ನೆಲ್ಯಾಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇದರ ಆಶ್ರಯದಲ್ಲಿ ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರ ವಿಭಾಗದ ಖೋ ಖೋ ಪಂದ್ಯಾಟದಲ್ಲಿ ಕೊಣಾಲು ಸರಕಾರಿ ಹಿ.ಪ್ರಾ.ಶಾಲಾ ಬಾಲಕರ ತಂಡ ಪ್ರಥಮ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದೆ.
ಬಾಲಕರ ವಿಭಾಗದಲ್ಲಿ ಮೊಹಮ್ಮದ್ ಆಶೀರ್, ಚಿಂತನ್, ಮಹಮ್ಮದ್ ಸಫೀಕ್, ಮಹಮ್ಮದ್ ರಾಫಿದ್, ಸಂಪ್ರೀತ್, ಸುಮನ್, ಅನ್ವಿತ್ ಕೆ., ಅರುಣ್, ಶುಭಕರ, ಲೋಕೇಶ್, ವೈ.ಎಸ್.ಯತೀಶ್‌ಕುಮಾರ್, ಜಯೇಶ್ ಎಸ್.ತಂಡವನ್ನು ಪ್ರತಿನಿಧಿಸಿದ್ದರು. ಬಾಲಕಿಯರ ವಿಭಾಗದಲ್ಲಿ ಆಯಿಷತುಲ್ ರಿಫಾ, ಅರ್ಪಿಯಾ ಬಾನು, ಸಪ್ನಾಜ್, ಫಾತಿಮತ್ ಐಫಾ, ಶರಣ್ಯ ಕೆ.ಕೆ., ಆಯಿಷತ್ ಸುಹೈರ, ಧನುಶ್ರೀ, ಫಾತಿಮತ್ ಸಫೀನಾ, ಲಿನೆಟ್ ಡಿ.ಸೋಜ, ಸಫೀನಾಬಾನು, ಸಮಿಮಾ ಬಾನು ತಂಡವನ್ನು ಪ್ರತಿನಿಧಿಸಿದ್ದರು. ಶಾಲಾ ಹಳೆವಿದ್ಯಾರ್ಥಿಗಳಾದ ಉಬೈದ್ ಎಚ್., ಹಾಗೂ ಸಪ್ವಾನ್ ಕಡೆಂಬಿಲರವರು ತರಬೇತಿ ನೀಡಿದ್ದರು. ಶಾಲಾ ಮುಖ್ಯಶಿಕ್ಷಕಿ ಗಿರಿಜಾ ಪಿ., ಶಿಕ್ಷಕಿಯರಾದ ಭವಾನಿ ಬಿ.ಎಲ್., ಸುಪ್ರೀತಾ, ಎಸ್‌ಡಿಎಂಸಿ ಅಧ್ಯಕ್ಷ ಕೆ.ಇ.ಮುಹಮ್ಮದ್ ರಫೀಕ್, ಸದಸ್ಯರಾದ ಕೆ.ಪಿ.ಅಶ್ರಫ್ ಮಾರ್ಗದರ್ಶನ ನೀಡಿದ್ದರು. ಅರಣ್ಯ ಇಲಾಖೆಯ ದೇವಿಪ್ರಸಾದ್, ಕೊಣಾಲು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ, ಶಿಕ್ಷಕ ಅಬ್ದುಲ್ ಖಾದರ್‌ರವರು ಸಹಕರಿಸಿದರು.