ಆ. 13 ರಂದು ನಡೆಯುವ ಆಟಿಡೊಂಜಿ ದಿನ, ಸಾಧಕರಿಗೆ ಚಿನ್ನದ ಪದಕ ಪ್ರದಾನ
ಸಮಾರಂಭದಲ್ಲಿ ಬಂಟ ಸಮಾಜ ಭಾಂದವರು ಭಾಗವಹಿಸಿ, ಯಶಸ್ಸುಗೊಳಿಸಿ- ಬಾಲ್ಯೊಟ್ಟು
ಸಮಾಜಕ್ಕೆ ಗೌರವ- ಸವಣೂರು ಕೆ.ಸೀತಾರಾಮ ರೈ
ಸಂತೋಷ ಕೊಡುವ ವಿಚಾರ- ಮಿತ್ರಂಪಾಡಿ ಜಯರಾಮ ರೈ
ಸ್ಪೂರ್ತಿ ನೀಡುವ ಕಾರ್ಯಕ್ರಮ- ಬೂಡಿಯಾರ್ ರಾಧಾಕೃಷ್ಣ ರೈ
ಪುತ್ತೂರು: ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.
ಯಶಸ್ಸುಗೊಳಿಸಿ- ಶಶಿಕುಮಾರ್ ರೈ ಬಾಲ್ಯೊಟ್ಟು
ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಅಧ್ಯಕ್ಷತೆ ವಹಿಸಿ, ಮಾತನಾಡಿ ಆ. 13 ರಂದು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಜರಗಲಿರುವ ಆಟಿಡೊಂಜಿ ದಿನ, ಸಾಧಕರಿಗೆ ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಬಂಟ ಸಮಾಜ ಭಾಂದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ಸುಗೊಳಿಸುವಂತೆ ವಿನಂತಿಸಿ, ಸಮಾಜದಲ್ಲಿ ಬಂಟ ಸಮುದಾಯದ ಸಾಧಕರು ತುಂಬಾ ಮಂದಿ ವಿವಿಧ ಕ್ಷೇತ್ರದಲ್ಲಿ ಇದ್ದಾರೆ, ಅವರನ್ನು ಹಂತಹಂತವಾಗಿ ಗುರುತಿಸಿ, ಗೌರವಿಸುವ ಕಾರ್ಯವನ್ನು ಬಂಟರ ಸಂಘ ಮಾಡುತ್ತಿದೆ ಎಂದು ಹೇಳಿದರು.
ಸಮಾಜಕ್ಕೆ ಗೌರವ- ಸವಣೂರು ಕೆ.ಸೀತಾರಾಮ ರೈ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈರವರು ಮಾತನಾಡಿ ಬಂಟರ ಸಂಘದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದು ಸಮಾಜಕ್ಕೆ ಗೌರವ ತರುವ ಕಾರ್ಯ ನಿರಂತರವಾಗಿ ನಡೆಯಲಿ. ಶಶಿಕುಮಾರ್ ರೈ ಬಾಲ್ಯೊಟ್ಟು ನೇತ್ರತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಂಟ ಸಮಾಜದ ಪ್ರತಿಯೊಬ್ಬರು ಪೂರ್ಣ ರೀತಿಯ ಸಹಕಾರವನ್ನು ನೀಡುವಂತೆ ವಿನಂತಿಸಿದರು.
ಸಂತೋಷ ಕೊಡುವ ವಿಚಾರ- ಮಿತ್ರಂಪಾಡಿ ಜಯರಾಮ ರೈ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಬುಧಾಬಿಯ ಉದ್ಯಮಿ ಜಯರಾಮ ರೈ ಮಿತ್ರಂಪಾಡಿರವರು ಮಾತನಾಡಿ ಪುತ್ತೂರು ಬಂಟರ ಸಂಘಕ್ಕೆ ತನ್ನದೇ ಆದ ಹಿರಿಮೆ, ಗೌರವ ಇದೆ, ಎಲ್ಲಿ ಹೋದರೂ ಪುತ್ತೂರು ಬಂಟರ ಸಂಘದ ಕಾರ್ಯವೈಖರಿ ಬಗ್ಗೆ ಜನ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ, ಇದು ತುಂಬಾ ಸಂತೋಷ ಕೊಡುವ ವಿಚಾರ ಎಂದು ಹೇಳಿದರು.
ಸ್ಪೂರ್ತಿ ನೀಡುವ ಕಾರ್ಯಕ್ರಮ- ಬೂಡಿಯಾರ್ ರಾಧಾಕೃಷ್ಣ ರೈ
ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈರವರು ಮಾತನಾಡಿ ಬಂಟರ ಸಂಘದ ಮೂಲಕ ಇನ್ನಷ್ಟು ಸಮಾಜಕ್ಕೆ ಸ್ಪೂರ್ತಿ ನೀಡುವ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷರುಗಳಾದ ಚಿಲ್ಮೆತ್ತಾರು ಜಗಜೀವನ್ದಾಸ್ ರೈ, ರೋಶನ್ ರೈ ಬನ್ನೂರು, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ ನೆಲ್ಲಿಕಟ್ಟ್ಟೆ, ಬಂಟರ ಸಂಘದ ಪುತ್ತೂರು ನಗರ ಅಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತು, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ, ಬಂಟ ಸಮಾಜದ ಪ್ರಮುಖರಾದ ಸಂತೋಷ್ ಶೆಟ್ಟಿ ಸಾಜ, ನಿತ್ಯಾನಂದ ಶೆಟ್ಟಿ ಮನವಳಿಕೆ, ಸೀತಾರಾಮ ರೈ ಕೆದಂಬಾಡಿಗುತ್ತು, ಎಚ್.ಶ್ರೀಧರ್ ರೈ ಹೊಸಮನೆ, ದಯಾನಂದ ರೈ ಕೋರ್ಮಂಡ, ದಿವ್ಯನಾಥ ಶೆಟ್ಟಿ ಕಾವು, ಸುಭಾಷ್ ಶೆಟ್ಟಿ ಅರುವಾರ, ಸುರೇಶ್ ರೈ ಸೂಡಿಮುಳ್ಳು, ಜಗನ್ಮೋಹನ್ ರೈ ಸೂರಂಬೈಲು, ಭರತ್ ರೈ ಪಾಲ್ತಾಡಿ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಸಂಕಪ್ಪ ರೈ, ಅರವಿಂದ ಭಗವಾನ್ ರೈ, ಅಶ್ವಿನ್ ಎಲ್.ಶೆಟ್ಟಿ ಸವಣೂರು, ಸುಧೀರ್ ಕುಮಾರ್ ಶೆಟ್ಟಿ ತೆಂಕಿಲ, ಸ್ವರ್ಣಲತಾ ಜೆ.ರೈ ಮಿತ್ರಂಪಾಡಿ, ಮಲ್ಲಿಕಾ ಜೆ.ರೈ, ಭಾಸ್ಕರ್ ರೈ ಎಂ, ರವಿಚಂದ್ರ ರೈ ಕುಂಬ್ರ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸ್ಪೂರ್ತಿಯನ್ನು ತುಂಬುವ ಕಾರ್ಯವನ್ನು ಮಾಡಿ
ಬಂಟ ಸಮಾಜದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು
ಬಂಟ ಸಮಾಜದ ಪ್ರತಿಯೊಬ್ಬರು ಆ. 13 ರಂದು ನಡೆಯುವ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಸಂಪೂರ್ಣ ವೀಕ್ಷಿಸಿ, ಬಂಟ ಸಮಾಜದ ಸಾಧಕರನ್ನು ಗೌರವಿಸುವ ಕಾರ್ಯಕ್ರಮಕ್ಕೆ ಸ್ಪೂರ್ತಿಯನ್ನು ತುಂಬುವ ಕಾರ್ಯವನ್ನು ಎಲ್ಲಾ ಸಮಾಜ ಭಾಂದವರು ಮಾಡಬೇಕೆಂದು ಪ್ರೀತಿಯ ವಿನಂತಿ
ಶಶಿಕುಮಾರ್ ರೈ ಬಾಲ್ಯೊಟ್ಟು
ಅಧ್ಯಕ್ಷರು- ಬಂಟರ ಸಂಘ ಪುತ್ತೂರು ತಾಲೂಕು