





ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಕಿನ್ಯಡ್ಕ ದಿ.ವೀರಪ್ಪ ಪೂಜಾರಿಯವರ ಪುತ್ರ, ಕೃಷಿಕ ರವೀಂದ್ರ ಪೂಜಾರಿ (53ವ.)ರವರು ಹೃದಯಾಘಾತದಿಂದ ಜು.27ರಂದು ನಿಧನರಾದರು.



ಬೆಳಿಗ್ಗೆ ಮನೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ರವೀಂದ್ರ ಪೂಜಾರಿಯವರನ್ನು ಮಂಗಳೂರಿನ ಆಸ್ಪತ್ರೆ ಕರೆದೊಯ್ಯಲಾಯಿತಾದರೂ ದಾರಿಮಧ್ಯೆ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು ಎಂದು ವರದಿಯಾಗಿದೆ. ಮೃತರು ತಾಯಿ ಹೊನ್ನಮ್ಮ, ಪತ್ನಿ ಭವಾನಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.








