ಹಿಂದೂ ಶೌರ್ಯ ಜಾಗರಣ ರಥಯಾತ್ರೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ-ಮಾಜಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ವಿಶ್ವ ಹಿಂದೂ ಪರಿಷತ್ 60ನೇ ವಾರ್ಷಿಕ ಸಂದರ್ಭದಲ್ಲಿ ದೇಶಾದ್ಯಾಂತ ಶೌರ್ಯ ಜಾಗರಣ ರಥಯಾತ್ರೆ ಆರಂಭಗೊಂಡಿದ್ದು, ಅ.7ರಂದು ಪುತ್ತೂರಿನಲ್ಲಿ ನಡೆಯುವ ಹಿಂದೂ ಶೌರ್ಯ ಜಾಗರಣ ರಥಯಾತ್ರೆ ಮತ್ತು ಹಿಂದೂ ಶೌರ್ಯ ಸಂಗಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಭಾಗವಹಿಸುವಂತೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಕರೆ ನೀಡಿದ್ದಾರೆ.


ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಶೌರ್ಯ ಪ್ರರಾಕ್ರಮಗಳನ್ನು ಒಳಗೊಂಡ ಇತಿಹಾಸ ಇರುವ ಭಾರತದಲ್ಲಿ ತಮ್ಮನ್ನು ತಾವು ಶೌರ್ಯ ಪ್ರರಾಕ್ರಮಗಳಲ್ಲಿ ಸಮರ್ಪಣೆ ಮಾಡಿಕೊಂಡ ರಾಜ ಮಹಾರಾಜರುಗಳು ಮತ್ತು ದೇಶ ಭಕ್ತರು ಈ ನಾಡಿನ ಜನತೆಗೆ ಪರಿಚಯ ಆಗಬೇಕು. ಅವರ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ದೇಶದಲ್ಲಿ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ 60ನೇ ಷಷ್ಠ್ಯಬ್ದ ನಿಮಿತ್ತ ದೇಶದಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯುತ್ತಿದ್ದು, ಅ.7ರಂದು ಪುತ್ತೂರಿಗೆ ಬರುವ ಸಂದರ್ಭ ಶೋಭಯಾತ್ರೆಯಲ್ಲಿ ಮತ್ತು ಕಿಲ್ಲೆ ಮೈದಾನದಲ್ಲಿ ನಡೆಯುವ ಶೌರ್ಯ ಜಾಗರಣ ಹಿಂದು ಸಂಗಮದಲ್ಲಿ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಕಾರ್ಯಕರ್ತರು ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here