ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಎಂ.ಎಸ್ಸಿ (ತೋಟಗಾರಿಕೆ) ಪದವಿಯಲ್ಲಿ ಚೈತ್ರ ಕೆ.ರವರಿಗೆ ಚಿನ್ನದ ಪದಕ

0

ಪುತ್ತೂರು: ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಇದರ 2021-22 ನೇ ಸಾಲಿನ ತೋಟದ ಬೆಳೆಗಳು, ಸಾಂಬಾರ, ಔಷದೀಯ ಮತ್ತು ಸುಗಂಧ ದ್ರವ್ಯ ಬೆಳೆಗಳ ವಿಜ್ಞಾನ ವಿಷಯದ ಎಂ.ಎಸ್ಸಿ(ತೋಟಗಾರಿಕೆ) ಸ್ನಾತಕೋತ್ತರ ಪದವಿಯಲ್ಲಿ ಚೈತ್ರ ಕೆ.ರವರು 10 ಅಂಕಗಳಲ್ಲಿ ಸರಾಸರಿ 9.40 ಅಂಕಗಳನ್ನು ಗಳಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.


ಜು.21 ರಂದು ಶಿವಮೊಗ್ಗದ ಇರುವಕ್ಕಿ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ನಡೆದ “ಘಟಿಕೋತ್ಸವ ಸುಗ್ಗಿ ಸಂಭ್ರಮ-8” ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ರವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಯಾದ ಬಿ.ಎಸ್ ಯಡಿಯೂರಪ್ಪ ಹಾಗೂ ಕರ್ನಾಟಕ ಸರಕಾರದ ಕೃಷಿ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎನ್ . ಚಲುವರಾಯಸ್ವಾಮಿ ಉಪಸ್ಥಿತರಿದ್ದರು.


ಚೈತ್ರ ಕೆ.ರವರು ಪ್ರೌಢ ಶಿಕ್ಷಣವನ್ನು ಪಾಂಗ್ಲಾಯಿ ಬೆಥನಿ ಪ್ರೌಢಶಾಲೆಯಲ್ಲಿ, ಪಿಯು ಶಿಕ್ಷಣವನ್ನು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಮೂಡಿಗೆರೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದು ಇವರು ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕೈಪಂಗಳ ಬೊಳ್ಳಮೆ ನಿವಾಸದ ಶ್ರೀಮತಿ ಶಿವಮ್ಮ ಮತ್ತು ಪದ್ಮಪ್ಪ ಪೂಜಾರಿಯವರ ಪುತ್ರಿ.

LEAVE A REPLY

Please enter your comment!
Please enter your name here