ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಕುದ್ಮಾರು ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

0

ಕಾಣಿಯೂರು: ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುದ್ಮಾರು ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕಿರಿಯರ ವಿಭಾಗ(1-4) ದಲ್ಲಿ ಲಘು ಸಂಗೀತ ತೃಷಾ (4ನೇ ತರಗತಿ) ಪ್ರಥಮ, ಭಕ್ತಿ ಗೀತೆ ಹರ್ಷಿತ (4ನೇ ತರಗತಿ) ಪ್ರಥಮ, ಚಿತ್ರಕಲೆ ಚಾರ್ವಿ (4ನೇ ತರಗತಿ) ತೃತೀಯ, ಇಂಗ್ಲೀಷ್ ಕಂಠಪಾಠ ಮುಹಮ್ಮದ್ ಹಿಬತುಳ್ಳ (4ನೇ ತರಗತಿ) ದ್ವಿತೀಯ, ಅರೇಬಿಕ್ ಪಠಣ ಮುಹಮ್ಮದ್ ಹಿಬತುಳ್ಳ (4ನೇ ತರಗತಿ) ದ್ವಿತೀಯ, ಸಂಸ್ಕೃತ ಪಠಣ ಯಶಸ್ವಿ (4ನೇ ತರಗತಿ) ತೃತೀಯ ಹಾಗೂ ಹಿರಿಯರ ವಿಭಾಗ(5-7)ದಲ್ಲಿ ಅಭಿನಯ ಗೀತೆ ತೃಪ್ತಿ (7ನೇ ತರಗತಿ) ಪ್ರಥಮ, ಕಥೆ ಹೇಳುವುದು ಸಂಪ್ರೀತ್ (7ನೇ ತರಗತಿ) ದ್ವಿತೀಯ, ಸಂಸ್ಕೃತ ಪಠಣ ಅನ್ವಿತ್ ಬಿ.ಕೆ (7ನೇ ತರಗತಿ) ದ್ವಿತೀಯ, ಚಿತ್ರಕಲೆ ಧ್ಯಾನ್ (7ನೇ ತರಗತಿ) ದ್ವಿತೀಯ, ಭಕ್ತಿ ಗೀತೆ ಅನ್ವಿತ್ ಬಿ.ಕೆ (7ನೇ ತರಗತಿ) ತೃತೀಯ, ಕವನ ವಾಚನ ಫಾತಿಮತ್ ಸಹಲಾ (7ನೇ ತರಗತಿ) ತೃತೀಯ, ಕನ್ನಡ ಕಂಠಪಾಠ ಫಾತಿಮತ್ ಸಹಲಾ (7ನೇ ತರಗತಿ) ತೃತೀಯ, ಇಂಗ್ಲೀಷ್ ಕಂಠಪಾಠ ಧ್ಯಾನ್ (7ನೇ ತರಗತಿ) ತೃತೀಯ, ಲಘು ಸಂಗೀತ ತೃಪ್ತಿ (7ನೇ ತರಗತಿ) ತೃತೀಯ, ಛದ್ಮವೇಷ ಅದಿತಿ (6ನೇ ತರಗತಿ) ತೃತೀಯ, ಪ್ರೌಢಶಾಲಾ ವಿಭಾಗ ರಂಗೋಲಿಯಲ್ಲಿ ಚರಣ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here