ರಾಜ್ ಜ್ಯುವೆಲ್ಲರ್‍ಸ್ ನವೀಕೃತಗೊಂಡು ಶುಭಾರಂಭ – ಲಕ್ಷ್ಮೀ ಪೂಜೆ : ವಿಶೇಷ ಕೊಡುಗೆಗಳು

0

ಪುತ್ತೂರು: ಕಳೆದ 27 ವರ್ಷಗಳಿಂದ ಪುತ್ತೂರಿನಲ್ಲಿ ವ್ಯವಹರಿಸುತ್ತಿರುವ ರಾಜ್ ಜ್ಯುವೆಲ್ಲರ್‍ಸ್ 28 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ನವೀಕೃತ ಮಳಿಗೆಯ ಶುಭಾರಂಭ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮೀ ಪೂಜೆ‌ ನ.13 ರಂದು ನಡೆಯಿತು.ಬೆಳಿಗ್ಗೆ ಪುರೋಹಿತ ಹರಿಪ್ರಸಾದ್ ಭಟ್ ಕೆದಿಲ ರವರ ಪೌರೋಹಿತ್ಯದಲ್ಲಿ ಪ್ರಾರ್ಥನೆಯೊಂದಿಗೆ ಧನಲಕ್ಷ್ಮೀ ಪೂಜೆ ನಡೆಯಿತು.


ನವೀಕೃತ ಮಳಿಗೆಯನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ಡಿಸೈನರ್ ಕಾಂಪ್ಲೆಕ್ಸ್’ನ ಮಾಲಕ ಜಯವಂತ್ ಭಟ್ಟ್, ನಗರ ಸಭಾ ಮಾಜಿ ಅಧ್ಯಕ್ಷ ಜೀವಂದರ್ ಜೈನ್, ನಿವೃತ್ತ ಸೇನಾಧಿಕಾರಿ ಸುರೇಶ್ ಆಚಾರ್ಯ, ವಿದ್ಯಾ ಬೋಧನಾ ಗುರು ಮೋಹನ ಆಚಾರ್ಯ, ಸುಧಾಕರ ಆಚಾರ್ಯ ಪರ್ಲಡ್ಕ, ವಿಜಿತ್ ಜ್ಯುವೆಲ್ಲರ್ಸ್’ನ ಮಾಲಕ ಅಚ್ಚುತ ಆಚಾರ್ಯ, ಆಶಾ ಜ್ಯುವೆಲರ್ಸ್’ನ ಮಾಲಕ ಸಂತೋಷ್ ಆಚಾರ್ಯ ಸೇರಿದಂತೆ ಗ್ರಾಹಕರು, ಹಿತೈಷಿಗಳು, ಸಮಾಜ ಬಾಂಧವರು ಹಾಗೂ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು.


ಸಂಸ್ಥೆಯ ಮಾಲಕ ರಾಜಶೇಖರ್ ಆಚಾರ್ಯ, ಮಾಲಕರ ಪತ್ನಿ ರೇಖಾ ರಾಜಶೇಖರ್ ಆಚಾರ್ಯ ಅತಿಥಿಗಳನ್ನು ಗ್ರಾಹಕರನ್ನು ಸ್ವಾಗತಿಸಿದರು. ಪುತ್ರರಾದ ರಿತ್ವಿಕ್ ಆಚಾರ್ಯ,‌ ರೂಪಕ್ ಆಚಾರ್ಯ ಸತ್ಕರಿಸಿದರು.ಉಮೇಶ್ ಕುಲಾಲ್, ಮನೀಶ್, ಪವನ್ ರಾಜ್, ಮನ್ವಿತ್, ಸೋಹಾನ್ ರಾಜ್, ಸುಕ್ಷಿತ್, ಸಿಬ್ಬಂದಿಗಳಾದ ಅಶ್ಮಿತ, ಸ್ವಾತಿ ಸಹಕರಿಸಿದರು.

ಶುಭಾರಂಭದ ವಿಶೇಷ ಕೊಡುಗೆ :
ರಾಜ್ ಜ್ಯುವೆಲ್ಲರ್‍ಸ್ ನವೀಕೃತಗೊಂಡು ಶುಭಾರಂಭಗೊಳ್ಳಲಿರುವ ಸಂದರ್ಭದಲ್ಲಿ ವಿಶೇಷ ಕೊಡುಗೆ ಆಯೋಜಿಸಿದೆ. ನ.13ರಿಂದ 2024ರ ಜ.5ರವರೆಗೆ ರೂ.10,000 ಮೊತ್ತದ ಚಿನ್ನಾಭರಣ ಖರೀದಿಯ ಮೇಲೆ ಕೂಪನ್ ಪಡೆದು ವಿಶೇಷ 2 ಚಿನ್ನದ ಉಂಗುರ ಗೆಲ್ಲುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here