





ಪುತ್ತೂರು: ಪುತ್ತೂರು ಆಂಜನೇಯ ಯಕ್ಷಗಾನ ಮಹಿಳಾ ಸಂಘಕ್ಕೆ ಆರಂಭದಿಂದಲೂ ಅನೇಕ ವರ್ಷಗಳ ಕಾಲ ಭಾಗವತರಾಗಿದ್ದ ಕೆ. ಲೀಲಾವತಿ ಬೈಪಡಿತ್ತಾಯ ಅವರು 2023-24ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಯಕ್ಷಗುರು ಮೂಲತಃ ಕಡಬ ತಾಲೂಕಿನ ಹರಿನಾರಾಯಣ ಬೈಪಡಿತ್ತಾಯ ಅವರ ಪತ್ನಿ ಕೆ.ಲೀಲಾವತಿ ಬೈಪಡಿತ್ತಾಯ ಅವರು ಪ್ರಸ್ತುತ ಬಜ್ಪೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ. ಲೀಲಾವತಿ ಬೈಪಡಿತ್ತಾಯ ಅವರು ಪುತ್ತೂರು ಆಂಜನೇಯ ಯಕ್ಷಗಾನ ಕಲಾ ಸಂಘದ ಮಹಿಳಾ ಘಟಕ ಆರಂಭದ ಕಾಲದಿಂದಲೂ ಅನೇಕ ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ.











