ಟಾಪ್ ಟೆನ್ ಲಕ್ಕಿ ಸ್ಕೀಮ್ ನ ಆರನೇ ಸೀಸನ್ ನ ಲಕ್ಕಿ ಕೂಪನ್ ಬಿಡುಗಡೆ

0

ಪ್ರತೀ ವಾರ ಡ್ರಾ – ಬಂಪರ್ ಬಹುಮಾನ ಕಾರು ಗೆಲ್ಲುವ ಅವಕಾಶ

ಪುತ್ತೂರು: ಟಾಪ್ ಟೆನ್ ಲಕ್ಕಿ ಸ್ಕೀಮ್ ನ ಆರನೇ ಸೀಸನ್ ನ ಲಕ್ಕಿ ಕೂಪನ್ ಬಿಡುಗಡೆ ಕಾರ್ಯಕ್ರಮ ಸೆ‌.25ರಂದು ಪುತ್ತೂರಿನ ಎಂ.ಟಿ. ರಸ್ತೆಯ ಎ.ಹೆಚ್.ಹಿಂದುಸ್ಥಾನ್ ಸಿಟಿ ಮಾರ್ಕೆಟ್ ನ ಪ್ರಥಮ ಮಹಡಿಯಲ್ಲಿರುವ ಕಚೇರಿಯಲ್ಲಿ ನಡೆಯಿತು.

ಪುತ್ತೂರಿನ ಬಿ. ಕೆ.ಗ್ರೂಪ್ ನ ಮಾಲಕರಾದ ಮೊಹಿನುದ್ದೀನ್ ಪುತ್ತೂರು , ಬೀಡಿ ಉದ್ಯಮಿ ಪ್ರವೀಣ್ ಬಲ್ನಾಡ್, ಗುರುರಾಜ್ ಸಲೂನ್‌ನ ಮಾಲಕರಾದ ಜಿ. ಬಿ. ವೆಂಕಟೇಶ್, ಅರುಣಾ ಕೊರ್ಟ್ ರೊಡ್, ಪಿ. ಬಿ. ಕೆ. ಮುಹಮ್ಮದ್ ಪುತ್ತೂರು, ಕಿರಣ್ ಕೈಕಿನಿ ಭಟ್ಕಳ, ಹಮೀದ್ ಹಾಜಿ ಬಲ್ನಾಡ್,ಪ್ರಸಾದ್ ರೈ ಕೆರೆಮೂಲೆ, ಕೆನರಾ ಪ್ರಿಂಟರ್ ಮಾಲಕ ಹರ್ಷದ್, ಕೆ.ಎಲ್. 14 ಮಾಲಕ ನವಾಝ್, ಬಾತೀಷ ಐವಾ, ಕೆ. ಎಲ್. 17 ಮಾಲಕ ಮನ್ಸೂರ್ ಬಲ್ನಾಡ್, ಫ್ಲೈಟೆಕ್ ನ ಪಾಲುದಾರರಾದ ಇಹಿತಿಸಾಮ್, ಸಲ್ಮಾನ್ ಸಾಲ್ಮರ, ಯುವ ಫೂಟ್ ವೇರ್ ನ ಮಾಲಕ ಸತ್ತಾರ್ , ಉಮ್ಮರ್ ಪೆರಿಗೇರಿ, ರಘ ದರ್ಬೆತಡ್ಕ ಮೊದಲಾದವರು ಉಪಸ್ಥಿತರಿದ್ದರು. ಟಾಪ್ ಟೆನ್ ಲಕ್ಕಿ ಸ್ಕೀಮ್ ನ ಪಾಲುದಾರರಾದ ಜುನೈದ್ ಸಾಲ್ಮರ ಸ್ವಾಗತಿಸಿ, ಅಶೋಕ್ ಆಲಂಕಾರು ವಂದಿಸಿದರು.ಆಸೀಫ್ ಬಲ್ನಾಡ್ ಸಹಕರಿಸಿದರು.

ಟಾಪ್ ಟೆನ್ ಲಕ್ಕಿ ಸ್ಕೀಂ ನ ಪ್ರಥಮ ಡ್ರಾ ನ.13ರಂದು ನಡೆಯಲಿದ್ದು, ಪ್ರತೀ ವಾರ 200 ರೂಪಾಯಿಯಂತೆ 40 ಕಂತುಗಳನ್ನು ಪಾವತಿಸಬೇಕಾಗಿದೆ.ಪ್ರತೀ ಸೋಮವಾರ ಸಾಯಂಕಾಲ ಐದು ಗಂಟೆಗೆ ಕಚೇರಿಯಲ್ಲಿ ಡ್ರಾ ನಡೆಯಲಿದ್ದು, ಡ್ರಾ ವಿಜೇತರಾದ ಸದಸ್ಯರು ಮುಂದಿನ ಕಂತು ಕಟ್ಟಬೇಕಾಗಿಲ್ಲ. ಉಳಿದಂತೆ 40 ಕಂತುಗಳನ್ನು ಕಟ್ಟಿ ವಿಜೇತರಾಗದೆ ಉಳಿದ ಸದಸ್ಯರಿಗೆ ಬ್ರಾಂಡೆಟ್ ಕಂಪನಿಗಳ ಎಲೆಕ್ಟ್ರೋನಿಕ್ಸ್ ಐಟಂಗಳನ್ನು ಉತ್ತಮ ವ್ಯಾರೆಂಟಿಯೊಂದಿಗೆ ನೀಡಲಾಗುವುದು. ಸ್ಕೀಂ ಗೆ ಸೇರಿರುವ ಸದಸ್ಯರಿಗೆ ಬಂಪರ್ ಡ್ರಾದಲ್ಲಿ ಕಾರನ್ನು ಗೆಲ್ಲುವ ಅವಕಾಶವಿದೆ.

ಜನರ ವಿಶ್ವಾಸದೊಂದಿಗೆ ಮುನ್ನಡೆಯುತ್ತಿದ್ದೇವೆ
ನಾವು ಈ ಹಿಂದೆ ಐದು ಆವೃತ್ತಿಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಅದರಲ್ಲಿ ಅದೃಷ್ಟ ಗ್ರಾಹಕರಿಗೆ ಬೈಕ್ ಗಳು ಹಾಗೂ ಬಂಪರ್ ಡ್ರಾದಲ್ಲಿ ಕಾರುಗಳನ್ನು ನೀಡಿದ್ದೇವೆ. ಅಷ್ಟು ಮಾತ್ರವಲ್ಲದೆ ವಿಜೇತರಿಗೆ ಹಾಗೂ ವಿಜೇತರಾಗದೆ ಉಳಿದ ಸದಸ್ಯರಿಗೆ ಬ್ರಾಂಡೆಡ್ ಐಟಂ ಗಳನ್ನು ನೀಡುವ ಮೂಲಕ ಎಲ್ಲರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದೆವು. ಈ ವರೆಗೆ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವೇ ಟಾಪ್ ಟೆನ್ ಲಕ್ಕಿ ಸ್ಕೀಮ್ ಇಷ್ಟೊಂದು ಮುನ್ನಡೆಯಲು ಸಾಧ್ಯವಾಗಿದೆ. ಈ ಭಾರಿಯೂ ಜನರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ. ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ಮುನ್ನಡೆಯಲಿದ್ದೇವೆ.
ಪಾಲುದಾರರು

LEAVE A REPLY

Please enter your comment!
Please enter your name here