24ನೇ ಕಾರ್ಗಿಲ್ ವಿಜಯ ದಿವಸ್ ಸುಸಂದರ್ಭದಲ್ಲಿ ದೇಶ ಸೇವೆಗೆ ಕೊಡುಗೆ ನೀಡಿದ ಪುತ್ತೂರಿನ ತರಬೇತಿ ಸಂಸ್ಥೆ
ಪುತ್ತೂರು: ಭಾರತೀಯ ಸೇನೆ ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳು ಹಾಗೂ ನಾಗರಿಕ ಸೇವೆಗಳ ನೇಮಕಾತಿಗಳಿಗೆ ತರಬೇತಿಯನ್ನು ನೀಡುತ್ತಿರುವ ಪುತ್ತೂರಿನ ಪ್ರತಿಷ್ಠಿತ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ 9 ವಿದ್ಯಾರ್ಥಿಗಳು ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ,ವೈದ್ಯಕೀಯ ಪರೀಕ್ಷೆಗಳ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗಿ ಅಂತಿಮ ಪಟ್ಟಿಯಲ್ಲಿ ಈ ಎಲ್ಲಾ ಅಭ್ಯರ್ಥಿಗಳು ಸ್ಥಾನ ಪಡೆದಿದ್ದು, ಅಗ್ನಿಪಥ್ ಯೋಜನೆಯಲ್ಲಿ ಕಳೆದ ವರ್ಷವೂ 8 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದನ್ನು ಸ್ಮರಿಸಿಕೊಳ್ಳಬಹುದು. ವಿದ್ಯಾಮಾತಾ ಅಕಾಡೆಮಿಯು ಭಾರತೀಯ ಸೇನೆ, ಪೊಲೀಸ್ ,ಅರಣ್ಯ ,ಪಿಡಿಓ, ಬ್ಯಾಂಕಿಂಗ್ ನಿಂದ ಹಿಡಿದು ಕೆಎಎಸ್ ,ಐಎಎಸ್ ವರೆಗೆ ಎಲ್ಲಾ ನೇಮಕಾತಿಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ಕಳೆದ ಎರಡು ವರ್ಷಗಳಲ್ಲಿ ಸುಮಾರು 90 ವಿದ್ಯಾರ್ಥಿಗಳು ವಿವಿಧ ನೇಮಕಾತಿಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುತ್ತಾರೆ.
2023ರ ಅಗ್ನಿಪಥ್ ನೇಮಕಾತಿಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈಯವರು ಅಭಿನಂದಿಸಿದ್ದಾರೆ. ಅಗ್ನಿಪಥ್ ಯೋಜನೆಯಡಿಯಲ್ಲಿ ಕೊಡಿಪ್ಪಾಡಿ ಬಾಲಕೃಷ್ಣ ನಾಯ್ಕ ಇವರ ಪುತ್ರ ಭವಿಶ್, ಪುತ್ತೂರು ಕಾವು ನಿವಾಸಿ ಚಂದ್ರಶೇಖರ್ ಎಂ ಯವರ ಪುತ್ರ ಅವಿನ್ ಎಂ, ಸುಳ್ಯ ತಾಲೂಕು ಮುರುಳ್ಯದ ರಾಮಕೃಷ್ಣ ರೈಯವರ ಪುತ್ರ ಸೃಜನ್ ರೈ, ಕಡಬ ತಾಲೂಕು ಸುಬ್ರಹ್ಮಣ್ಯದ ದಿನೇಶ್ ರವರ ಪುತ್ರ ವಿಖ್ಯಾತ್ ಡಿ ಶೆಟ್ಟಿ, ಪುತ್ತೂರು ತಾಲೂಕಿನ ದರ್ಬೆ ನಿವಾಸಿ ಶಶಿಧರ್ ರವರ ಪುತ್ರ ಅಶ್ವಿತ್ ಎನ್, ಸುಳ್ಯ ತಾಲೂಕು ದೇವಚಳ್ಳದ ಆನಂದ ರವರ ಪುತ್ರ ಅಭಿಷೇಕ್ ಎಂ, ಸುಳ್ಯ ತಾಲೂಕು ದೇವಚಳ್ಳದ ಮಹಾಬಲೇಶ್ವರ ಸಿ ಎಂ ರವರ ಪುತ್ರ ಕಾರ್ತಿಕ್ ಸಿ ಎಂ, ಸುಳ್ಯ ತಾಲೂಕು ದೇವಚಳ್ಳದ ಚಂದ್ರಶೇಖರ್ ರವರ ಪುತ್ರ ಅಭಿಷೇಕ್ ಕೆ, ಬಂಟ್ವಾಳ ತಾ. ಮಂಚಿ ನಿವಾಸಿ ಶ್ರೀನಿವಾಸ್ ನಾಯ್ಕ ಇವರ ಪುತ್ರ ಅಭಿಷೇಕ್ ಎ ಭಾರತೀಯ ಭೂ ಸೇನೆಗೆ ಆಯ್ಕೆಯಾಗಿರುತ್ತಾರೆ.