ಹೆಸರಾಂತ ಜವುಳಿ ಮಳಿಗೆ ಕುಮ್-ಕುಮ್ ಫ್ಯಾಶನ್ ಆಯೋಜನೆ-ಗ್ರಾಹಕರಿಗೆ ಕಾರು, ದ್ವಿಚಕ್ರ ವಾಹನಗಳ ಸಹಿತ ಹಲವು ಬಹುಮಾನಗಳ ಘೋಷಣೆ

0

ಪುತ್ತೂರು: ಪುತ್ತೂರಿನ ಹೆಸರಾಂತ ಜವುಳಿ ಮಳಿಗೆ, ಇಲ್ಲಿನ ಮುಖ್ಯರಸ್ತೆ ಪುರಸಭಾ ವಾಣಿಜ್ಯ ಸಂಕೀರ್ಣ ಸಮೀಪ ವ್ಯವಹರಿಸುತ್ತಿರುವ ಕುಮ್ ಕುಮ್ ಫ್ಯಾಶನ್ ಮಳಿಗೆಯಲ್ಲಿ ನವರಾತ್ರಿ ಸಂಭ್ರಮದ ಸಲುವಾಗಿ ಅ.15ರಿಂದ ಶಾಪಿಂಗ್ ಪ್ರಿಯರಿಗೆ ಬಿಗ್‌ ಬಂಪರ್ ಬಹುಮಾನದ ಆಫರ್‌ ನ್ನು ಮುಂದಿಟ್ಟಿದೆ.

ಗ್ರಾಹಕರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಸಲುವಾಗಿ ಬೈಕ್, ಸ್ಕೂಟರ್ ಕೊಡುಗೆ ಜೊತೆಗೆ ಇದೀಗ ಬಂಪರ್ ಬಹುಮಾನವಾಗಿ ಕಾರು ಸೇರ್ಪಡೆಗೊಂಡಿದೆ. ಜೊತೆಗೆ ಶಾಪಿಂಗ್ ಮಾಡಿರುವಂತಹ ಗ್ರಾಹಕರಿಗೆ ಹಲವು ಬಗೆಯ ಬಹುಮಾನಗಳು ಲಭಿಸಲಿದ್ದು, ವಿಜೇತ ಗ್ರಾಹಕರಿಗೆ ಸಂಸ್ಥೆ ಮಾಲಕ ಭೀಮ್ ಪಟೇಲ್ ಬಹುಮಾನವನ್ನು ವಿತರಿಸಿದರು. ಮಳಿಗೆಯಲ್ಲಿ ಯಾವುದೇ ಬಗೆಯ ಜವುಳಿ ಖರೀದಿಗೆ ಕೂಪನ್ ಸಿಗಲಿದ್ದು, ಬಂಪರ್ ಬಹುಮಾನ ಮೂಲಕ ಕಾರು ಗೆಲ್ಲುವ ಅವಕಾಶವಿದೆ.

ಪ್ರತಿ ಬಗೆಯ ಜವಳಿ ಖರೀದಿ ಮೇಲೆ ಖಚಿತ ಉಡುಗೊರೆ ಜೊತೆಗೆ ವಿವಿಧ ಮೊತ್ತದ ರೂ. 999/-, 2499/-, 4999/- ಬೆಲೆಯ ಖರೀದಿಗೆ ಸಿಲ್ವರ್, ಗೋಲ್ಡ್ ಹಾಗೂ ಡೈಮಂಡ್ ಸ್ಕ್ರ್ಯಾಚ್ ಕಾರ್ಡುಗಳ ಜೊತೆ ಲಕ್ಕಿ ಕೂಪನ್ ಕಾರ್ಡು ಗ್ರಾಹಕರಿಗೆ ಸಿಗಲಿದೆ. ಅದೃಷ್ಟವಂತ ಗ್ರಾಹಕರಿಗೆ ಮಾರುತಿ ಕಾರು, ಹಿರೋ ಬೈಕ್, ಹೋಂಡಾ ಸ್ಕೂಟರ್ ಸಹಿತ ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ, ಗೊದ್ರೇಜ್ ಸೇರಿದಂತೆ 30 ಸಾವಿರಕ್ಕೂ ಮಿಕ್ಕಿ ಬಹುಮಾನಗಳು ಲಭಿಸಲಿದೆ. ಹಿಂದೆಂದೂ ಯಾರೂ ನೀಡದ ಕೊಡುಗೆಗಳನ್ನು ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಅಯೋಜಿಸಿದ್ದು, ಶಾಪಿಂಗ್ ಪ್ರಿಯರು ಬಿಗ್ ಫೆಸ್ಟಿವ್ ಸೀಸನ್ ಸೇಲ್ ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆ ಮಾಲೀಕರು ವಿನಂತಿಸಿದ್ದಾರೆ. ಮಳಿಗೆಗೆ ಬರುವಂತಹ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನೂ ಕೆ.ಎಸ್.ಆರ್.ಟಿ.ಸಿ.ವಾಣಿಜ್ಯ ಸಂಕೀರ್ಣ ಇದರ ತಳ ಭಾಗದಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದ್ದು, ಗ್ರಾಹಕರು ಕುಮ್ ಕುಮ್ ಮಳಿಗೆಯಿಂದ ಪಾರ್ಕಿಂಗ್ ಕೂಪನ್ ಪಡೆದುಕೊಂಡು ಪಾರ್ಕಿಂಗ್ ಸ್ಲಾಟ್ ಗೆ ಹೋಗಬೇಕೆಂದು ಮಾಲೀಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here