ಪದವಿ ಪೂರ್ವ ಕಾಲೇಜುಗಳ ನೌಕರರ ಸಹಕಾರ ಸಂಘಕ್ಕೆ ಆಯ್ಕೆ

0

ಅಧ್ಯಕ್ಷ ದುಗ್ಗಪ್ಪ ನಾಯ್ಕ, ಉಪಾಧ್ಯಕ್ಷ ಗಂಗಾಧರ ಆಳ್ವ

ಪುತ್ತೂರು: ಪದವಿ ಪೂರ್ವ ಕಾಲೇಜುಗಳ ನೌಕರರ ಸಹಕಾರ ಸಂಘದ 2023-28ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿಶ್ರಾಂತ ಪ್ರಾಂಶುಪಾಲ ಎನ್. ದುಗ್ಗಪ್ಪ ಹಾಗೂ ಉಪಾಧ್ಯಕ್ಷರಾಗಿ ರಾಜ್ಯ ಪ್ರಶಸ್ತಿ ವಿಜೇತ ತುಂಬೆ ಪ.ಪೂ ಕಾಲೇಜಿನ ಪ್ರಾಂಶುಪಾಲ ಕೆ.ಎನ್ ಗಂಗಾಧರ ಆಳ್ವ ಅನಂತಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ನಿರ್ದೇಶಕರುಗಳಾಗಿ ಪೆರ್ನೆ ಶ್ರೀ ರಾಮಚಂದ್ರ ಪಿ ಯು ಕಾಲೇಜಿನ ಕೆ ಶೇಖರ ರೈ, ಮಂಗಳೂರು ಡಾ| ಯನ್‌ಯಸ್‌ಎಯಂ ಪಿ. ಯು ಕಾಲೇಜಿನ ಡಾ.ನವೀನ್ ಶೆಟ್ಟಿ ಕೆ., ಕಾಟಿಪಳ್ಳ ಯಸ್‌ಯನ್‌ಪಿಯು ಕಾಲೇಜಿನ ಉಮೇಶ ಕರ್ಕೇರ, ಬೆಳ್ತಂಗಡಿ ಸ.ಪ.ಪೂ ಕಾಲೇಜಿನ ಸುಕುಮಾರ, ಮಂಗಳೂರು ಕಿಟಲ್ ಪಿ. ಯು ಕಾಲೇಜಿನ ಕೃಷ್ಣ ಎನ್., ಮಂಗಳೂರು ಶಕ್ತಿನಗರ ನೆಲ್ಯಪದವು ಸ. ಪ. ಪೂ. ಕಾಲೇಜಿನ ಜಯಾನಂದ ಎಂ ಸುವರ್ಣ, ಕುಂಬ್ರ ಮರ್ಕಜುಲ್ ಹುದಾ ಪಿ. ಯು. ಕಾಲೇಜಿನ ಸಂಧ್ಯಾ ಪಿ., ಮಂಗಳೂರು ಶಕ್ತಿ ಪಿ.ಯು ಕಾಲೇಜಿನ ಸುರೇಖಾ, ಪೆರ್ಲ ಪಿ.ಯು ಕಾಲೇಜಿನ ಕಿಶೋರ್ ಕುಮಾರ್ ಶೇಣಿ, ಬಜ್ಪೆ ನಿರಂಜನ ಸ್ವಾಮಿ ಪಿ ಯು ಕಾಲೇಜಿನ ನವೀನ್ ಕುಮಾರ್, ಎಡಪದವು ವಿವೇಕಾನಂದ ಪಿ.ಯು ಕಾಲೇಜಿನ ಸತೀಶ್ ಕೆ.ಯವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ನಾಮ ನಿರ್ದೇಶಿತ ನಿರ್ದೇಶಕರಾಗಿ ಮಂಗಳೂರು ಕಿಟಲ್ ಪಿ.ಯು ಕಾಲೇಜಿನ ವಿಠಲ್ ಎ., ಬಂಟ್ವಾಳ ಬಿ ಮೂಡ ಪಿ ಯು ಕಾಲೇಜಿನ ಯೂಸುಫ್‌ರವರನ್ನು ಆಯ್ಕೆ ಮಾಡಲಾಗಿದೆ. ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಪುತ್ತೂರಿನಲ್ಲಿ ಶಾಖೆ ಕಾರ್ಯನಿರ್ವಹಿಸುತ್ತಿರು ಸಂಘದಲ್ಲಿ ಒಂದು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here