ಕೊಂಬೆಟ್ಟು: ಮರಾಟಿ ಸಮಾಜ ಸೇವಾ ಸಂಘ ಮಹಾಸಭೆ

0

ಭಿನ್ನಾಭಿಪ್ರಾಯ ಏನೇ ಬಂದರೂ ,ನಾವೆಲ್ಲ ಒಂದೇ ಸೂರಿನಡಿ ಇರಬೇಕು – ರಾಮಚಂದ್ರ ನಾಯ್ಕ

ಪುತ್ತೂರು : ಸುವರ್ಣ ಸಂಭ್ರಮದತ್ತ ಸಾಗುತ್ತಿರುವ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಅಸ್ತಿತ್ವಕ್ಕೆ ನಮ್ಮ ಹಿರಿಯರ ಶ್ರಮವು ಬಹಳಷ್ಟಿದೆ. ಸಂಘಟನೆಗಳಲ್ಲಿ ಪಾಲ್ಗೊಳ್ಳಲು ಹಿಂದುಮುಂದು ನೋಡುತ್ತಿರುವಂತಹ ಇಂದಿನ ಕಾಲಘಟ್ಟದಲ್ಲಿ , ನಮ್ಮ ಪೂರ್ವಜರ ಅವಿರತ ಪರಿಶ್ರಮವು ಮಾದರಿ.ನಮ್ಮ -ನಮ್ಮೊಳಗೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಸಂಘಟನೆ ವಿಚಾರ ಬಂದಾಗ ನಾವೆಲ್ಲರು ಒಂದೇ ಸೂರಿನಡಿ ನಿಲ್ಲಬೇಕೆಂದು ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ ಅಭಿಪ್ರಾಯಪಟ್ಟರು.


ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ ಇದರ ಸಭಾಂಗಣದಲ್ಲಿ ಜು.23 ರಂದು ನಡೆದ ಸಂಘದ 44 ನೆಯ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ , ನಮ್ಮಲಿರುವಂತಹ ಒಗ್ಗಟ್ಟಿನ ಭಾವನೆ ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯವೂ ಆಗಲಿಯೆಂದು ಹೇಳಿ , ಸಹಕಾರ ನೀಡಿ ,ಬೆಂಬಲವನ್ನಿತ್ತ ಸಮಾಜ ಭಾಂದವರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯದರ್ಶಿ ಸಾವಿತ್ರಿ ಶೀನಪ್ಪ ವರದಿ ವಾಚಿಸಿದರು. ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ ಲೆಕ್ಕಪತ್ರ ಮಂಡಿಸಿದರು. ನಿವೃತ್ತ ಪ್ರಾಂಶುಪಾಲ ದುಗ್ಗಪ್ಪ ನಾಯ್ಕ ಮಾತನಾಡಿ , ಜಿಲ್ಲೆ ಹಾಗೂ ರಾಜ್ಯದಲ್ಲೂ ವಿಶೇಷ ಸ್ಥಾನಮಾನ ಗಳಿಸಿಕೊಂಡಿರುವಂತಹ ಮರಾಟಿ ಸಮಾಜ ಸಂಘವು ಸರ್ವರ ಏಳಿಗೆಗೆ ಸ್ಪಂದಿಸುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆಯೆಂದರು.ಬಳಿಕ ಅವರು 14 ಗ್ರಾಮ ಸಮಿತಿ ಮೂಲಕ 36 ಸದಸ್ಯರನ್ನೊಳಗೊಂಡ ನೂತನ ಕಾರ್ಯಕಾರಿ ಸಮಿತಿ ರಚನೆ ನಡೆಸಿಕೊಟ್ಟರು.

ಸಂಘದ ಉಪಾಧ್ಯಕ್ಷ ,ಕಾನೂನು ಸಲಹೆಗಾರ ಮಂಜುನಾಥ ಎನ್.ಎಸ್ ಸಹಕಾರ ನೀಡಿ , ಸ್ವಾಗತಿಸಿದರು. ಗೌರಿ ಬರೆಪ್ಪಾಡಿ ಪ್ರಾರ್ಥನೆ ನೆರವೇರಿಸಿ , ಧನಂಜಯ ಕಾವು ವಂದಿಸಿದರು.

ಇದಕ್ಕೂ ಮೊದಲು ಸಂಘಕ್ಕೆ ಸೇವೆ ಸಲ್ಲಿಸಿ , ಅಗಲಿದವರಿಗೆ ಮೌನ ಪ್ರಾರ್ಥನೆ ಮೂಲಕ ಗೌರವ ಸಲ್ಲಿಸಲಾಯಿತು. ಬಳಿಕ ವಿದ್ಯಾನಿಧಿಗೆ ಧನ ಸಂಗ್ರಹ ಕಾರ್ಯ ನಡೆಯಿತು. ಸಂಘದ ಮಾಜಿ ಅಧ್ಯಕ್ಷ ಶಿವಪ್ಪ ನಾಯ್ಕ ,ಮಾಜಿ ಜಿ.ಪಂಚಾಯತ್ ಸಿಇಓ ಸುಂದರ ನಾಯ್ಕ , ಯು.ಕೆ.ನಾಯ್ಕ ,ನಗರಸಭಾ ಸದಸ್ಯ ಶೀನಪ್ಪ ನಾಯ್ಕ ,ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಅಧ್ಯಕ್ಷ ಶೀನ ನಾಯ್ಕ , ಮಹಾಲಿಂಗ ನಾಯ್ಕ ಸಹಿತ ಯುವ ವೇದಿಕೆ ,ಮಹಿಳಾ ವೇದಿಕೆ ಸಹಿತ ಸಂಘದ ಎಲ್ಲಾ ಪದಾಧಿಕಾರಿಗಳು ,ಸದಸ್ಯರುಗಳೂ ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು. ಆ ಬಳಿಕ ಸವಿ ಭೋಜನ ನಡೆದು , ತದನಂತರ ನೂತನ ಸಾಲಿನ ಕಾರ್ಯಕಾರಿ ಸಮಿತಿ ಇದರ ಚೊಚ್ಚಲ ಸಭೆ ನಡೆದು, ಪದಾಧಿಕಾರಿಗಳ ಆಯ್ಕೆ ನೆರವೇರಿತು.

LEAVE A REPLY

Please enter your comment!
Please enter your name here