ವೀರಮಂಗಲದಲ್ಲಿ ವಿಜೃಂಭಿಸಿದ 3ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವ

0

ಪುತ್ತೂರು: ವೀರಮಂಗಲ ಶ್ರೀ ಕೃಷ್ಣ ಕಲಾ ಕೇಂದ್ರ ವೀರಮಂಗಲ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸೆ.10ರಂದು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಮನೋರಂಜನಾ ಸ್ಪರ್ಧೆಗಳೊಂದಿಗೆ ನಡೆದ ಶ್ರೀ ಮೂರನೇ ವರ್ಷದ ಕೃಷ್ಣ ಲೀಲೋತ್ಸವವು ಮೋಡಿಗರನ್ನು ಮನರಂಜಿಸಿತು.

ಬೆಳಿಗ್ಗೆ ಶ್ರೀ ವಿಷ್ಣು ಸಹಸ್ರನಾಮಾರ್ಚನೆ, ಮಜಲುಮಾರು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯವರಿಂದ ಭಜನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಬಳಿಕ ವಿವಿಧ ಮನರಂಜನಾ ಸ್ಪರ್ಧೆಗಳನ್ನು ವೀರಮಂಗಲ ಹಿ.ಪ್ರಾ ಶಾಲಾ ಸಹಶಿಕ್ಷಕಿ ಹರಿಣಾಕ್ಷಿ ಎಂ. ಉದ್ಘಾಟಿಸಿದರು. ಬಳಿಕ ಅಂಗನವಾಡಿ ಪುಟಾಣಿಗಳು, ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆಯಿತು. ಪುರುಷರ ಸಂಗೀತ ಕುರ್ಚಿಯ ಸ್ಪರ್ಧೆಯಲ್ಲಿ ವಿಶೇಷವಾಗಿತ್ತು. ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ನೂರಾರು ಮಂದಿ ಭಾಗವಹಿಸಿ ಸ್ಪರ್ಧೆಯ ಜೊತೆಗೆ ಮನೋರಂಜನೆಯು ದೊರೆಯಿತು. ಸಂಜೆ ಸಂಜೆ ಗೋಪೂಜೆ, ರಾಧೆ ಮತ್ತು ಮುದ್ದುಕೃಷ್ಣ ಆಕರ್ಷಕ ಮೆರವಣಿಗೆ, ನಂತರ ನೃತ್ಯಾರ್ಚನೆ ಹಾಗೂ ಶ್ರೀಕೃಷ್ಣ ತೂರು ಉಯ್ಯಾಲೆ ವಿಶೇಷವಾಗಿ ನೆರವೇರಿತು. ರಾಧೆ, ಕೃಷ್ಣ ವೇಷಧಾರಿ ಪುಟಾಣಿಗಳ ತುಂಟಾಟಗಳು ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸಿದವು.

ಧಾರ್ಮಿಕ ಸಭೆ, ಸನ್ಮಾನ
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಮಾತನಾಡಿ, ಕೃಷ್ಣ ಹೇಳಿದನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾನೆ. ರಾಜನಾಗುವ ಅವಕಾಶಗಳಿದ್ದರೂ ಅವನು ಇತರರಿಗೆ ಅವಕಾಶ ನೀಡಿರುವುದರಿಂದ ಶ್ರೀಕೃಷ್ಣ ಆದರ್ಶವಾಗಿದ್ದಾನೆ. ಮಹಾಭಾರತದ ಶ್ಲೋಕ ಅಧ್ಯಯನಗಳು ನಮ್ಮ ಜೀವನಕ್ಕೆ ದಾರಿಯಾಗಿದೆ. ಮಕ್ಕಳಿಗೆ ಶ್ರೀಕೃಷ್ಣನ ವೇಷಧರಿಸುವುದರಿಂದ ಅವರಲ್ಲಿ ಸಂಸ್ಕಾರದ ಮುದ್ರೆ ಬೀಳುತ್ತದೆ. ಅದು ಶಾಶ್ವತವಾಗಿ ಅವರ ಮನಸ್ಸಿನಲ್ಲಿರತ್ತದೆ ಎಂದರು.

ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಉಮೇಶ್ ಕೋಡಿಬೈಲು ಮಾತನಾಡಿ, ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮದ ಮೂಲಕ ವೀರಮಂಗಲದಲ್ಲಿ ಸಂಸ್ಕಾರ, ಸಂಸ್ಕೃತಿಗಳ ಪುನರುತ್ಥಾನವಾಗುತ್ತಿದೆ ಎಂದರು. ಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸ್ಪರ್ಧೆಗಳನ್ನು ಉದ್ಘಾಟಿಸಿದ ವೀರಮಂಗಲ ಶಾಲಾ ಸಹಶಿಕ್ಷಕಿ ಹರಿಣಾಕ್ಷಿ ಮಾತನಾಡಿ, ವೀರಮಂಗಲ ನನಗೆ ತವರು ಮನೆಯಿದ್ದಂತೆ, ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಅಲ್ಲದೆ ವೀರಮಂಗಲದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲಿಯೂ ಗೋಪಾಲಕೃಷ್ಣರವರ ಪ್ರಯತ್ನ ಇದ್ದೇ ಇರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಮ ಭಟ್ ಬಾವ ಮಾತನಾಡಿ, ಶ್ರೀಕೃಷ್ಣ ಕಲಾ ಕೇಂದ್ರದ ಮೂಲಕ ಕಾರ್ಯಕ್ರಮಗಳನ್ನು ಆಯೋಸಿಕೊಂಡು ಸಂಘಟನೆಗೆ ಸಹಕಾರ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ಹೊನ್ನಪ್ಪ ಕಲ್ಲೇಗ ಮಾತನಾಡಿ, ಶ್ರೀಕೃಷ್ಣ ಲೀಲೋತ್ಸವದ ಮೂಲಕ ಇಲ್ಲಿ ಶ್ರೀಕೃಷ್ಣ ನಂದಗೋಕುಲ, ವೃಂದಾವನ ನಿರ್ಮಾಣವಾಗಿದೆ ಎಂದರು.

ಸನ್ಮಾನ:
ದೈವ ನರ್ತಕ ಹೊನ್ನಪ್ಪ ಕಲ್ಲೇಗರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಶ್ರೀಕೃಷ್ಣ ಕಲಾ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯೋಗೀಶ್ ಹಾಗೂ ಪ್ರಿಯಶ್ರೀ ಕಾರ್ಯಕ್ರಮ ನಿರೂಪಿಸಿ, ಹರ್ಷ ಗುತ್ತು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ತಾರಾನಾಥ ಸವಣೂರು ನಿರ್ದೇಶನದಲ್ಲಿ ವೀರಮಂಗಲ ಹಿ.ಪ್ರಾ ಶಾಲಾವಿದ್ಯಾರ್ಥಿಗಳಿಂದ ವೈಶಿಷ್ಟ್ಯಪೂರ್ಣ ರಂಗ ಪ್ರವೇಶ `ಶ್ರೀ ಕೃಷ್ಣ ಲೀಲೆ’ ನಡೆಯಿತು.
ವೀರಮಂಗಳ ಶ್ರೀವಿಷ್ಣುಮೂರ್ತಿ ದೇವಸ್ಥಾನ, ಶ್ರೀಮಹಾವಿಷ್ಣು ಸೇವಾ ಪ್ರತಿಷ್ಠಾನ ಆನಾಜೆ ವೀರಮಂಗಲ, ಸ.ಹಿ.ಪ್ರಾ ಶಾಲೆ ವೀರಮಂಗಲ, ವೃಷ್ಣವೀ ಮಹಿಳಾ ಮಂಡಲ ವೀರಮಂಗಲ, ಹಿಂದೂ ಜಾಗರಣಾ ವೇದಿಕೆ ವೀರಮಂಗಲ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವೀರಮಂಗಲ ಒಕ್ಕೂಟಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದರು.

LEAVE A REPLY

Please enter your comment!
Please enter your name here