ಪುತ್ತೂರು ತಾಲೂಕು ಪಂಚಾಯತಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

0

77ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ವರ್ಷವಿಡೀ ಇರಲಿ: ನವೀನ್ ಭಂಡಾರಿ

ನೆಲ,ಜಲ,ಪರಿಸರ ಇದರ ಬಗ್ಗೆ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ವರ್ಷವಿಡೀ ಆಚರಿಸುವ ಮೂಲಕ ಸಮೃದ್ಧ ಭಾರತವನ್ನು ರೂಪಿಸುವ ಎಂದು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅಭಿಪ್ರಾಯಪಟ್ಟರು.

ಅವರು 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪುತ್ತೂರು ತಾಲೂಕು ಪಂಚಾಯತ್ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗ್ರಾಮ ಗ್ರಾಮಗಳಲ್ಲಿ ರಾಷ್ಟ್ರದ ಸ್ವಾತಂತ್ರ್ಯಕ್ಕೆ ತ್ಯಾಗ, ಬಲಿದಾನಗಳನ್ನು ಮಾಡಿದ ವೀರ ಪುರುಷರ ಹೆಸರನ್ನು, ಸೈನಿಕರ ಹೆಸರನ್ನು ಗ್ರಾಮ ಪಂಚಾಯಿತಿಗಳಲ್ಲಿ ಶಿಲಾಫಲಕ ಅಳವಡಿಸುವ ಮೂಲಕ ವಂದಿಸುವ ಕಾರ್ಯವನ್ನು ಮಾಡಲಾಗಿದೆ‌.


ಪರಿಸರದ ಬಗ್ಗೆ ಕಾಳಜಿ ವಹಿಸಲು ಗ್ರಾಮ ಗ್ರಾಮಗಳಲ್ಲಿ ಕೋಟಿವೃಕ್ಷ ಅಭಿಯಾನದ ಮೂಲಕ ಗಿಡಗಳನ್ನು ನೆಡುವ ಕಾರ್ಯಗಳನ್ನು ಮಾಡಲಾಗುತ್ತಿದೆ.
ಸ್ವಾತಂತ್ರ್ಯ ಹೊಂದಿ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ನಮ್ಮ ದೇಶ ಆರೋಗ್ಯ, ಶಿಕ್ಷಣದಲ್ಲಿ ಮುಂದುವರೆಯುತ್ತಿರುವುದು ನಮಗೆ ಹೆಮ್ಮೆಯ ವಿಷಯ.
ಪ್ರತಿ ಮನೆಗಳಲ್ಲಿ ತಿರಂಗಗಳನ್ನ ಹಾರಿಸುವ ಮೂಲಕ ರಾಷ್ಟ್ರಪ್ರೇಮವನ್ನು ಬಿಂಬಿಸುವ ಕೆಲಸಗಳನ್ನು ಮಾಡಲಾಗುತ್ತಿದೆ.


ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ಕಾರ್ಯ ಕೈಗೊಳ್ಳುವ ಬಗ್ಗೆ ಪ್ರತಿ ಗ್ರಾಮದ ಯುವಕರನ್ನು ಒಗ್ಗೂಡಿಸಿಕೊಂಡು ಗ್ರಾಮಗಳ ಮಣ್ಣನ್ನು ಸಂಗ್ರಹಿಸಲಾಗುವುದು ಎಂದರು.

ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ವಿಭಾಗದ ಎನ್‌ಸಿಸಿ ಹಾಗೂ ಎಸ್ ಪಿಸಿ ತಂಡದ ವಿದ್ಯಾರ್ಥಿಗಳು ಧ್ವಜ ಗೀತೆ, ವಂದೇ ಮಾತರಂ ಹಾಗೂ ರಾಷ್ಟ್ರ ಗೀತೆಯನ್ನು ಹಾಡಿದರು.
ಈ ಸಂದರ್ಭ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರು (ಗ್ರಾ.ಉ.) ಶೈಲಜಾ ಭಟ್, ನಿವೃತ್ತ ಸೇನಾನಿ ಹಾಗೂ ತಾ.ಪಂ. ಸಿಬ್ಬಂದಿ ರವಿಚಂದ್ರ, ತಾ.ಪಂ. ವ್ಯವಸ್ಥಾಪಕ ಜಯಪ್ರಕಾಶ್, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಯುವ ಸಬಲೀಕರಣ ಕ್ರೀಡಾ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here