ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ, ಪ್ರಣವ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಸ್ತ್ರೀ ಸಂಘಟನೆ ಬನ್ನೂರು, ಪ್ಯಾರಿಶ್ ಘಟಕ ಬನ್ನೂರು, ಭಾರತೀಯ ಅಂಚೆ ವಿಭಾಗ ಪುತ್ತೂರು, ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಆಧಾರ ನೋಂದಣಿ ಮತ್ತು ಪರಿಷ್ಕರಣ ಶಿಬಿರ, ಉಚಿತ ಕಣ್ಣು ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಅ.22 ರಂದು ಬನ್ನೂರು ಸೈಂಟ್ ಆಂತೋನಿ ಚರ್ಚ್ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರೆ.ಫಾ.ಬಲ್ತಾಝಾರ್ ಫಿಂಟೋ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಲಾರೆನ್ಸ್ ಗೋನ್ಸಾಲಿಸ್ ಎ.ಜಿ ರೋಟರಿ ಸಿಟಿ ಪುತ್ತೂರು ಇವರು ಶುಭ ಹಾರೈಸಿದರು. ರೋಟರಿ ಸಿಟಿ ಪುತ್ತೂರು ಅಧ್ಯಕ್ಷೆ ಗ್ರೇಸಿ ಗೋನ್ಸಾಲಿಸ್ ಹಾಗೂ ಸ್ತ್ರೀ ಸಂಘಟನೆಯ ಅಧ್ಯಕ್ಷರು, ಅತಿಥಿಗಳನ್ನು ಸಭೆಗೆ ಸ್ವಾಗತಿಸಿದರು. ದಯಾನಂದ ಕೆ.ಎಸ್ ಸಲಹಾ ಸಮಿತಿ ಸದಸ್ಯರು, ಪ್ರಣವ ಸಹಕಾರಿ ಹಾಗೂ ಜೊತೆ ಕಾರ್ಯದರ್ಶಿ ರೋಟರಿ ಸಿಟಿ ಪುತ್ತೂರು ಇವರು ವಂದಿಸಿದರು. ನತಾಲಿಯಾ ಫಾಯಸ್ ಕಾರ್ಯಕ್ರಮ ನಿರೂಪಿಸಿದರು. ಗುರುಪ್ರಸಾದ್ ಮಾರ್ಕೆಟಿಂಗ್ ಆಫೀಸರ್, ಪೋಸ್ಟಲ್ ಪುತ್ತೂರು. ಇವರು ಮಾಹಿತಿ ನೀಡಿದರು. ಡಾ. ಅಂಜಲಿ, ಪ್ರಸಾದ್ ನೇತ್ರಾಲಯ, ಪುತ್ತೂರು. ದಯಾಸಾಗರ ಪೂಂಜಾ, ಡೈರೆಕ್ಟರ್ ಮತ್ತು ಸೆಕ್ರೆಟರಿ, ಪ್ರಣವ ಚಾರಿಟೇಬಲ್ ಟ್ರಸ್ಟ್ ಮಂಗಳೂರು. ಮಧುಸೂದನ ನಾಯಕ ಸಲಹಾ ಸಮಿತಿ ಸದಸ್ಯರು,ಪ್ರಣವ ಸಹಕಾರಿ ಬ್ಯಾಂಕ್, ಶಾಮಲಾ ಶೆಟ್ಟಿ, ಕಾರ್ಯದರ್ಶಿ ರೋಟರಿ ಸಿಟಿ ಪುತ್ತೂರು. ಹಿತಾ ಕಾರ್ಯದರ್ಶಿ, ಸ್ತ್ರೀ ಸಂಘಟನೆ, ಬನ್ನೂರು ವೇದಿಕೆಯಲ್ಲಿದ್ದರು. ರೋಟರಿ ಸಿಟಿಯ ಸದಸ್ಯರು, ಹಾಗೂ ಪ್ರಣವ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು ಸಭೆಯಲ್ಲಿ ಹಾಜರಿದ್ದರು. 62 ಫಲಾನುಭವಿಗಳು ಅದಾರ ಪರಿಷ್ಕರಣೆ ಮಾಡಿಸಿಕೊಂಡರು, 63 ಜನ ಫಲಾನುಭವಿಗಳು ಕಣ್ಣಿನ ಪರೀಕ್ಷೆಯಲ್ಲಿ ಪಾಲ್ಗೊಂಡರು, 45 ಜನರು ರಕ್ತದ ಗ್ರೂಪ್ ಪರೀಕ್ಷೆ ಮಾಡಿಸಿಕೊಂಡರೆ, 26 ಕ್ಕೂ ಹೆಚ್ಚು ಜನ ಜೀವವಿಮೆ ಮಾಡಿಸಿಕೊಂಡರು. ಒಟ್ಟು 200ಕ್ಕೂ ಹೆಚ್ಚು ಜನ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಬನ್ನೂರು ಸಂತ ಅಂತೋನಿಯವರ ಚರ್ಚ್ ಸ್ತ್ರೀ ಸಂಘಟನ್ ಸದಸ್ಯೆ ವಿಲ್ಮಾ ಪ್ರಾರ್ಥಿಸಿದರು.