





ಪುತ್ತೂರು: ದ.ಕ.ಸಹಿತ ರಾಜ್ಯದ 22 ಜಿಲ್ಲೆಗಳಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ವಿಮಾಕಂತು ಪಾವತಿಗೆ ಆಗಸ್ಟ್ 7ರ ತನಕ ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ.
ಈ ಹಿಂದೆ ಜುಲೈ 31ರೊಳಗೆ ವಿಮಾಕಂತು ಪಾವತಿಸಲು ಆದೇಶದಲ್ಲಿ ತಿಳಿಸಲಾಗಿತ್ತು. ಈ ಹಿಂದಿನ ವರ್ಷಗಳಲ್ಲಿ ವಿಮಾ ಕಂತು ಪಾವತಿಗೆ ಜೂ.30 ಕಡೆಯ ದಿನವಾಗಿತ್ತು.ಆದರೆ ಈ ವರ್ಷ ಜೂನ್ 30 ಕಳೆದರೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿ ಸರಕಾರ ಅಧಿಸೂಚನೆ ಹೊರಡಿಸಿರಲಿಲ್ಲ.


ಒಂದು ಹಂತದಲ್ಲಿ ಈ ಯೋಜನೆ ಸ್ಥಗಿತಗೊಂಡಿದೆ ಎಂದೇ ರೈತರು ಭಾವಿಸುವಂತಾಗಿತ್ತು.ಕೊನೆಗೂ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿ ಆದೇಶ ಹೊರಡಿಸಲಾಗಿತ್ತಾದರೂ ಅದರಲ್ಲಿ ದ.ಕ.ಜಿಲ್ಲೆಯನ್ನು ಕೈಬಿಡಲಾಗಿತ್ತು.ಕೊನೆಗೂ ದ.ಕ.ವನ್ನೂ ಸೇರಿಸಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿ ಕುರಿತು ಅಽಕೃತ ಆದೇಶ ಪ್ರಕಟವಾಗಿತ್ತಾದರೂ ಜುಲೈ 31ರೊಳಗೆ ವಿಮಾ ಕಂತು ಪಾವತಿಸಲು ಸೂಚಿಸಲಾಗಿತ್ತು.





ಈ ಕುರಿತು ಸರಕಾರದ ಅಽಸೂಚನೆ ಪ್ರಕಟವಾಗುವಾಗಲೇ ವಿಳಂಬವಾಗಿದ್ದ ಕಾರಣ ಅವಽಯನ್ನು ವಿಸ್ತರಣೆ ಮಾಡಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು.ಈ ಕುರಿತು ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಕೋರಿಕೆ ಸಲ್ಲಿಕೆಯಾಗಿತ್ತು.ಇದೀಗ ಬೆಳೆ ವಿಮೆ ನೋಂದಣಿ ಅವಽಯನ್ನು ಆ.7ರ ರನಕ ವಿಸ್ತರಣೆ ಮಾಡಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಆದೇಶಿಸಿದೆ.









