ಒಟ್ಟು ವ್ಯವಹಾರ 13,47,72,122.38 ರೂ, ನಿವ್ವಳ ಲಾಭ 9,26,109.75 ,15% ಡಿವಿಡೆಂಡ್ ಘೋಷಣೆ
ಹಸಿರು ಮೇವು ಮಾಡಲು ಗೋಮಾಳ ಜಾಗ ನೀಡಿ ಸದಸ್ಯರಿಂದ ಆಗ್ರಹ
ಆಲಂಕಾರು: ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಸ್. ರಾಮಣ್ಣ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ 2022-23ನೇ ಸಾಲಿನ ಲೆಕ್ಕ ಪರಿಶೋದನೆಯಲ್ಲಿ ಸಂಘವು ಎ. ತರಗತಿಯಲ್ಲಿದ್ದು 2022 -23ನೇ ಸಾಲಿನಲ್ಲಿ ಸಂಘವು 13,47,72,122.38ಒಟ್ಟು ವ್ಯವಹಾರ ನಡೆಸಿ ನಿವ್ವಳ ಲಾಭ 9,26,109.75 ರೂಪಾಯಿ ಗಳಿಸಿ 10 % ಡಿವಿಡೆಂಡ್ ನೀಡುವುದಾಗಿ ತಿಳಿಸಿದರು
ಡಿವಿಡೆಂಡ್ ವಿಚಾರದಲ್ಲಿ ಸಂಘದ ಸದಸ್ಯರಾದ ಪ್ರಶಾಂತ ರೈ ಮನವಳಿಕೆಯವರು ಹೆಚ್ಚು ಲಾಭ ಬಂದ ಕಾರಣ ಶೇ.15% ಡಿವಿಡೆಂಡ್ ನೀಡಬೇಕೆಂದು ಒತ್ತಾಯಿಸಿದರು.ಉಳಿದ ಸದಸ್ಯರು ಸಹಮತ ವ್ಯಕ್ತಪಡಿಸಿದರು ನಂತರ ಚರ್ಚೆ ನಡೆದು ಅಂತಿಮವಾಗಿ ಶೇ.15% ಡಿವಿಡೆಂಡ್ ನೀಡಲಾಗುವುದು ಎಂದು ಘೋಷಣೆ ಮಾಡಲಾಯಿತು. ಗೋವುಗಳಿಗೆ
ಹಸಿರು ಮೇವುನ್ನು ಒದಗಿಸುವ ಉದ್ದೇಶದಿಂದ ಗೋಮಾಳ ಜಾಗವನ್ನು ರೈತರಿಗೆ ಹಸಿರು ಮೇವು ಬೆಳೆಸಲು ಅವಕಾಶ ನೀಡುವಂತೆ ಹಾಗು ಪದವಿ ಹಾಗೂ ಶಿಕ್ಷಕರ ಕೇತ್ರದಿಂದ ಎಮ್.ಎಲ್.ಸಿ ಇರುವಂತೆ ಹೈನುಗಾರಿಕೆಯವರ ಸಮಸ್ಯೆಗಳಿಗೆ ಸ್ಪಂದನೆ ನೀಡಲು ಹೈನುಗಾರರ ಕ್ಷೇತ್ರದಿಂದಲೂ ಎಮ್.ಎಲ್.ಸಿ ಯನ್ನು ಆಯ್ಕೆ ಮಾಡುವಂತೆ ಸರಕಾರಕ್ಕೆಬರೆಯಲು
ಸಂಘದ ಸದಸ್ಯರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ ರವರು ಒತ್ತಾಯಿಸಿದರು, ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಸಂಬಂಧಪಟ್ಟ ಇಲಾಖೆಗೆ ಬರೆಯುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಅತಿಥಿಯಾಗಿ ಮಾತನಾಡಿ ಭಾರತ ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ರೈತರು ಹಾಲಿನ ಉತ್ಪನ್ನಗಳಿಗೆ ಆಧ್ಯತೆ ನೀಡಬೇಕು.ಹೈನುಗಾರಿಕೆಯಿಂದ ಕೃಷಿಗೆ ಉತ್ತಮ ಗೊಬ್ಬರವಾಗಿ ಕೃಷಿಯಿಂದ ಹೆಚ್ಚು ಲಾಭ ಮಾಡಿಕೊಳ್ಳಬಹುದು ಚರ್ಮಗಂಟು ರೋಗದಿಂದ ಕಳೆದ ವರ್ಷದಿಂದ ಈ ವರ್ಷ ಹಾಲಿನ ಇಳುವರಿ ಕಡಿಮೆಯಾಗಿದೆ.ಚರ್ಮ ಗಂಟುರೋಗಕ್ಕೆ ರಾಸುಗಳಿಗೆ ಎಲ್ಲಾರು ವ್ಯಾಕ್ಸಿನೇಷನ್ ಮಾಡಬೇಕೆಂದು
ತಿಳಿಸಿ. ಕೃಷಿ ಮತ್ತು ಹೈನುಗಾರಿಕೆ ನಾಣ್ಯದ ಎರಡು ಮುಖಗಳಿದ್ದಂತೆ ಸರಕಾರ ಹಾಗು ಒಕ್ಕೋಟದಿಂದ ಸಿಗುವ ಸೌವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹೈನುಗಾರಿಕೆಯಿಂದ ಎಲ್ಲರು ಆರ್ಥಿಕ ಸಧೃಡಗೊಳ್ಳುವಂತೆ ತಿಳಿಸಿದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಆದಿತ್ಯರವರು ಹಸಿರು ಮೇವು, ರಬ್ಬರ್ ಮ್ಯಾಟ್, ಹಾಲು ಕರೆಯುವ ಯಂತ್ರ,ಮಿನಿಡೈರಿಗೆ ಸಿಗುವ ಸಬ್ಸ್ ಸಿಡಿಯ ಬಗ್ಗೆ ತಿಳಿಸಿ ಎಲ್ಲಾ ರಾಸುಗಳಿಗೆ ವಿಮೆ ಮಾಡಿಸುವಂತೆ ಮನವಿ ಮಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ ರಾಮಣ್ಣ ಗೌಡ
ಮಾತನಾಡಿ ಸಂಘವು ದೊಡ್ಡ ಮಟ್ಟಕ್ಕೆ ಬೆಳೆಯಬೇಕಾದರೆ ಸಂಘದ ಸದಸ್ಯರ ಸಹಕಾರ ಹಾಗು ಹಿರಿಯರ ಮಾರ್ಗದರ್ಶನದಿಂದ ಸಂಘವು ಬೆಳೆದಿದೆ.ಸಂಘದ ಅಭಿವೃದ್ಧಿ ದೃಷ್ಟಿಯಿಂದ ಹಾಗು ರೈತರ ಹಿತದೃಷ್ಟಿಯಿಂದ ಎಲ್ಲರು ಮನೆಯಲ್ಲಿ ಒಂದೊಂದು ದನ ಸಾಕುವಂತೆ ಸಲಹೆ ನೀಡಿ ವಾರ್ಷಿಕ ಸಾಮಾನ್ಯ ಸಭೆಗೆ
ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮುಂದೆಯೂ ಸಂಘದ ಅಭಿವೃದ್ದಿಗೆ ಎಲ್ಲಾರು ಸಹಕರಿಸುವಂತೆ ವಿನಂತಿಸಿದರು.ಸಭೆಯಲ್ಲಿ 15 ವರ್ಷಗಳಿಂದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ದೇವಕಿ ರೈ ಮನವಳಿಕೆ ಯವರನ್ನು ಸಭೆಯಲ್ಲಿ ಗೌರವಿಸಲಾಯಿತು ಹಾಗೂ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಹಾಲುನ್ನು ಸಂಘಕ್ಕೆ ಪೂರೈಸಿದ ಎಲ್ಲಾ ಸದಸ್ಯರಿಗೆ ಸಭೆಯಲ್ಲಿ ಬಹುಮಾನ ವಿತರಿಸಲಾಯಿತು.ಸಂಘದ
ಕಾರ್ಯದರ್ಶಿ ಗಣೇಶ್ ರೈ ಕೆ. ಆಯವ್ಯಯ, ವರದಿ, ಮಂಜೂರಾತಿಯ ಹಾಗು ಇನ್ನಿತರ ವಿಷಯದ ಬಗ್ಗೆ ಸಭೆಗೆ ತಿಳಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪರಮೇಶ್ವರ ಗೌಡ ಏಂತಡ್ಕ, ನಿರ್ದೇಶಕರಾದ ಹರೀಶ್ ಗೌಡ ಏಂತಡ್ಕ, ನಾಗೇಶ್ ಗೌಡ ಕಣಿಯ, ಮಾಯಿಲಪ್ಪ ಗೌಡ ಶರವೂರು, ಜನಾರ್ದನ ಭಂಡಾರಿ ಕುಪ್ಲಾಜೆ, ಕರಿಯ ಮುಗೇರ ಕೇಪುಳು, ಪ್ರೇಮಲತಾ ಆಲಡ್ಕ, ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ , ಉಮೇಶ್ ರೈ ಬಲೆಂಪೋಡಿ, ಸುಧಾಕರ ರೈ ಮನವಳಿಕೆ, ಪ್ರದೀಪ್ ರೈ ಮನವಳಿಕೆ,ಕೇಶವ ಗೌಡ ಆಲಡ್ಕ ಸೇರಿದಂತೆ ಹಲವು ಮಂದಿ ವಿವಿಧ ಸಲಹೆ ಸೂಚನೆ ನೀಡಿದರು.
ಸಂಘದ ನಿರ್ದೇಶಕರಾದ ಸಂತೋಷ್ ರೈ ಮನವಳಿಕೆ ಪ್ರಾರ್ಥಿಸಿ, ಸಂಘದ ಅಧ್ಯಕ್ಷ ರಾಮಣ್ಣ ಗೌಡ ಸ್ವಾಗತಿಸಿ, ನಿರ್ದೇಶಕರಾದ ಕೆ.ಮಾಧವ ಪೂಜಾರಿ ಬಹುಮಾನದ ಪಟ್ಟಿ ವಾಚಿಸಿ,ರಾಧಾಕೃಷ್ಣ ರೈ ಮನವಳಿಕೆಗುತ್ತು ಧನ್ಯವಾದ ಸಮರ್ಪಿಸಿದರು
ಸಂಘದ ಸಿಬ್ಬಂದಿಗಳಾದ ಶೀನಪ್ಪ ಗೌಡ ಕೆ.ಬಾಲಾಚಂದ್ರ, ಅನಿತಾ ,ವಿಖ್ಯಾತ್ ರೈ ಸಹಕರಿಸಿದರು