ಪೊಲೀಸ್ ವ್ಯವಸ್ಥೆಗೆ ಸಂದ ಗೌರವ – ತಂಡಕ್ಕೆ ಅಭಿನಂದನೆ ಸಲ್ಲಿಸಿದ ಶಾಸಕ ಅಶೋಕ್ ರೈ

0

ಪುತ್ತೂರು: ಸೆ.6ರಂದು ಬಡಗನ್ನೂರು ಗ್ರಾಮದ ಕುದ್ಕಾಡಿ ಗುರುಪ್ರಸಾದ್ ರೈ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣವನ್ನು ತಿಂಗಳೊಳಗೆ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದಕ್ಕಾಗಿ ಪೊಲೀಸರನ್ನು ಶಾಸಕ ಅಶೋಕ್‌ ಕುಮಾರ್‌ ರೈ ಅಭಿನಂದಿಸಿದ್ದಾರೆ.

ಅಂತರರಾಜ್ಯ ದರೋಡೆಕೋರರನ್ನು ಬಂಧಿಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ದರೋಡೆ ಮಾಡಿದ ಬಳಿಕ ಆ ತಂಡ ಅಲ್ಲಿ ಯಾವುದೇ ಕುರುಹುಗಳನ್ನು ಬಿಟ್ಟು ಹೋಗಿರಲಿಲ್ಲ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿದ್ದ ತಾಯಿ ಮತ್ತು ಮಗ ಬಿಟ್ಟರೆ ಉಳಿದಂತೆ ಒಂದೇ ಒಂದು ಸಾಕ್ಷಿಯೂ ಇರಲಿಲ್ಲ. ಆದರೆ ಜಿಲ್ಲಾ ಎಸ್ಪಿ ಪ್ರಕರಣದ ಪತ್ತೆಗಾಗಿ ತಂಡವನ್ನು ರಚನೆ ಮಾಡಿ ಆ ಮೂಲಕ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದ ನೇತೃತ್ವ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್‌ಗಳು, ಸಬ್ ಇನ್ಸ್‌ಪೆಕ್ಟರ್‌ಗಳು, ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ತಂಡದಲ್ಲಿ ಪುತ್ತೂರು ನಗರ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ಸಿಬಂ ದಿಗಳು ಎಲ್ಲರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಜಿಲ್ಲೆಯ ಪೊಲೀಸ್ ವ್ಯವಸ್ಥೆ ಭದ್ರವಾಗಿದೆ ಎಂಬುದಕ್ಕೆ ಇದುವೇ ದೊಡ್ಡ ಸಾಕ್ಷಿಯಾಗಿದೆ ಮತ್ತು ಜಿಲ್ಲೆ ಮತ್ತು ರಾಜ್ಯ ಪೊಲೀಸ ವ್ಯವಸ್ಥೆಗೆ ಸಂದ ದೊಡ್ಡ ಗೌರವವಾಗಿದೆ ಎಂದು ಶಾಸಕ ಅಶೋಕ್ ಕುಮಾರ್‌ ರೈ ಹೇಳಿದ್ದಾರೆ.

LEAVE A REPLY

Please enter your comment!
Please enter your name here