ಪುತ್ತೂರು: ಸ್ವರ್ಣೋದ್ಯಮದಲ್ಲಿ 66 ವರ್ಷಗಳಿಂದ ಜನಮನ ಗೆದ್ದು, ಚಿನ್ನಾಭರಣ ಪ್ರಿಯರ ಮನೆಮಾತಾಗಿ ಕರಾವಳಿ ಹಾಗೂ ಮಲೆನಾಡುಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ಇದೀಗ ಪುತ್ತೂರಿನ ಚಿನ್ನಾಭರಣ ಮಳಿಗೆಯಲ್ಲಿ ಜೂನ್ 26ರಿಂದ ಸೀಮಿತ ಆವಧಿಯವರೆಗೆ ’ಕಿವಿಯೋಲೆ ಮತ್ತು ಉಂಗುರಗಳ ಹಬ್ಬ’ ಆಯೋಜಿಸಿದೆ. ಮುಂಗಾರಿನ ಮೆರುಗನ್ನು ವೃದ್ಧಿಸಲು ಆಯೋಜಿಸಲಾದ ಈ ವಿಶೇಷ ಮಾರಾಟದಲ್ಲಿ ಆಕರ್ಷಕ ವಿನ್ಯಾಸದ ಕಿವಿಯೋಲೆ ಮತ್ತು ಉಂಗುರಗಳು ಕನಿಷ್ಠ ಮೇಕಿಂಗ್ ಜಾರ್ಜ್‌ನಲ್ಲಿ (10% ರಿಂದ ಆರಂಭ) ಲಭ್ಯವಿದ್ದು , ಎಲ್ಲಾ ವಯೋಮಾನದ ಮಹಿಳೆಯರ, ಮಕ್ಕಳ ಹಾಗೂ ಪುರುಷರಿಗೊಪ್ಪುವ ವೈವಿಧ್ಯಮಯ ಚಿನ್ನದೊಡವೆಗಳ ಸಂಗ್ರಹ ಇಲ್ಲಿದೆ.
ಅರ್ಧ ಗ್ರಾಂ ನಿಂದ ಮೊದಲ್ಗೊಂಡು 32 ಗ್ರಾಂ ತೂಕದವರೆಗೆ ವಿವಿಧ ವಿನ್ಯಾಸಗಳ ಕಿವಿಯೋಲೆಗಳ ಸಂಗ್ರಹ ಲಭ್ಯ. ಸ್ಥಳೀಯ ನುರಿತ ಕುಶಲಕರ್ಮಿಗಳಿಂದ ತಯಾರಿಸಿದ ಕಿವಿಯೋಲೆಗಳು ಮಾತ್ರವಲ್ಲದೆ ಗಿಳಿಯೋಲೆ, ಚಾಂದ್‌ಬಾಲಿ, ಕೊಲ್ಕತ್ತಾ, ರಾಜ್‌ಕೋಟ್, ಕಾರವಾರ ಮುಂತಾದ 2,900ಕ್ಕೂ ಮಿಕ್ಕಿ ಕಿವಿಯೋಲೆಗಳು ಹಾಗೂ2,500ಕ್ಕೂ ಮಿಕ್ಕಿ ವಿವಿಧ ವಿನ್ಯಾಸದ ಉಂಗುರಗಳ ಸಂಗ್ರಹ ಗ್ರಾಹಕರ ಆಯ್ಕೆಗೆ ಲಭ್ಯವಿದೆ. ಕಳೆದ ಮೇ ತಿಂಗಳಿನಲ್ಲಿ ಚಿನ್ನದ ದರ ಪ್ರತಿ ಗ್ರಾಂ ಗೆ ರೂ 5,720/- ತನಕ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲಿ ಪ್ರತಿ ಗ್ರಾಂ ಗೆ ರೂ 300/- ರಷ್ಟು ಇಳಿಕೆಯಾಗಿ ಚಿನ್ನದ ದರ ಇಳಿಕೆಯ ಪ್ರಯೋಜನವನ್ನು ಸಹ ಗ್ರಾಹಕರು ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.