ಅಧ್ಯಕ್ಷ:ಶಿವಪ್ಪ ನಾಯ್ಕ ನೆಕ್ಕಿಲು,ಕಾರ್ಯದರ್ಶಿ:ಬಿ.ಜಯರಾಮ ಬೊಳಿಂಜ,ಕೋಶಾಧಿಕಾರಿ:ದೇವಪ್ಪ ನಾಯ್ಕ ಕೇದಗೆದ
ಪುತ್ತೂರು: ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯು ಜು.16 ರಂದು ನರಿಮೊಗರು ಸೇವಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಮೋಹನ ನಾಯ್ಕ ಕೇದಗೆದಡಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಎನ್.ಎಸ್ ರವರು ಮಾತನಾಡಿ, ಸಂಘವು 25 ವರ್ಷಗಳಿಂದ ನಡೆದು ಬಂದ ಹಾದಿಯನ್ನು ಪ್ರಸ್ತಾಪಿಸಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬಾಲಕೃಷ್ಣ ನಾಯ್ಕ ಕಪ್ಪೆಕೆರೆ ಹಾಗೂ ಹೊನ್ನಪ್ಪ ನಾಯ್ಕ ಅಮ್ಮುಂಜೆರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ಮಹಾಲಿಂಗ ನಾಯ್ಕ ಮಾತನಾಡಿ, 25 ವರ್ಷಗಳಿಂದ ಸಂಘವು ಎಲ್ಲಾ ಪೂರ್ವಾಧ್ಯಕ್ಷರುಗಳ ಹಾಗೂ ಸದಸ್ಯರುಗಳ ಸಹಕಾರದೊಂದಿಗೆ ಸಂಘವು ಸದೃಢವಾಗಿ ಬೆಳೆದು ನಿಂತಿದೆ. ಮುಂದೆಯೂ ಅಭಿವೃದ್ಧಿ ಪಥದಲ್ಲಿ ಸಾಗಲು ಎಲ್ಲರ ಸಹಕಾರ ಕೋರಿದರು.
ಬೆಳಿಗ್ಗೆ ಗಣಹೋಮ ಹಾಗೂ ಸತ್ಯನಾರಾಯಣ ಪೂಜೆಯೊಂದಿಗೆ ಸಭೆ ಆರಂಭವಾಯಿತು. ಈ ಸಂದರ್ಭದಲ್ಲಿ ಮುಂಡೂರಿನ ನಡುಗುಡ್ಡೆ ವಿಕಲಚೇತನ ಬಾಲಕ ಪಾರ್ವತಿಯವರ ಪುತ್ರ ರಮೇಶ್ ರವರಿಗೆ ಬಾಲಕೃಷ್ಣ ನಾಯ್ಕ ಕಪ್ಪೆಕೆರೆರವರ ಪ್ರಾಯೋಜಕತ್ವದಲ್ಲಿ ಆರ್ಥಿಕ ಧನಸಹಾಯ ನೀಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಯೋಗೀಶ ಪಿ.ನಾಯ್ಕ ವಾರ್ಷಿಕ ವರದಿಯನ್ನು, ಕೋಶಾಧಿಕಾರಿ ಶಶಿಕಲಾ ಬಿ. ಲೆಕ್ಕಪತ್ರ ಮಂಡಿಸಿದರು. ಕು|ಶ್ರಾವ್ಯ ಪ್ರಾರ್ಥಿಸಿದರು. ಸುಂದರ ನಾಯ್ಕ ಬಿ.ಕೆ ಸ್ವಾಗತಿಸಿ, ದೇವಪ್ಪ ನಾಯ್ಕ ಕೇದಗೆದಡಿ ವಂದಿಸಿದರು. ಕೃಷ್ಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಪದಾಧಿಕಾರಿಗಳ ಆಯ್ಕೆ..
ಮಹಾಸಭೆ ಬಳಿಕ 2023-24ನೇ ಸಾಲಿನ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಶಿವಪ್ಪ ನಾಯ್ಕ ನೆಕ್ಕಿಲು ಅವಿರೋಧವಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಬಿ.ಜಯರಾಮ ಬೊಳಿಂಜ, ಕೋಶಾಧಿಕಾರಿಯಾಗಿ ದೇವಪ್ಪ ನಾಯ್ಕ ಕೇದಗೆದಡಿರವರು ಆಯ್ಕೆಯಾದರು ಜೊತೆಗೆ 23 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.