4 ದಶಕಗಳ ಅನುಭವ ಜೊತೆಗೆ ಬಿ.ಕೆ.ಬಿಲ್ಡ್ ಮಾರ್ಟ್ ಇದರ 2ನೆಯ ಶಾಖೆ ಪುತ್ತೂರಿನಲ್ಲಿ ಪ್ರಾರಂಭ…

0

” ಬಿ.ಕೆ.ಬಿಲ್ಡ್ ದಕುಲೆನಾ ಕ್ವಾಲಿಟಿ ಯೆಡ್ಡೆವುಂಡ್ , ಅಂಚಾದೇ ಸಂಸ್ಥೆ ಬೊಲೆಯೊಂದುಂಡ್ ” – ಅರವಿಂದ್ ಬೋಳಾರ್ ಅಭಿಪ್ರಾಯ

ಪುತ್ತೂರು : ಶುಭಾರಂಭದ ಕಾರ್ಯಕ್ರಮವೂ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಂತೆಯೇ ಭಾಸವಾಗುತ್ತಿದೆ.ನಾವೆಲ್ಲಾ ಸಣ್ಣವರಾಗಿದ್ದಾಗ ಮನೆಯಲ್ಲಿ ಬ್ಯಾಟರಿ ಮಸಿಯನ್ನು ಸಗಣಿ ಜೊತೆ ಬಳಸಿ ,ನೆಲವನ್ನು ಅಂದಮಾಡಿಕೊಳ್ಳುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ನೆಲದಲ್ಲೂ ಕಸ ವಿಲ್ಲ , ಮೈ ಮೇಲೂ ಕಸವಿಲ್ಲ , ಕಾರಣ ನಾವು ಮಲಗುವ ಹಾಸಿಗೆಯ ರೀತಿಯ ಬಣ್ಣ -ಬಣ್ಣದ ,ಭಿನ್ನ -ವಿಭಿನ್ನ ಮಾದರಿಯ ಟೈಲ್ಸ್ , ಗ್ರಾನೈಟ್ ನೆಲಹಾಸುಗಳು ಇವಕ್ಕೆಲ್ಲಾ ಮೂಲ ಕಾರಣವಾಗಿದೆ ಎಂದು ಕರಾವಳಿಯ ಖ್ಯಾತ ತುಳು ಹಾಸ್ಯ ನಟ ಅರವಿಂದ್ ಬೋಳಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಸೆ. 18 ರಂದು ಮುರ ಎಂ.ಪಿ.ಎಂ.ಶಾಲಾ ಬಳಿ ಶುಭಾರಂಭಗೊಂಡ ಮನೆ ಹಾಗೂ ಕಟ್ಟಡಗಳ ಟೈಲ್ಸ್ ,ಗ್ರಾನೈಟ್ ,ಮಾರ್ಬಲ್ ,ಇಲೆಕ್ಟ್ರಿಕಲ್ಸ್ ,ಲೈಟಿಂಗ್ ,ಪ್ಲಂಬಿಂಗ್ ಹಾಗೂ ಮೋಟಾರ್ ಪಂಪ್ ಇವನ್ನೆಲ್ಲಾ ಒಂದೇ ಸೂರಿನಡಿ ಒಳಗೊಂಡ , ಕಾಸರಗೋಡಿನ ಸೀತಾಂಗೋಳಿ ಹಾಗೂ ಉಪ್ಪಳದಲ್ಲೂ ಕಾರ್ಯಚರಿಸುತ್ತಿರುವ , ಬಿ.ಕೆ ಬಿಲ್ಡ್ ಮಾರ್ಟ್ ಇದರ ಶಾಖೆ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಅವರು ಅತಿಥಿಯಾಗಿ ಆಗಮಿಸಿ ಮಾತನಾಡಿ ,ನೂತನ ಸಂಸ್ಥೆಯ ಆರಂಭವೂ ಕೂಡ ಹಲವು ಉದ್ಯೋಗ ಗಳ ಸೃಷ್ಟಿಗೂ ಪ್ರಮುಖ ಕಾರಣವಾಗಿದೆ.
ಗ್ರಾಹಕರ ಹಾಗೂ ಮಾಲೀಕರ ಉತ್ತಮ ಒಡನಾಟದಿಂದಲೇ ಸಂಸ್ಥೆಯು ಕೂಡ ಬೆಳೆಯುತ್ತದೆಯೆಂದು ಅವರು ಹೇಳಿದರು.


ಧಾರ್ಮಿಕ ಗುರು ಸಯ್ಯದ್ ಅಟಕೋಯ ತಂಙಳ್ ಕುಂಬೋಳ್ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿ , ದುವಾ ಅಶೀರ್ವಾಚನ ಮೂಲಕ ಅಭಿವೃದ್ಧಿಗೆ ಹಾರೈಸಿದರು. ದಾರುಲ್ ಹಸನ್ ಹಿಫ್ಝುಲ್ ಕುರಾನ್ ಚೇಯರ್ಮ್ಯಾನ್ ಸಯ್ಯದ್ ಸರ್ಫುದ್ದೀನ್ ತಂಙಳ್ , ಮಾಜಿ ಸಚಿವರಾದ ರಮಾನಾಥ ರೈ ,ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ,
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ , ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ರವೀಂದ್ರ ಪೈ , ವರ್ತಕರ ಸಂಘದ ಅಧ್ಯಕ್ಷ ಜಾನ್ ಕುಟಿನ್ಹೋ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ,ನ್ಯಾಯವಾದಿ ನೂರುದ್ದೀನ್ ಸಾಲ್ಮರ , ಜೆಡಿಎಸ್ ಮುಖಂಡ ಅಶ್ರಫ್ ಕಲ್ಲೇಗ , ಇಸಾಕ್ ಸಾಲ್ಮರ , ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ,ಮಾಜಿ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸಹಿತ ಹಲವು ಗಣ್ಯರು ಹರಸಿದರು.

ಕೃಷ್ಣ ಕೃಪಾ ಇಂಡಸ್ಟ್ರೀಸ್ ಮಾಲಕ ಭವಿನ್ ಸಾವಜಾನಿ ,ಆದರ್ಶ ಲಕ್ಕಿ ಸ್ಕೀಮ್ ಮಾಲೀಕ ಅಬ್ದುಲ್ ರಹಮಾನ್ ,ಎಂಪಿಎಂ ಶಾಲಾ ಚೇಯರ್ಮ್ಯಾನ್ ಎಂ.ಪಿ ಅಬೂಬಕ್ಕರ್ , ಪುತ್ತೂರು ಟಿಂಬರ್ಸ್ ಮಾಲೀಕ ಕೆ.ಪಿ ಮೊಹಮ್ಮದ್ ಹಾಜಿ ,ನೌಫಲ್ ಟಿಂಬರ್ ಮಾಲೀಕ ಈಚು ಹಾಜಿ ಕೊಡಾಜೆ , ನಗರಸಭಾ ಮಾಜಿ ಸದಸ್ಯ ಅನ್ವರ್ ಖಾಸೀಂ , ರವಿ ಶೆಟ್ಟಿ ನಗರ ,ಭಾರತ್ ಟೈಂ ಪ್ರೈವೇಟ್ ಲಿ. ಮಾಲೀಕ ಪುತ್ತು ಹಾಜಿ ,ಉದ್ಯಮಿ ಅಬ್ದುಲ್ ರಹಮಾನ್,ಉಪ್ಪಿನಂಗಡಿ ಮಲಿಕ್ ದೀನಾರ್ ಮಸೀದಿ ಅಧ್ಯಕ್ಷ ಹಾಜಿ.ಎಂ.ಯೂಸುಫ್ ಹಾಗೂ ಕಾರ್ಯದರ್ಶಿ ಹಾಜಿ ಶಕೂರ್ ಶುಕ್ರಿಯಾ , ನ್ಯಾಯವಾದಿ ನೂರುದ್ದೀನ್ ಸಾಲ್ಮರ ,ಉದ್ಯಮಿ ಶರೀಫ್ ಹಾಜಿ ಕೊಡಾಜೆ , ಉದ್ಯಮಿ ಅಬ್ದುಲ್ ರಹೀಮಾನ್ ,ಸೀರತ್ ಕಮಿಟಿ ಅಧ್ಯಕ್ಷ ಸುರಯ ಅಬ್ದುಲ್ ಖಾದರ್ ಹಾಜಿ , ಸಂಪ್ಯ ಬಿಜೆಎಂ ಅಧ್ಯಕ್ಷ ಅಬ್ದುಲ್ ಜಲೀಲ್ ಹಾಜಿ ,ಹಾಗೂ ಅಬ್ದುಲ್ ರಹೀಮಾನ್ ಅಜಾದ್ ,ಕಬಕ ಜುಮ್ಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಸಿತಾರ ,ರೆಡ್ ಪ್ಲೈವುಡ್ ಮಾಲೀಕ ಜುನೈದ್ ,ಕೊಡಾಜೆ ಸಾರಾ ಎಲೆಕ್ಟ್ರಾನಿಕ್ ಮಾಲೀಕ ಯಾಸೀನ್ ಕೋಡಿ , ಪೋಳ್ಯ ಜುಮಾ ಮಸೀದಿ ಅಧ್ಯಕ್ಷ ಸಲೀಮ್ ಕೆ.ಪಿ., ಆಕರ್ಷಣ್ ಗ್ರೂಪ್ ಎಂ.ಡಿ. ಕೆ.ಪಿ. ಅಹ್ಮದ್ ಹಾಜಿ, ಸಿಟಿ ಬಝಾರ್ ಉದ್ಯಮಿ ಹಸನ್‌ ಹಾಜಿ, ಕೆಜೆಎಂ ಕೂರ್ನಡ್ಕ ಇದರ ಅಧ್ಯಕ್ಷ ಕೆ.ಹೆಚ್. ಖಾಸಿಮ್, ಸಾಲ್ಮರ ಜುಮಾ ಮಸೀದಿ ಅಧ್ಯಕ್ಷ ಹಮೀದ್ ಸಾಲ್ಮರ, ಬಪ್ಪಳಿಗೆ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಲವ್ಲಿ, ಜಮಾಲ್ ಹಾಜಿ ಮುಕ್ವೆ, ಉದ್ಯಮಿ ಉಮರ್ ಮಲ್ನಾಡ್, ಕಂಬಳಬೆಟ್ಟು ಜುಮಾ ಮಸೀದಿ ಅಧ್ಯಕ್ಷ ‌ಮೊಯ್ದು ಹಾಜಿ, ವಿಟ್ಲ ಮೇಗಿನಪೇಟೆ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್, ಮಿತ್ತೂರು ಜುಮಾ ಮಸೀದಿ ಮಾಜಿ ಅಧ್ಯಕ್ಷ ಹಮೀದ್ ಹಾಜಿ, ಮಿತ್ತೂರು ಮದ್ರಾಸ ಪಿಟಿಐ ಅಧ್ಯಕ್ಷ ಸಿರಾಜ್ ಕೆ.ಬಿ., ಸಮಸ್ತ ಕೌನ್ಸಿಲರ್ ಶಾಹುಲ್ ಹಮೀದ್, ಹ್ಯುಮಾನಿಟಿ ಕಮಿಟಿ ಸದಸ್ಯ ಅಝೀಝ್ ಹಾಜಿ ಅಸ್ಬಾರ್ಕ್, ಮಿತ್ತೂರು ಜುಮಾ ಮಸೀದಿ ಅಧ್ಯಕ್ಷ ಸೆಲಿಮ್ ಕೆ.ಬಿ., ಕೊಡಾಜೆ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ, ಪಟ್ರಕೋಡಿ ಜುಮಾ ಮಸೀದಿ ಅಧ್ಯಕ್ಷ ಉಮರ್, ಮಿತ್ತೂರು ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಂಝ ಕಂದಕ್, ಅಲ್ಪಸಂಖ್ಯಾತ ಘಟಕ ಪುತ್ತೂರು ಬ್ಲಾಕ್ ಅಧ್ಯಕ್ಷ ಶಕೂರ್ ಹಾಜಿ ಸಹಿತ ಹಲವಾರು ಅತಿಥಿಗಳು ಆಗಮಿಸಿ ಸಂಸ್ಥೆಯಾ ಶ್ರೇಯೋಭಿವೃದ್ದಿಗೆ ಹಾರೈಸಿದರು.
ಬಿ.ಕೆ.ಬಿಲ್ಡ್ ಮಾರ್ಟ್ ಮಾಲೀಕ ಪುತ್ತು ಹಾಜಿ ಬಾಯಾರ್ ಹಾಗೂ ಪುತ್ರ ಮೊಯಿನುದ್ದೀನ್ ಬಿ.ಕೆ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಸಿಬಂದಿಗಳು ಸಹಕಾರ ನೀಡಿದರು.


LEAVE A REPLY

Please enter your comment!
Please enter your name here