ್ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದು ಗುಡ್ಡಗಾಡು ಪ್ರದೇಶದಲ್ಲಿ ಓಡಾಡಲು ಬೇಕಾದ ಪುಲ್ಲಿಂಗ್ ಸಾಮರ್ಥ್ಯವನ್ನು ನೀಡುತ್ತದೆ.
ಉದ್ದವಾದ ಸೀಟ್: ಹಿಂಬದಿ ಸವಾರರಿಗೂ ಅನುಕೂಲಕವಾಗುವಂತಹ ಆರಾಮದಾಯಕ ಸಿಂಗಲ್ ಪೀಸ್ ಸೀಟ್ ಹೊಂದಿದ್ದು, 677 ಎಂಎಂ ಉದ್ದದ ಸೀಟ್ ಹೊಂದಿದೆ. ಸೀಟ್ ಹೈಟ್ 786 ಎಂಎಂ ಇದೆ. 100 ಸಿಸಿ ಕೆಟಗರಿಯಲ್ಲಿ ಉದ್ದದ ಸೀಟ್ ಲೆಂಥ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಸ್ಟೈಲಿಷ್ ಅಲಾಯ್ ವೀಲ್ಸ್: 1245 ಎಂಎಂ ವೀಲ್ ಬೇಸ್ ಹೊಂದಿದ್ದು, ಉತ್ತಮ ರೋಡ್ ಗ್ರಿಪ್ ಇದೆ. 99 ಕೆಜಿ ತೂಕ ಹೊಂದಿದೆ. ಮಿನಿಮಮ್ ಟನಿಂಗ್ ರೇಡಿಯಸ್ ಹೊಂದಿದ್ದು, ಆರಾಮವಾಗಿ ತಿರುಗಿಸಬಹುದು. 168 ಎಂ.ಎಂ. ರೋಡ್ ಗ್ರೌಂಡ್ ಕ್ಲಿಯರೆನ್ಸ್ ಇದೆ.
ಇ20 ಫ್ಯೂಯೆಲ್ ಕಾಂಪ್ಲಿಯೆಂಟ್: 100 ಸಿಸಿ ಬೈಕ್ ಸೆಗ್ಮೆಂಟ್ನಲ್ಲಿ ಈವರೆಗೆ ಇರದ ಅನೇಕ ಹೊಸ ಫೀಚರ್ಸ್ನ್ನು ಇದು ಹೊಂದಿದ್ದು, ಇ20 ಫ್ಯೂಯೆಲ್ ಕಾಂಪ್ಲಿಯೆನ್ಸ್ ಹೊಂದಿದೆ. ಅಂದರೆ 20 ಎಥೆನಾಲ್ ಮತ್ತು 80% ಪೆಟ್ರೋಲ್ ಮಿಶ್ರಣದ ಇ20 ಇಂಧನದ ಮೂಲಕವೂ ಇದು ಓಡುತ್ತದೆ.
ಇಂಧನ ಕ್ಷಮತೆ: ಹೊಸ ಬೈಕ್ ಮಾದರಿಯು ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್ಗೆ 80-85 ಕಿಮೀ ಮೈಲೇಜ್ ನೀಡುತ್ತದೆ. ಟ್ಯಾಂಕ್ ಕೆಪ್ಯಾಸಿಟಿ 9 ಲೀ ಆಗಿದೆ.
10 ವರ್ಷಗಳ ವಿಸ್ತರಿತ ವ್ಯಾರಂಟಿ: ಗುಣಮಟ್ಟದ ವಾಹನಗಳಿಗೆ ಹೋಂಡಾ ಈಗಾಗಲೇ ಪ್ರಸಿದ್ಧಿ ಪಡೆದಿದ್ದು, ಇದೀಗ ಗುಣಮಟ್ಟದ ಖಾತ್ರಿಗಾಗಿ 10 ವರ್ಷಗಳ ವ್ಯಾರಂಟಿಯನ್ನು ನೀಡಿದೆ.
ಇದರೊಂದಿಗೆ ಹೊಸ ಬೈಕಿನಲ್ಲಿ ಆಲ್ ಬ್ಲ್ಯಾಕ್ ಅಲಾಯ್ ವ್ಹೀಲ್, ಹಾಲೋಜೆನ್ ಹೆಡ್ ಲ್ಯಾಂಪ್, ಅಲ್ಯುಮಿನಿಯಂ ಗ್ರ್ಯಾಬ್ರೈಲ್, ಡ್ಯುಯಲ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕಾಂಬಿ ಬ್ರೇಕಿಂಗ್ ಸಿಸ್ಟಂ ಮತ್ತು ಸೈಡ್ ಸ್ಟ್ಯಾಂಡ್ ಅಲರ್ಟ್ ಫೀಚರ್ಸ್ ನೀಡಲಾಗಿದೆ.
ಬೆಲೆ ಕೇವಲ 66,6೦೦/-
ಹೋಂಡಾ ಶೈನ್ 100 ಸಿಸಿ ಬೈಕ್ನ ಎಕ್ಸ್ ಶೋರೂಂ ಬೆಲೆಯು ಕೇವಲ 66,600 ರೂ. ಆಗಿದೆ. ಈ ಮೂಲಕ ಎಲ್ಲರ ಕೈಗೆಟುಕುವ ದರದಲ್ಲಿ ಇದನ್ನು ರೂಪಿಸಲಾಗಿದ್ದು, ಬಜೆಟ್ ಫ್ರೆಂಡ್ಲಿ ವೆಹಿಕಲ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9108993433