ಸವಣೂರು: ಅಡಿಕೆ,ಕಾಳುಮೆಣಸು, ಕಾಫಿ ಬೆಳೆಗಳ ನಿರ್ವಹಣೆ ಮಾಹಿತಿ ಕಾರ್ಯಾಗಾರ

0

ಆಧಾರ್ ನೊಂದಣಿ ಮತ್ತು ತಿದ್ದುಪಡಿ, ಅಪಘಾತ ಹಾಗೂ ಆರೋಗ್ಯ ವಿಮೆ ಶಿಬಿರ-ಮಧುಮೇಹ, ರಕ್ತದೊತ್ತಡ ತಪಾಸಣೆ

ಸವಣೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ,ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇದರ ಆಶ್ರಯದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ, ಸವಣೂರು ಗ್ರಾಮ ಪಂಚಾಯತ್, ಕಡಬ ತಾಲೂಕು ಕೃಷಿಕ ಸಮಾಜ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದಲ್ಲಿ ಆಧಾರ್ ನೊಂದಣಿ ಮತ್ತು ತಿದ್ದುಪಡಿ ,ಅಪಘಾತ ಹಾಗೂ ಆರೋಗ್ಯ ವಿಮೆ ಶಿಬಿರ, ಅಡಿಕೆ ,ಕಾಳುಮೆಣಸು, ಕಾಫಿ ಬೆಳೆಗಳ ರೋಗ ಮತ್ತು ಗೊಬ್ಬರ ನಿರ್ವಹಣೆ ಮಾಹಿತಿ ಕಾರ್ಯಾಗಾರ  ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ನಡೆಯಿತು.

ಶಿಬಿರವನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ  ಸುಂದರಿ ಬಿ.ಎಸ್ ಅವರು ಉದ್ಘಾಟಿಸಿ ಮಾತನಾಡಿ, ಜನರಿಗೆ ಅತೀ ಅಗತ್ಯವಿರುವ ಆಧಾರ್ ತಿದ್ದುಪಡಿ ಶಿಬಿರ ,ವಿಮೆ ಮಾಡುವ ಶಿಬಿರ ಹಾಗೂ ಕೃಷಿಕರಿಗೆ ಮಾಹಿತಿ ಕಾರ್ಯಾಗಾರ ಆಯೋಜನೆ ಮಾಡಿರುವುದು ರೈತರ ಕಲ್ಯಾಣದ ಜತೆಗೆ ಸಮಾಜಮುಖಿಯಾಗಿ ಕಾರ್ಯಕ್ರಮವಾಗಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ಸ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಮಾತನಾಡಿ, ಸಹಕಾರ ಸಂಘವು ಸಾಲ ವಿತರಣೆ ,ಠೇವಣಿ ಸಂಗ್ರಹವಲ್ಲದೇ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದೆ.ಈ ಭಾಗದ ಕೆಲ ರೈತರಿಗೆ ಬೆಳೆವಿಮೆಯಲ್ಲಿ ತಾಂತ್ರಿಕ ಸಮಸ್ಯೆಗಳಿದ್ದವು ಅದನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪರಿಹರಿಸಿದ್ದೇವೆ.ಸಂಸ್ಥೆಯ ಮೂಲಕ ಪ್ರೀಮಿಯಂ ಪಾವತಿ ಮಾಡಿದ ಎಲ್ಲಾ ರೈತರ ಖಾತೆಗೆ ಬೆಳೆವಿಮೆ ಜಮೆಯಾಗಿದೆ ಎಂದರು.

ಅಂಚೆ ಇಲಾಖೆಯ ಮೇಲ್ವಿಚಾರಕರಾದ ಆನಂದ ಗೌಡ ಅವರು ಇಲಾಖೆಯ ಮಾಹಿತಿ ನೀಡಿದರು. ಸವಣೂರು ಸಮುದಾಯ ಆರೋಗ್ಯಾಧಿಕಾರಿ ಸುಶ್ಮಿತಾ ಅವರು ಆರೋಗ್ಯ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಅವರು ,ಇಲಾಖೆಯ ಸವಲತ್ತು ಹಾಗೂ ಯೋಜನೆಯ ಮಾಹಿತಿ ನೀಡಿದರು.

ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ‌.ರಶ್ಮಿ ಅವರು ಅಡಿಕೆ ,ಕಾಳುಮೆಣಸು, ಕಾಫಿ ಬೆಳೆಗಳ ರೋಗ ಮತ್ತು ಗೊಬ್ಬರ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟು ರೈತರೊಂದಿಗೆ ಸಂವಾದ ನಡೆಸಿದರು.

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶಿವಪ್ರಸಾದ್ ಕಳುವಾಜೆ, ಪ್ರಕಾಶ್ ರೈ ಸಾರಕರೆ,ಜ್ಞಾನೇಶ್ವರಿ ಬರೆಪ್ಪಾಡಿ,ಸೀತಾಲಕ್ಷ್ಮೀ,ಗಂಗಾಧರ ಪೆರಿಯಡ್ಕ,ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಸದಸ್ಯರಾದ ತೀರ್ಥರಾಮ ಕೆಡೆಂಜಿ, ಚಂದ್ರಾವತಿ ಸುಣ್ಣಾಜೆ, ಇಂದಿರಾ ಬೇರಿಕೆ,ರಾಜೀವಿ ಶೆಟ್ಟಿ, ಹರಿಕಲಾ ರೈ ಕುಂಜಾಡಿ ಹಾಗೂ ಸವಣೂರು ಪ್ರಾಥಮಿಕ ಕೃ.ಪ.ಸ.ಸಂಘದ ಸಿಬ್ಬಂದಿಗಳು,ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇದರ ನಿರ್ದೇಶಕರು ಉಪಸ್ಥಿತರಿದ್ದರು.

ರಕ್ಷಾ ಸುಣ್ಣಾಜೆ ಪ್ರಾರ್ಥಿಸಿದರು.ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇದರ ಅಧ್ಯಕ್ಷ ಗಿರಿಶಂಕರ ಸುಲಾಯ ಸ್ವಾಗತಿಸಿದರು. ಸವಣೂರು ಪ್ರಾ‌.ಕೃ.ಪ.ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ.ವಂದಿಸಿದರು.

LEAVE A REPLY

Please enter your comment!
Please enter your name here