ಪೂಂಜರ ಪತ್ರಿಕೆ ಬಂದ ಮೇಲೆ `ಸುದ್ದಿಬಿಡುಗಡೆ’ಯ ನಿಜವಾದ ಬೆಲೆ ಜನರಿಗೆ ಅರ್ಥವಾಗಿದೆ, ಪ್ರಸಾರ ಸಂಖ್ಯೆ ಜಾಸ್ತಿಯಾಗಿದೆ-ಆದರೂ ಶಾಸಕ ಹರೀಶ್ ಪೂಂಜರ ಮಾತಿನ ಅರ್ಥ ತಿಳಿಯಲು ಸುದ್ದಿ ಬಿಡುಗಡೆಯ ನಡಿಗೆ-ಜನರ ಕಡೆಗೆ

0

ಹರೀಶ್ ಪೂಂಜರೇ ನಿಮಗೆ ನಿರೀಕ್ಷಿತ ಓಟು ಸಿಗಲಿಲ್ಲ’ ಎಂದು, ಹಿಂದು ಸಮಾಜಕ್ಕೆ ಏನು ಅನ್ಯಾಯ ಮಾಡಿದ್ದೇನೆ ಎಂದು ಪ್ರಶ್ನಿಸಿದ್ದೀರಿ. ದೇವಸ್ಥಾನಗಳ, ರಸ್ತೆಗಳ, ಅಭಿವೃದ್ಧಿ ಮಾಡಿದ್ದು ತಪ್ಪೇ ಎಂದು ಕೇಳಿದ್ದೀರಿ.ಅದು ಕೇಳಬೇಕಾದದ್ದೇ. ಆದರೆ 37 ವರ್ಷಗಳ ಸುದ್ದಿಬಿಡುಗಡೆ ಪತ್ರಿಕೆ ಬೆಳ್ತಂಗಡಿಯಲ್ಲಿ ನಿಷ್ಪಕ್ಷಪಾತವಾಗಿ, ಜನಪರವಾಗಿ ಕೆಲಸ ಮಾಡಿದ್ದು ತಪ್ಪೇ ಎಂದು ಶಾಸಕರಾದ ನೀವು ಹೇಳ ಬೇಕಲ್ಲವೇ?

ಅಂದು ಪೂಂಜರನ್ನು ಹೊತ್ತಿದ್ದೀರಿ. ಇಂದು ಅನುಭವಿಸುತ್ತಿದ್ದೀರಿ.
ನೀವು ಬೆಳ್ತಂಗಡಿಗೆ ಬಂದು ಬಿಜೆಪಿ ಅಭ್ಯರ್ಥಿಯಾಗಲು ಪ್ರಯತ್ನಿಸಿದ ಸಮಯದಿಂದ ಹಿಡಿದು ಶಾಸಕರಾಗಿ ಆಯ್ಕೆಯಾಗಿ ಇಂದಿನವರೆಗೆ ನಿಮ್ಮ ಕೆಲಸಗಳ ಬಗ್ಗೆ ಪುಟಗಟ್ಟಲೆ ವರದಿಗಳನ್ನು ಮಾಡಿದ್ದೇವೆ. ಪ್ರಾರಂಭದಲ್ಲಿ ಬೆಳ್ತಂಗಡಿಯ ಜನತೆಗೆ ನಿಮ್ಮನ್ನು ಪರಿಚಯಿಸುವಲ್ಲಿ ಎಲ್ಲಾ ಮಾಧ್ಯಮದ ಪಾತ್ರವಿದ್ದರೂ ಸುದ್ದಿ ಬಿಡುಗಡೆಯ ಪಾತ್ರ ಉಳಿದೆಲ್ಲಾ ಪತ್ರಿಕೆಗಿಂತ ಜಾಸ್ತಿ ಇತ್ತು ಎಂಬುವುದು ನಿಮಗೂ, ನಿಮ್ಮ ಅಭಿಮಾನಿಗಳಿಗೂ ತಿಳಿದಿದೆ. ಎಷ್ಟೋ ಜನರುಅಂದು ನೀವು ಪೂಂಜರನ್ನು ಹೊತ್ತಿದ್ದೀರಿ. ಇಂದು ಅನುಭವಿಸುತ್ತಿದ್ದೀರಿ’ ಎಂದು ಹೇಳಿದ್ದಾರೆ. ಅದಕ್ಕೆ ನಾವು ಅಂದು ಮತ್ತು ಇಂದಿಗೂ ಪೂಂಜರ ಉತ್ತಮ ಕೆಲಸಗಳನ್ನು ಗುರುತಿಸುತ್ತಿದ್ದೇವೆ. ತಪ್ಪು ಕೆಲಸಗಳನ್ನೂ ತೋರಿಸಿಕೊಟ್ಟಿದ್ದೇವೆ. ಸಾಧನೆಗಳನ್ನು ಪ್ರಕಟಿಸಿದ್ದೇವೆ. ಪತ್ರಿಕೆಯಾಗಿ ಅವರ ಜಾಹೀರಾತಿನ ಬೆಂಬಲವನ್ನು ಪಡೆದಿದ್ದೇವೆ. ಆದರೆ ಪತ್ರಿಕೆಯ ವರದಿಯನ್ನು ಎಂದೂ ಅವರಿಗೆ ಮಾರಿಕೊಂಡಿಲ್ಲ. ನಮ್ಮ ಪತ್ರಿಕೆಯ ಮೇಲೆ ಹಿಡಿತ ಸಾಧಿಸುವ, ಅವರಿಗೆ ಬೇಕಾದಂತೆ ವರದಿ ಮಾಡಬೇಕೆನ್ನುವ ಅವರ ಯೋಜನೆಯನ್ನು ಅಂದು ವಿರೋಧಿಸಿದ್ದೇವೆ. ಇಂದಿಗೂ ವಿರೋಧಿಸುತ್ತಿದ್ದೇವೆ ಎಂದು ತಿಳಿಸಿದ್ದೇವೆ. ಹೀಗಿದ್ದರೂ ಶಾಸಕ ಜವಾಬ್ದಾರಿ ಸ್ಥಾನದಲ್ಲಿರುವ ಪೂಂಜರವರು ತಮ್ಮ ವರದಿ ಮಾತ್ರ ಪತ್ರಿಕೆಯಲ್ಲಿ ಬರಬೇಕು, ಇತರರ, ತಮ್ಮ ವಿರೋಧಿಗಳ ಸುದ್ದಿ ಬರಬಾರದೆಂದು ಹೇಳುವುದು ಸರಿಯಲ್ಲ. ಅದನ್ನು ಪತ್ರಿಕೆಯಲ್ಲಿ ಹಾಕುವ ಕಾರಣಕ್ಕಾಗಿ ಸುದ್ದಿಯನ್ನು ವಿರೋಧಿಸಬಾರದಾಗಿ ವಿನಂತಿಸುತ್ತಿದ್ದೇವೆ.


ನಾನು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಅಂಗವಾಗಿ ರಾಜ್ಯ ಮತ್ತು ದೇಶ ನಾಯಕರ ವಿರುದ್ಧ ಸ್ಪರ್ಧಿಸಿದ್ದೇನೆ. ಪೂಂಜರವರೇ ನಾನು ಎಂದಿಗೂ ನಿಮ್ಮ ಎದುರು ಚುನಾವಣಾ ಸ್ಪರ್ಧಿಯಲ್ಲ. ಚುನಾವಣಾ ಕಾರಣಕ್ಕೆ ನೀವು ಸುದ್ದಿ ಪತ್ರಿಕೆಯನ್ನು ವಿರೋಧಿಸಬೇಕಾಗಿಲ್ಲ.
ಪೂಂಜರೆ, ನಿಮ್ಮ ಸಾಧನೆಯ ಪ್ರಚಾರಕ್ಕೆ ನಿಮಗೆ ಸುದ್ದಿ ಉದಯ’ ಪತ್ರಿಕೆ ಬೇಕೇ ಬೇಕು. ಆದರೆ ನಿಮ್ಮ ಸುದ್ದಿಗಳೊಂದಿಗೆ ಇತರ ನಾಯಕರ ಹಾಗೂ ಜನಸಾಮಾನ್ಯರ ಸುದ್ದಿಗಳಿಗಾಗಿ, ಎಲ್ಲರ ಪರ ವರದಿ ಬರಲಿಕ್ಕಾಗಿಸುದ್ದಿ ಬಿಡುಗಡೆ’ ಪತ್ರಿಕೆ ಬೆಳ್ತಂಗಡಿಯಲ್ಲಿ ಇರುವುದು ಒಳಿತಲ್ಲವೇ?.


ನಿಮ್ಮ ಪತ್ರಿಕೆಗೆ ಜಾಹೀರಾತು ಕೊಡಬೇಕೆಂದು ತಾಲೂಕಿನ ಎಲ್ಲಾ ಪ್ರಮುಖರನ್ನು ಒತ್ತಾಯಿಸುತ್ತಿದ್ದೀರಲ್ಲ? :
ನಿಮ್ಮ ಪತ್ರಿಕೆಗೆ ಆರ್ಥಿಕ ಸಮಸ್ಯೆ ಇಲ್ಲ. ಎಷ್ಟು ವರ್ಷ ಬೇಕಾದರೂ ನೀವು ಪತ್ರಿಕೆ ನಡೆಸಬಹುದು. ಯಾಕೆಂದರೆ ನಿಮಗೇನು ಹಣದ ಕೊರತೆಯಿಲ್ಲ. ಅದರೊಂದಿಗೆ ನಿಮ್ಮ ಪತ್ರಿಕೆಗೆ ಹಣ ನೀಡಲು ನಿಮ್ಮಿಂದ ಸಹಾಯ ಪಡೆದ ಸಾಲು ಸಾಲು ಜನರಿದ್ದಾರೆ. ಶಾಸಕರಾದ ನಿಮ್ಮಿಂದ ಕೆಲಸ ಮಾಡಿಸಿಕೊಳ್ಳುವವರು ಮತ್ತು ನಿಮ್ಮಿಂದ ಲಾಭ ಪಡೆದವರು ನಿಮಗೆಂದು ನಿಮ್ಮ ಪತ್ರಿಕೆಗೆ ಜಾಹೀರಾತಿನ ಹಣ ನೀಡಬಹುದು. ನೀವು ಕೂಡಾ ನಿಮ್ಮ ಪತ್ರಿಕೆಗೆ (ಸುದ್ದಿ ಉದಯಕ್ಕೆ ) ಜಾಹೀರಾತು ನೀಡಲು ಅವರ ಮೇಲೆ ಒತ್ತಡ ಹೇರಬಹುದು. ಸುದ್ದಿ ಉದಯ’ದ ಉದ್ಘಾಟನಾ ಸಮಾರಂಭದಲ್ಲಿ ನೀವು ಮಾಡಿದ ಭಾಷಣ ಕೇಳಿದರೆ ಅದು ಅರ್ಥವಾಗುತ್ತದೆ. ಅದು ಯೂಟ್ಯೂಬ್‌ನಲ್ಲಿದೆ. ಅಲ್ಲಿ ಸೇರಿದ್ದ ಮಾಜಿ ಮಂತ್ರಿ, ಪ್ರಸನ್ನ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಗಂಗಾಧರ ಗೌಡ, ಎಸ್‌ಡಿಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಡಾ. ಸತೀಶ್‌ಚಂದ್ರ, ಲಕ್ಷ್ಮೀ ಗ್ರೂಪ್ ನ ಮಾಲಕರಾದ ಮೋಹನ ಕುಮಾರ್, ಮಂಗಳೂರು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಮತ್ತು ಸದಸ್ಯರು, ಪಂಚಾಯತ್, ವರ್ತಕ ಸಂಘದ , ವಕೀಲರ ಸಂಘದ, ಪತ್ರಕರ್ತರ ಸಂಘದ, ಹೀಗೆ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರುಗಳು, ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಮುಖರಿಗೆ ನಿಮ್ಮ ಪತ್ರಿಕೆಗೆ ಜಾಹೀರಾತು ಕೊಡಬೇಕೆಂದು ಒತ್ತಾಯಪೂರ್ವಕವಾಗಿ ತಾವು ಹೇಳಿದ್ದೀರಿ. ಅಲ್ಲವೇ? ತಮ್ಮ ಭಾಷಣದಲ್ಲಿ ಬೆಳ್ತಂಗಡಿಯಲ್ಲಿ ಪ್ರಸಾರದಲ್ಲಿರುವಸುದ್ದಿ ಬಿಡುಗಡೆ’ಯ ಮತ್ತು ಇತರ ಯಾವುದೇ ಪತ್ರಿಕೆಯ ಉಲ್ಲೇಖವೂ ಬರಲಿಲ್ಲ. ಕನಿಷ್ಠ ಬೆಂಬಲವು ಘೋಷಣೆಯಾಗಲಿಲ್ಲ ಯಾಕೆ? ಉಳಿದ ಪತ್ರಿಕೆಗಳು, ಸುದ್ದಿ ಬಿಡುಗಡೆ ಏನು ತಪ್ಪು ಮಾಡಿದೆ? ತಿಳಿಸಿ.


ಯಾರದ್ದೇ ಒತ್ತಡದ ಬೆಂಬಲ ಸುದ್ದಿ ಬಿಡುಗಡೆ’ಗೆ ಇಲ್ಲ, ಜನ ಸಾಮಾನ್ಯರ ಬೆಂಬಲವೇ ಆಸ್ತಿ:
37 ವರ್ಷಗಳಿಂದ ನಡೆಯುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆಗೆ ಅಂತಹ ಯಾರದೇ ಒತ್ತಡದ ಬೆಂಬಲವಿಲ್ಲ. ನಿಷ್ಪಕ್ಷಪಾತವಾಗಿ ನಡೆಯುವ ಈ ಪತ್ರಿಕೆ ಬೆಳ್ತಂಗಡಿಯ ಜನಸಾಮಾನ್ಯರ ಪ್ರೀತಿ ವಿಶ್ವಾಸದಿಂದಲೇ ನಡೆಯಬೇಕು, ಅದುವೇ ನಮಗೆ ಆಸ್ತಿ. ಬೆಳ್ತಂಗಡಿಯ ಗ್ರಾಮ ಗ್ರಾಮಗಳಲ್ಲಿ ಉಳಿದೆಲ್ಲಾ ಪತ್ರಿಕೆಗಿಂತ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವುದರಿಂದ ಪತ್ರಿಕೆಯ ಸಾಧನೆಯನ್ನು ಜನರ ಮುಂದಿಟ್ಟು ಅದರ ಅಧಾರದಲ್ಲಿಯೇ ಪತ್ರಿಕೆ ನಡೆಯಬೇಕು. ಯಾರ ಮುಖ ನೋಡಿಯೂ, ಯಾರ ಹೆಸರಿನಲ್ಲಿಯೂ ನಮಗೆ ಜಾಹೀರಾತು ಬರುವುದಿಲ್ಲ. ಶಾಸಕರಾದ ನಿಮ್ಮ ವಿರೋಧವನ್ನು ಎದುರಿಸಿಯೂ ಜನಪರ ಪತ್ರಿಕೆ ನಡೆಸಬೇಕೆಂದರೆ ಅದು ಹರಸಾಹಸವೇ ಸರಿ. ಅದರೊಂದಿಗೆ ತಾವು ಸುದ್ದಿ ಬಳಗದ ಹೆಚ್ಚಿನ ಅನುಭವಿ, ಉತ್ತಮ ಸಿಬ್ಬಂದಿಗಳನ್ನು ಹೈಜಾಕ್ ಮಾಡಿದ್ದೀರಿ. ಅದರಿಂದಾಗಿ ನಮ್ಮ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಅವರೆದುರು, ನಿಮ್ಮಲ್ಲಿಗೆ ಕರೆದರೂ ಬಾರದೆ ನಮ್ಮಲ್ಲಿಯೇ ಉಳಿದಿರುವ ಸಿಬ್ಬಂದಿಗಳು, ಹಲವಾರು ಹೊಸಬರು ಕೆಲಸ ಮಾಡಬೇಕಾಗಿ ಬಂದಿದೆ ಎಂದರೆ ಅವರ ಕಷ್ಟಗಳನ್ನು ಜನರು ಅರ್ಥಮಾಡಿಕೊಳ್ಳಬಹುದು.

ಹೀಗಿದ್ದರೂ ಸುದ್ದಿ ಬಿಡುಗಡೆ’ ಪತ್ರಿಕೆಯನ್ನು ಜನರು ಒಪ್ಪಿಕೊಂಡಿದ್ದಾರೆ. ನಿಮ್ಮ ಸುದ್ದಿ ಉದಯ’ ಪತ್ರಿಕೆ ಬಂದ ಮೇಲೆಸುದ್ದಿ ಬಿಡುಗಡೆ’ ಪತ್ರಿಕೆಯ ಪ್ರಸಾರ ಸಂಖ್ಯೆ ಜಾಸ್ತಿಯಾಗಿದೆ. ಯಾಕೆಂದರೆ ಯಾರಿಗೂ ಹೆದರದೆ, ಬಗ್ಗದೆ ಎಲ್ಲರ, ಜನಸಾಮಾನ್ಯರ ಕಡೆ ನಿಂತು ಕೆಲಸ ಮಾಡುವ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ನಿಷ್ಪಕ್ಷಪಾತ ಪತ್ರಿಕೆ ಸುದ್ದಿ ಬಿಡುಗಡೆಯೇ ಎಲ್ಲರಿಗೂ ಬೇಕಾಗಿದೆ. ಅದರ ನಿಜವಾದ ಬೆಲೆ ಜನರಿಗೆ ಅರ್ಥವಾಗಿದೆ.


ಅದರೂ ಸುದ್ದಿಬಿಡುಗಡೆ ಸಮಾಜದ ದಾರಿ ತಪ್ಪಿಸಿದೆ, ಅದನ್ನು ಜನರು ನೋಡಿಕೊಳ್ಳುತ್ತಾರೆ ಎಂದು ಶಾಸಕ ಹರೀಶ್ ಪೂಂಜರು ಹೇಳಿರುವ ಬೆದರಿಕೆಯ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅದು ನಮ್ಮನ್ನು ಜಾಗೃತಗೊಳಿಸಿದೆ. ಪೂಂಜರ ಹೇಳಿಕೆಯ ಹಿಂದಿರುವ ಕಾರಣಗಳ ಬಗ್ಗೆ ನಮಗೆ ಸ್ಪಷ್ಟೀಕರಣ ಸಿಗದೇ ಇರುವ ಕಾರಣಕ್ಕೆ ಆ ವಿಷಯವನ್ನು ಜನರ ಮುಂದಿಟ್ಟು ಅದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ, ತಪ್ಪುಗಳಿದ್ದರೆ ತಿದ್ದಿಕೊಳ್ಳಲು, ಪತ್ರಿಕೆಯನ್ನು ಜನಪರವಾಗಿ ಮುಂದುವರಿಸಲು ಸುದ್ದಿಬಿಡುಗಡೆ ನಡಿಗೆ ಜನರ ಕಡೆಗೆ’ ಎಂಬ ಕಾರ್ಯಕ್ರಮ ಹಾಕಿಕೊಳ್ಳಲಿದ್ದೇವೆ. ಹರೀಶ್ ಪೂಂಜರ ಮಾತಿನಿಂದ ಚಿಂತನೆಗೆ ಒಳಗಾಗಿರುವ ನಾವು ಜನರ ಕಡೆಗೆ ನಡಿಗೆಯ ಈ ಕಾರ್ಯಕ್ರಮವನ್ನು ಬೆಳ್ತಂಗಡಿಯಲ್ಲಿ ಮಾತ್ರವಲ್ಲ ಸುಳ್ಯ, ಪುತ್ತೂರುಗಳಲ್ಲಿಯೂ ಹಾಕಿಕೊಳ್ಳಲಿದ್ದೇವೆ. ಜನರು ಸಲಹೆ ಸೂಚನೆ ನೀಡಿಸುದ್ದಿ ಬಿಡುಗಡೆ’ಯನ್ನು ಸಲಹಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.

LEAVE A REPLY

Please enter your comment!
Please enter your name here