ನಿಡ್ಪಳ್ಳಿ ಕರ್ನಪ್ಪಾಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ- ಮೊಸರು ಕುಡಿಕೆ ಉತ್ಸವ

0

ನಿಡ್ಪಳ್ಳಿ: ಜೈ ಯುವಶಕ್ತಿ ಯುವಕ ಮಂಡಲ ತಂಬುತ್ತಡ್ಕ ನಿಡ್ಪಳ್ಳಿ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 9ನೇ ವರ್ಷದ ಮೊಸರು ಕುಡಿಕೆ ಉತ್ಸವ, ಹಗ್ಗ ಜಗ್ಗಾಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಕರ್ನಪ್ಪಾಡಿ ಶ್ರೀ ಕೋಟಿ ಚೆನ್ನಯ ಬ್ರಹ್ಮಬೈದರ್ಕಳ ಗರಡಿ ವಠಾರದಲ್ಲಿ ಸೆ.6ರಂದು ನಡೆಯಿತು.
‌ಬೆಳಿಗ್ಗೆ ಮ್ಯಾರಥಾನ್ ಗೆ ಚಾಲನೆ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಗುರು ಸರ್ವೋತ್ತಮ ಬೋರ್ಕರ್ ಬ್ರಹ್ಮರಗುಂಡ,ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ತಂಬುತ್ತಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶಶಿಕಲಾ ವೈ, ಕೆ.ಎಸ್.ಅರ್.ಟಿ.ಸಿ ನಿವೃತ್ತ ಸಂಚಾರ ನಿಯಂತ್ರಕ ವಸಂತ ರೈ ಕೊಲ್ಲಮಜಲು, ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಮಂದಾರಗಿರಿ ಇದರ ಅಧ್ಯಕ್ಷ ಪದ್ಮನಾಭ ಕುಲಾಲ್, ಸ್ಥಳೀಯರಾದ ಅಶ್ವಥ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವಕ ಮಂಡಲದ ಅಧ್ಯಕ್ಷ ಸತೀಶ್.ಬಿ ಸಭಾಧ್ಯಕ್ಷತೆ ವಹಿಸಿದ್ದರು.

  • ಸನ್ಮಾನ: ಸಂಜೀವ ಪೂಜಾರಿ ಕಾನ ಯುವಕ ಮಂಡಲದಲ್ಲಿ ಇಟ್ಟಿರುವ ದತ್ತಿ ನಿಧಿಯಿಂದ ಪ್ರತಿ ವರ್ಷ ಸಾಧಕರಿಗೆ ನೀಡುವ ಸನ್ಮಾನ ಕಾರ್ಯಕ್ರಮದಲ್ಲಿ ನಿಷ್ಟಾವಂತ ಕೂಲಿ ಕಾರ್ಮಿಕ ಅಣ್ಣು ಕತ್ತಲಕಾನ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಮೊಸರು ಕುಡಿಕೆ ಕಾರ್ಯಕ್ರಮದ ಸ್ವಯಂ ಸೇವಕ ಕೃಷ್ಣಪ್ಪ ಪೂಜಾರಿ ಕಾನ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
    • ಬಹುಮಾನ ವಿತರಣೆ: ದಿ.ದಾಮೋದರ ಭಟ್ ತಂಬುತ್ತಡ್ಕ ದತ್ತಿ ನಿಧಿಯಿಂದ ಅಂಗನವಾಡಿ ಮಕ್ಕಳಿಗೆ ಏರ್ಪಡಿಸಿದ ಕೃಷ್ಣ ವೇಷ ಸ್ಪರ್ಧೆ ವಿಜೇತರಿಗೆ ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಏರ್ಪಡಿಸಿದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿನಿ ಶ್ರೇಯಾ.ಸಿ.ಎಚ್ ಹಾಗೂ ದ್ವಿತೀಯ ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮನೀಶ್.ಕೆ ಇವರನ್ನು ಗೌರವಿಸಲಾಯಿತು.
      ಲಿಖಿತ.ಕೆ ಪ್ರಾರ್ಥಿಸಿ, ಗಿರೀಶ್ ಗುರಿ ಸ್ವಾಗತಿಸಿದರು. ಮಧು ಸೂದನ ಕಾನ ವಂದಿಸಿದರು. ಸಂತೋಷ್ ಕಾನ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಕಾನ, ಸಂತೋಷ್ ಕುಮಾರ್, ಕುಸುಮಾವತಿ, ಗುರು ಪ್ರಸಾದ್, ನಿತಿನ್ ಕರ್ನಪ್ಪಾಡಿ ಅತಿಥಿಗಳನ್ನು ಶಾಲು ಹೊದಿಸಿ ಗೌರವಿಸಿದರು.ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಯುವಕ ಮಂಡಲದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here