ಅ.15-24: ಮೊಟ್ಟೆತ್ತಡ್ಕ ಮಿಶನ್‌ಮೂಲೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅ.15 ರಿಂದ 24ರ ವರೆಗೆ ವರ್ಷಂಪ್ರತಿ ಆಚರಿಸುತ್ತಿರುವ ಸಾರ್ವಜನಿಕ ನವರಾತ್ರಿ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಅ.15ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ರಾತ್ರಿ ಯಶವಂತ ನಾಯಕ್ ಪಾದಲಾಡಿ ಪ್ರಾಯೋಜಕತ್ವದಲ್ಲಿ ಅಭಿನಯ ಕಲಾವಿದರು ಪುತ್ತೂರು ಅಭಿನಯದ, ಅಶ್ವಥ್ ಎನ್.ಪುತ್ತೂರು ಸಾರಥ್ಯದ, ವಿಖ್ಯಾತ್ ಅಮ್ಮುಂಜ ಸಂಯೋಜನೆಯ, ಯತೀಶ್ ಸಂಪ್ಯ ಸಂಗೀತದ, ಧನ್‌ರಾಜ್ ಕುದ್ರಡ್ಕ ರಚನೆಯ, ಕೇಶವ ಮಚ್ಚಿಮಲೆ ನಿರ್ದೇಶನದ ತುಳು ನಿಗೂಢಮಯ ನಾಟಕ ಮಣ್ಣ್..! ಕಾರ್ನಿಕೆದ..? ನಡೆಯಲಿರುವುದು. ಅ.16ರಂದು ಇಂಚರ ಮ್ಯೂಸಿಕಲ್ ಪುತ್ತೂರು ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಬಳಿಕ ಮಹಾಪೂಜೆ, ಅ.17ರಂದು ಪುತ್ತೂರು ಬಾಲವನ ಶ್ರೀದೇವಿ ಮಹಿಳಾ ಯಕ್ಷತಂಡದಿಂದ ಯಕ್ಷಗಾನ ಕದಂಬ ಕೌಶಿಕೆ ಬಳಿಕ ಮಹಾಪೂಜೆ, ಅ.18ರಂದು ಮೊಟ್ಟೆತ್ತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಮಹಾಪೂಜೆ, ಅ.19ರಂದು ಮುಕ್ರಂಪಾಡಿ ಆನಂದಾಶ್ರಮ ಅಂಗನವಾಡಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು. ಅ.20ರಂದು ಪುತ್ತೂರು ಬಾಲವನ ಸಾಯಿ ಕಲಾ ಯಕ್ಷ ತಂಡದಿಂದ ಯಕ್ಷಗಾನ ಶಶಿಪ್ರಭಾ ಪರಿಣಯ ಬಳಿಕ ಮಹಾಪೂಜೆ, ಅ.21ರಂದು ಸೆವೆನ್ ಸ್ಟಾರ್ ಗೈಸ್ ಪುತ್ತೂರು ಅರ್ಪಿಸುವ ಐಕ್ಯ ಕಲಾ-ಸೇವಾ ಟ್ರಸ್ಟ್ ಪುತ್ತೂರು ಇದರ ನೇತೃತ್ವದಲ್ಲಿ ದಶಮಾನೋತ್ಸವದ ಪ್ರಯುಕ್ತ ದೇಶ-ವಿದೇಶಗಳಲ್ಲಿ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿ ಜನಮನ ಗೆದ್ದು ಪ್ರಸಿದ್ಧಿ ಪಡೆದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ನೃತ್ಯ ತಂಡದಿಂದ ಶಾಸ್ತ್ರೀ, ಜಾನಪದ, ನೃತ್ಯರೂಪಕ ಹಾಗೂ ವೈವಿಧ್ಯಮಯವಾದ ನೃತ್ಯ ಪ್ರದರ್ಶನ ಅಲ್ಲದೇ ಪ್ರಸಿದ್ಧ ಗಾಯಕ-ಗಾಯಕಿಯರಿಂದ ಸ್ವರಗಾನ ಮಾಧುರ್ಯ ದಶಸಂಭ್ರಮ-2023 ಅದ್ದೂರಿ ಮನೋರಂಜನಾ ಕಾರ್ಯಕ್ರಮ ನೃತ್ಯ-ಗಾನ-ವೈಭವ ಬಳಿಕ ಮಹಾಪೂಜೆ ನಡೆಯಲಿದೆ.

ಅ.22ರಂದು ನಾಟ್ಯರಂಜಿನಿ ಕಲಾಲಯ ಮೊಟ್ಟೆತ್ತಡ್ಕ ಅರ್ಪಿಸುವ ಗುರು ಪ್ರಮೀಳ ಉದಯ(ಎಂ.ಎಫ್.ಎ ಚೆನ್ನೈ), ವಿದುಷಿ ಪಾರ್ವತಿ ಗಣೇಶ್ ಭಟ್ ಮತ್ತು ತಂಡದಿಂದ ಹಿಮ್ಮೇಳವನ್ನೊಳಗೊಂಡ `ಭರತನಾಟ್ಯ-ಗೆಜ್ಜೆಪೂಜೆ’ ಬಳಿಕ ಮಹಾಪೂಜೆ, ಅ.23ರಂದು ಮೊಟ್ಟೆತ್ತಡ್ಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಮಹಾಪೂಜೆ, ಅ.24ರಂದು ವಿಜಯದಶಮಿ ದಿನದಂದು ಮಧ್ಯಾಹ್ನ ಮಕ್ಕಳಿಗೆ ಅಕ್ಷರಾಭ್ಯಾಸ, ವಿಜಯದಶಮಿ ಪೂಜೆ, ಪ್ರಸಾದ ವಿತರಣೆ ಮತ್ತು ನವಾನ್ನ ಭೋಜನ ಜರಗಲಿದೆ. ಪ್ರಧಾನ ಅರ್ಚಕರಾಗಿ ಉದಯನಾರಾಯಣ ಕಲ್ಲೂರಾಯ ಸಂಪ್ಯ, ಸಹಾಯಕ ಅರ್ಚಕರಾಗಿ ರಮೇಶ್ ಅಯ್ಯರ್ ಮುಕ್ರಂಪಾಡಿರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿರುವರು.

ಪ್ರತಿದಿನ ರಾತ್ರಿ ಪೂಜೆಯ ಬಳಿಕ ಸಾರ್ವಜನಿಕ ಅನ್ನದಾನ ನಡೆಯಲಿರುವುದು. ಭಕ್ತಾಭಿಮಾನಿಗಳು ಈ ಹತ್ತು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಮೋಹನ್ ರೈ ಮಿಶನ್‌ಮೂಲೆ, ಅಧ್ಯಕ್ಷ ರಾಮ ಶೆಟ್ಟಿ, ಕಾರ್ಯದರ್ಶಿ ಕೆ.ಬಿ ಶೇಖರ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಸಂತೋಷ್ ರೈ, ಸುಂದರ ಕೆ, ಕೋಶಾಧಿಕಾರಿ ಮೋಹನ್ ಕುಮಾರ್ ಡಿ, ಲೆಕ್ಕಪರಿಶೋಧಕ ಬಿ.ವಿಶ್ವನಾಥ ರೈ ಮಿಶನ್‌ಮೂಲೆ, ಉಪಾಧ್ಯಕ್ಷರುಗಳಾದ ಸಂತೋಷ್ ಕುಮಾರ್ ಕೆ, ಸತೀಶ್ ಎಂ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-ಅ.21 ಶನಿವಾರದಿಂದ ಅ.23ರ ಸೋಮವಾರದ ವರೆಗೆ ರಾತ್ರಿ ವಾಹನಗಳಿಗೆ ಆಯುಧಪೂಜೆ ನಡೆಯಲಿರುವುದು.
-ಅ.15 ಆದಿತ್ಯವಾರದಿಂದ ಅ.23 ಸೋಮವಾರದ ವರೆಗೆ ಪ್ರತಿದಿನ ಸಂಜೆ(ಗಂಟೆ ಆರರಿಂದ) ಭಜನಾ ಕಾರ್ಯಕ್ರಮ ನಡೆಯಲಿರುವುದು.

ಕ್ಷೇತ್ರ ಶೃಂಗಾರಮಯ..
ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರವು ಕೇಸರಿ ಬಣ್ಣದ ಬಂಟಿಂಗ್ಸ್ ಹಾಗೂ ಲೈಟಿಂಗ್ಸ್ ನೊಂದಿಗೆ ಶೃಂಗಾರಗೊಂಡಿದೆ. ಶ್ರೀ ಕ್ಷೇತ್ರದ ಯುವಸಮೂಹವು ಜೊತೆಗೂಡಿ ಶ್ರೀ ಕ್ಷೇತ್ರ ಅಲ್ಲದೆ ಮೊಟ್ಟೆತ್ತಡ್ಕ ಜಂಕ್ಷನ್‌ನಿಂದ ಮುಕ್ರಂಪಾಡಿ-ಮೊಟ್ಟೆತ್ತಡ್ಕ ತಿರುವಿನಲ್ಲಿನ ಸುಮಾರು ಒಂದು ಕಿ.ಮೀ ರಸ್ತೆಯ ಇಕ್ಕೆಲಗಳುದ್ದಕ್ಕೂ ಕೇಸರಿ ಬಣ್ಣದ ಬಂಟಿಂಗ್ಸ್ ಗಳನ್ನು ಅಳವಡಿಸಿ ಕೇಸರಿಮಯದೊಂದಿಗೆ ಶೃಂಗಾರಗೊಂಡಿದೆ.

LEAVE A REPLY

Please enter your comment!
Please enter your name here