ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಂತೆ ಶ್ರೀ ದೇವಳದ ಜೀರ್ಣೋದ್ಧಾರದ ಕುರಿತಾಗಿ “ಅಷ್ಟಮಂಗಲ” ಪ್ರಶ್ನಾ ಚಿಂತನೆಯು ಸುಸಂಪನ್ನವಾಗಿ ನೆರವೇರಿತು.
ದೈವಜ್ಞರಾದ ಜ್ಯೋತಿಷಿ ಕೆ.ಯು. ರಾಘವ ಪೊದುವಾಳ ಮತ್ತು ಡಾ. ಯತೀಶ್ ಆರ್. ಪೊದುವಾಳ ಇವರ ನೇತೃತ್ವದಲ್ಲಿ ಅಷ್ಟಮಂಗಲ ಚಿಂತನೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ. ಗಣೇಶ ಶೆಣೈ ಮತ್ತು ಮೊಕ್ತೇಸರರಾದ ಡಾ. ಎಂ ರತ್ನಾಕರ ಶೆಣೈ, ಕೆ.ಅನಂತರಾಯ ಕಿಣಿ, ಯು. ನಾಗರಾಜ ಭಟ್ ಮತ್ತು ಪಿ ದೇವಿದಾಸ ಭಟ್, ಪ್ರಮುಖರಾದ ಕರಾಯ ಗಣೇಶ ನಾಯಕ್, ಪಿ. ಉಪೇಂದ್ರ ಪೈ, ಎಚ್. ವಾಸುದೇವ ಪ್ರಭು, ಎನ್. ಮಾಧವ ನಾಯಕ್, ಪಿ.ಹರೀಶ್ ಪೈ, ಕೆ. ರವಳನಾಥ ಪ್ರಭು, ಶ್ರೀನಿವಾಸ ಪಿ. ನಾಯಕ್, ಯೆಳ್ತಿಮಾರ್ ಅನಂತ ಶೆಣೈ, ಶಾಂತರಾಮ ಶೆಣೈ, ಸರಪ ಜಯಂತ ನಾಯಕ್, ಯು. ದಾಮೋದರ ನಾಯಕ್, ಕೆ.ನರಸಿಂಹ ನಾಯಕ್, ನೀನಿ ಸಂತೋಷ್ ಕಾಮತ್, ಬಿ.ಟಿ. ವಸಂತ ಶೆಣೈ, ಗಿರಿಧರ್ ನಾಯಕ್, ಎಚ್.ವಿನಾಯಕ ಪ್ರಭು, ನಂದಾವರ ಯೋಗೀಶ ಶೆಣೈ, ಕೆ. ಗೋಪಾಲಕೃಷ್ಣ ಪೈ, ಯು. ರಾಜೇಶ ಪೈ, ವೈದಿಕರಾದ ಪಳ್ತಿಲ್ ನರಸಿಂಹ ಭಟ್, ಸುಬ್ರಹ್ಮಣ್ಯ ಭಟ್, ರವೀಂದ್ರ ಭಟ್, ಸಂದೀಪ್ ಭಟ್ ಉಪಸ್ಥಿತರಿದ್ದರು.