ಅ.15- ಸವಣೂರಿನಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿ ಮತ್ತು ವಾಣಿಜ್ಯ ಮಳಿಗೆಗಳ ಸಂಕೀರ್ಣದ ಶಂಕುಸ್ಥಾಪನೆ

0

ಪುತ್ತೂರು: ದರ್ಬೆಯ ಪ್ರಶಾಂತ್ ಮಹಲ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈಯವರು ಅಧ್ಯಕ್ಷರಾಗಿರುವ ದ.ಕ.ಜಿಲ್ಲಾ ಮಟ್ಟದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕೇಂದ್ರ ಕಚೇರಿ ಮತ್ತು ವಾಣಿಜ್ಯ ಮಳಿಗೆಗಳ ಸಂಕೀರ್ಣದ ಶಂಕುಸ್ಥಾಪನೆಯು ಅ.15ರಂದು ಬೆಳಿಗ್ಗೆ 10.30ಕ್ಕೆ ಸವಣೂರಿನಲ್ಲಿ ನಡೆಯಲಿದೆ.
ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿರವರು ನೂತನ ಕಟ್ಟಡದ ಶಂಕು ಸ್ಥಾಪನೆಗೈದು, ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಸುಳ್ಯ ಶಾಶಕಿ ಭಾಗೀರಥಿ ಮುರುಳ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ಕಡಬ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್, ದ.ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಿ.ಎಸ್‌ರವರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು ಹಾಗೂ ಮಹಾಪ್ರಬಂಧಕ ವಸಂತ್ ಜಾಲಾಡಿರವರು ತಿಳಿಸಿದ್ದಾರೆ.

3.25 ಕೋಟಿ ರೂ, ವೆಚ್ಚದ ಕಟ್ಟಡ
ಸವಣೂರಿನಲ್ಲಿ ನಿರ್ಮಾಣವಾಗಲಿರುವ ಆದರ್ಶ ಸಹಕಾರ ಸಂಸ್ಥೆಯ ಕೇಂದ್ರ ಕಚೇರಿ ಮತ್ತು ವಾಣಿಜ್ಯ ಮಳಿಗೆಗಳ ಕಟ್ಟಡವು ಸುಮಾರು 3.75 ಕೋಟಿ ರೂ, ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಎರಡು ಮಹಡಿಗಳನ್ನು ಹೊಂದಿರುವ ಕಟ್ಟಡದಲ್ಲಿ ಪ್ರಥಮ ಮಹಡಿಯಲ್ಲಿ ಆದರ್ಶ ಸಹಕಾರ ಸಂಸ್ಥೆಯ ಕೇಂದ್ರ ಕಚೇರಿ ಹಾಗೂ ನೆಲ ಅಂತಸ್ತಿನಲ್ಲಿ ಆದರ್ಶ ಸಹಕಾರ ಸಂಸ್ಥೆಯ ಸವಣೂರು ಶಾಖಾ ಕಚೇರಿ, ರೆಸ್ಟೋರೆಂಟ್, ವಾಣಿಜ್ಯ ಮಳಿಗೆಗಳನ್ನು ಹೊಂದಿದ್ದು, ಎರಡನೇ ಮಹಡಿಯಲ್ಲಿ ಸುಜ್ಜಿತವಾದ 750 ಮಂದಿ ಕುಳಿತು ಕೊಳ್ಳುವ ಸುಸಜ್ಜಿತವಾದ ಸಭಾ ಭವನವನ್ನು ಹೊಂದಲಿದ್ದು, ಅಭಿವೃದ್ಧಿ ಹೊಂದುತ್ತಿರುವ ಸವಣೂರಿಗೆ ಮತ್ತೊಂದು ಕೊಡುಗೆಯನ್ನು ಸವಣೂರು ಸೀತಾರಾಮ ರೈಯವರು ನೀಡುತ್ತಿದ್ದಾರೆ.

ಜಿಲ್ಲಾ ಮಟ್ಟದ ಸಹಕಾರ ಸಂಸ್ಥೆ
ಸವಣೂರು ಸೀತಾರಾಮ ರೈಯವರು ಸ್ಥಾಪನೆ ಮಾಡಿರುವ ಆದರ್ಶ ಸಹಕಾರ ಸಂಸ್ಥೆಯು ಜಿಲ್ಲಾ ಮಟ್ಟದ ಸಹಕಾರ ಸಂಸ್ಥೆಯಾಗಿದ್ದು, ಈಗಾಗಲೇ ಜಿಲ್ಲೆಯಾದ್ಯಾಂತ 13 ಶಾಖೆಗಳನ್ನು ಹೊಂದಿದ್ದು, ಆದರ್ಶ ಸಹಕಾರ ಸಂಸ್ಥೆಯು 120 ಕೋಟಿ ರೂ, ಠೇವಣಿ ಹೊಂದಿದ್ದು, ಗ್ರಾಹಕರಿಗೆ 100 ಕೋಟಿ ಸಾಲವನ್ನು ವಿತರಿಸಲಾಗಿದೆ. ಸಂಘವು 2022-23ನೇ ಸಾಲಿನಲ್ಲಿ 605 ಕೋಟಿ 34 ಲಕ್ಷ ದಷ್ಟು ವಾರ್ಷಿಕ ವ್ಯವಹಾರ ಮಾಡಿದ್ದು, 1.51 ಕೋಟಿ ರೂ, ಲಾಭವನ್ನುಗಳಿಸಿದ್ದು, ಸದಸ್ಯರಿಗೆ 15 ಶೇಕಡಾ ಡಿವಿಡೆಂಡ್ ನೀಡಲಾಗಿದ್ದು, 8600 ಸದಸ್ಯರನ್ನು ಹೊಂದಿರುವ ಸಂಸ್ಥೆಯಲ್ಲಿ 60 ಮಂದಿ ನೌಕರರು ಇದ್ದು, ಸಂಸ್ಥೆಯ 14ನೇ ಶಾಖೆ ನವೆಂಬರ್ ತಿಂಗಳಲ್ಲಿ ಬಿಸಿರೋಡ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ತಿಳಿಸಿದ್ದಾರೆ.


ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 26 ಲಕ್ಷ ರೂ, ಧನ ಸಹಾಯ ವಿತರಣೆ
ಆದರ್ಶ ಸಹಕಾರ ಸಂಸ್ಥೆಯು ತನ್ನ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ 5 ವರ್ಷಗಳಿಂದ ಧನ ಸಹಾಯವನ್ನು ವಿತರಣೆ ಮಾಡಲಾಗುತ್ತಿದ್ದು, ಈ ತನಕ 26 ಲಕ್ಷ ರೂಪಾಯಿ ಮೊತ್ತದ ಧನ ಸಹಾಯವನ್ನು ನೀಡಲಾಗಿದೆ
-ಸವಣೂರು ಕೆ.ಸೀತಾರಾಮ ರೈ
ಅಧ್ಯಕ್ಷರು- ಆದರ್ಶ ವಿವಿಧೋದ್ದೇಶ ಸಹಕಾರ ಸಂಘ

LEAVE A REPLY

Please enter your comment!
Please enter your name here